ETV Bharat / sports

ಕೆಎಲ್​ ಶತಕ, ಶ್ರೇಯಸ್​​ ಫಿಫ್ಟಿ... ನ್ಯೂಜಿಲ್ಯಾಂಡ್​ ಗೆಲುವಿಗೆ 297ರನ್​ ಟಾರ್ಗೆಟ್​! - ನ್ಯೂಜಿಲ್ಯಾಂಡ್​

ಆರಂಭಿಕ ಕುಸಿತದ ನಡುವೆ ಕೂಡ ಕನ್ನಡಿಗ ಕೆಎಲ್​ ರಾಹುಲ್​ ಅವರ ಆಕರ್ಷಕ ಶತಕ ಹಾಗೂ ಶ್ರೇಯಸ್​ ಅಯ್ಯರ್​ ಅರ್ಧಶತಕದ ನೆರವಿನಿಂದ ಕಿವೀಸ್​ ಗೆಲುವಿಗೆ ಭಾರತ ಸ್ಮರ್ಧಾತ್ಮಕ ಟಾರ್ಗೆಟ್​ ನೀಡಿದೆ.

NZ vs IND, 3rd ODI
NZ vs IND, 3rd ODI
author img

By

Published : Feb 11, 2020, 11:33 AM IST

ಮೌಂಟ್​ ಮಾಂಗ್ನುಯಿ: ಆತಿಥೇಯ ನ್ಯೂಜಿಲ್ಯಾಂಡ್​ ವಿರುದ್ಧದ ಫೈನಲ್​ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​​ ನಡೆಸಿದ ಟೀಂ ಇಂಡಿಯಾ ಸ್ಮರ್ಧಾತ್ಮಕ ರನ್​ ಕಲೆ ಹಾಕಿದೆ. ಆರಂಭಿಕ ಆಘಾತದ ನಡುವೆ ಕೂಡ ಕನ್ನಡಿಗ ಕೆಎಲ್​ ರಾಹುಲ್​ ಹಾಗೂ ಶ್ರೇಯಸ್​ ಅಯ್ಯರ್​​ ಜೊತೆಯಾಟದ ಸಹಾಯದಿಂದ ಎದುರಾಳಿ ಪಡೆಗೆ 297ರನ್​ಗಳ ಟಾರ್ಗೆಟ್​ ನೀಡಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್​ ನಡೆಸಿದ ಭಾರತ ಮತ್ತೊಮ್ಮೆ ಕೆಟ್ಟ ಆರಂಭ ಪಡೆದುಕೊಳ್ತು. ಆರಂಭಿಕರಾದ ಮಯಾಂಕ್ ಅಗರ್ವಾಲ್ (1) ಸತತ ಮೂರನೇ ಪಂದ್ಯದಲ್ಲೂ ವೈಫಲ್ಯ ಅನುಭವಿಸಿದರು. ಇದರ ಬೆನ್ನಲ್ಲೇ ಕ್ಯಾಪ್ಟನ್​ ವಿರಾಟ್​​ ಕೊಹ್ಲಿ ವಿಕೆಟ್​ ಒಪ್ಪಿಸಿ ನಿರಾಸೆ ಮೂಡಿಸಿದ್ರು. ಹೀಗಾಗಿ ತಂಡ 6 ಓವರ್​ಗಳಲ್ಲಿ 32ರನ್​ಗಳಿಸಿ ಪ್ರಮುಖ ಎರಡು ವಿಕೆಟ್​ ಕಳೆದಕೊಳ್ತು.

ಈ ಬಳಕ ಒಂದಾದ ಪೃಥ್ವಿ ಶಾ-ಅಯ್ಯರ್​ ತಂಡಕ್ಕೆ ಆಸರೆಯಾದರು. ಆದರೆ 42ರನ್​ಗಳಿಸಿದ್ದ ವೇಳೆ ಶಾ ರನೌಟ್​ ಆದರು. ಆದರೆ ಅಮೋಘ ಫಾರ್ಮ್ ಮುಂದುವರಿಸಿದ ಶ್ರೇಯಸ್​​ ಆಕರ್ಷಕ ಅರ್ಧಶಕತ ಸಿಡಿಸಿ, ಕೆಎಲ್​ ರಾಹುಲ್​ಗೆ ಉತ್ತಮ ಸಾಥ್​ ನೀಡಿದರು. 62ರನ್​ಗಳಿಸಿದ್ದ ವೇಳೆ ಅಯ್ಯರ್​ ವಿಕೆಟ್​ ಒಪ್ಪಿಸಿ ನಿರಾಸೆ ಮೂಡಿಸಿದ್ರೆ, ರಾಹುಲ್ ತಮ್ಮ ಫಾರ್ಮ್​ ಮುಂದುವರಿಸಿದ್ರು. ಇವರಿಗೆ ಮತ್ತೋರ್ವ ಕನ್ನಡಿಗ ಮನೀಷ್​ ಸಾಥ್​ ನೀಡಿದರು. ಇದೇ ವೇಳೆ ರಾಹುಲ್​​​ ಏಕದಿನ ಕ್ರಿಕೆಟ್​​ನಲ್ಲಿ 4ಶತಕ ಸಿಡಿಸಿ ಮಿಂಚಿದರು. 112ರನ್​ಗಳಿಸಿದ್ದ ವೇಳೆ ವಿಕೆಟ್​ ಒಪ್ಪಿಸಿದ್ರೆ, ಇವರ ಬೆನ್ನಲ್ಲೇ ಮನೀಷ್​ ಪಾಂಡೆ(42ರನ್​)ವಿಕೆಟ್​ ನೀಡಿದರು.

ಕೊನೆಯದಾಗಿ ಟೀಂ ಇಂಡಿಯಾ 50 ಓವರ್​​ಗಳಲ್ಲಿ 7ವಿಕೆಟ್​ ಕಳೆದುಕೊಂಡು 296ರನ್​ಗಳಿಕೆ ಮಾಡಿದ್ದು, ಕಿವೀಸ್​ ಗೆಲುವಿಗೆ 297ರನ್​ ಗುರಿ ನೀಡಿದೆ. ನ್ಯೂಜಿಲ್ಯಾಂಡ್​ ತಂಡದ ಪರ ಹಮ್ಮಿಸ್ಸ್ ಬೆನಿಟ್​ 4ವಿಕೆಟ್​, ಜೆಮ್ಸನ್​​ 1 ಹಾಗೂ ನೆಸ್ಸಮ್​ 1ವಿಕೆಟ್​ ಪಡೆದುಕೊಂಡರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.