ಹ್ಯಾಮಿಲ್ಟನ್: ನ್ಯೂಜಿಲ್ಯಾಂಡ್ ವಿರುದ್ಧ ಇಂದಿನಿಂದ ಮೂರು ಏಕದಿನ ಪಂದ್ಯಗಳ ಕ್ರಿಕೆಟ್ ಸರಣಿ ಆರಂಭಗೊಂಡಿದ್ದು, ಮೊದಲ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲ್ಯಾಂಡ್ ಪಡೆ ಬೌಲಿಂಗ್ ಆಯ್ದುಕೊಂಡಿದೆ.
ಹ್ಯಾಮಿಲ್ಟನ್ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದಿರುವ ನ್ಯೂಜಿಲೆಂಡ್ ನಾಯಕ ಟಾಮ್ ಲೇಥಮ್ ಮೊದಲು ಫೀಲ್ಡಿಂಗ್ ಮಾಡಲು ನಿರ್ಧರಿಸಿದ್ದಾರೆ. ಕರ್ನಾಟಕದ ಮಯಾಂಕ್ ಅಗರ್ವಾಲ್ ಮತ್ತು ಉದಯೋನ್ಮುಖ ಪೃಥ್ವಿ ಶಾ, ಏಕದಿನ ಕ್ರಿಕೆಟ್‌ಗೆ ಡೆಬ್ಯು ಮಾಡುತ್ತಿದ್ದಾರೆ. ಈ ಮೂಲಕ ಒಂದೇ ಪಂದ್ಯದಲ್ಲಿ ಇಬ್ಬರು ಆರಂಭಿಕರು ಪಾದಾರ್ಪಣೆ ಮಾಡುತ್ತಿರುವ ವಿಶೇಷ ದಾಖಲೆಗೆ ಪಾತ್ರವಾಗಿದ್ದಾರೆ.
ಐದು ಟಿ-20 ಪಂದ್ಯಗಳ ಕ್ರಿಕೆಟ್ ಸರಣಿಯಲ್ಲಿ ಟೀಂ ಇಂಡಿಯಾ ಈಗಾಗಲೇ 5-0 ಅಂತರದ ಗೆಲುವು ಪಡೆದುಕೊಂಡಿದ್ದು, ಏಕದಿನ ಸರಣಿಯಲ್ಲೂ ತನ್ನ ಪಾರಮ್ಯ ಮೆರೆಯುವ ಉತ್ಸುಕದಲ್ಲಿದೆ.ಇನ್ನು ಇದೇ ಮೊದಲ ಬಾರಿಗೆ ಏಕದಿನ ಪಂದ್ಯದಲ್ಲಿ ಪೃಥ್ವಿ ಶಾ ಹಾಗೂ ಕನ್ನಡಿಗ ಮಯಾಂಕ್ ಅಗರವಾಲ್ ಆರಂಭಿಕರಾಗಿ ಇನ್ನಿಂಗ್ಸ್ ಆರಂಭಿಸುತ್ತಿದ್ದು, ಅವರ ಮುಂದಿನ ಕ್ರಿಕೆಟ್ ಭವಿಷ್ಯಕ್ಕೆ ನಾದಿ ಹಾಡಲಿದೆ.
ಆಡುವ 11ರ ಬಳಗ
ಟೀಂ ಇಂಡಿಯಾ: ಪೃಥ್ವಿ ಶಾ,ಮಯಾಂಕ್ ಅಗರವಾಲ್,ವಿರಾಟ್ ಕೊಹ್ಲಿ(ಕ್ಯಾಪ್ಟನ್),ಶ್ರೇಯಸ್ ಅಯ್ಯರ್,ಕೆಎಲ್ ರಾಹುಲ್(ವಿ.ಕೀ),ಕೇದಾರ್ ಜಾಧವ್,ರವೀಂದ್ರ ಜಡೇಜಾ,ಶಾರ್ದೂಲ್ ಠಾಕೂರ್,ಮೊಹಮ್ಮದ್ ಶಮಿ,ಕುಲ್ದೀಪ್ ಯಾದವ್,ಜಸ್ಪ್ರೀತ್ ಬುಮ್ರಾ
ನ್ಯೂಜಿಲೆಂಡ್: ಮಾರ್ಟಿನ್ ಗಪ್ಟಿಲ್, ಹೆನ್ರಿ ನಿಕೂಲಸ್,ಥಾಮ್ ಲಾಥಮ್(ಕ್ಯಾಪ್ಟನ್),ಥಾಮ್ ಬ್ಲಂಡೆಲ್,ರಾಸ್ ಟೇಲರ್,ಜೇಮ್ಸ್ ನಿಸ್ಸಮ್, ಗ್ರ್ಯಾಂಡ್ಹೊಮ್,ಸ್ಯಾಟ್ನರ್,ಥೀಮ್ ಸೌಥಿ,ಇಶಾ ಶೋಧಿ, ಹಿಮಿಶ್ ಬೆನಿಟ್