ETV Bharat / sports

ಚೇಸಿಂಗ್ ವೇಳೆ ಗರಿಷ್ಠ ರನ್ : ವಿಶ್ವ ದಾಖಲೆ ಬರೆದ ಪಾಕ್‌ನ ಫಖರ್ ಝಮಾನ್

author img

By

Published : Apr 5, 2021, 4:26 PM IST

ವಾಟ್ಸನ್ 2011ರಲ್ಲಿ ಬಾಂಗ್ಲಾದೇಶದ ವಿರುದ್ಧ 185 ರನ್​ಗಳಿಸಿದ್ದರು. ಝಮಾನ್ ಇದೇ ವೇಳೆ ಜೋಹನ್ಸ್​ ಬರ್ಗ್​ನಲ್ಲಿ ಗರಿಷ್ಠ ರನ್​ಗಳಿಸಿದ ಬ್ಯಾಟ್ಸ್​ಮನ್​ ಎಂಬ ಖ್ಯಾತಿಗೂ ಪಾತ್ರರಾದರು. ಈ ಹಿಂದೆ ಹರ್ಷೆಲ್ಸ್​ ಗಿಬ್ಸ್​ ಆಸ್ಟ್ರೇಲಿಯಾ ವಿರುದ್ಧ 177 ರನ್​ಗಳಿಸಿದ್ದು ದಾಖಲೆಯಾಗಿತ್ತು..

ವಿಶ್ವ ದಾಖಲೆ ಬರೆದ ಪಾಕಿಸ್ತಾನದ ಫಖರ್ ಝಮಾನ್
ವಿಶ್ವ ದಾಖಲೆ ಬರೆದ ಪಾಕಿಸ್ತಾನದ ಫಖರ್ ಝಮಾನ್

ಜೋಹನ್ಸ್​ ಬರ್ಗ್​ : ಪಾಕಿಸ್ತಾನದ ಫಖರ್​ ಝಮಾನ್ ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಪಂದ್ಯದಲ್ಲಿ 193 ರನ್​ಗಳಿಸುವ ಮೂಲಕ ಚೇಸಿಂಗ್ ವೇಳೆ ಗರಿಷ್ಠ ರನ್​ ಬಾರಿಸಿದ ಬ್ಯಾಟ್ಸ್​ಮನ್ ಎಂಬ ವಿಶ್ವದಾಖಲೆಗೆ ಪಾತ್ರರಾಗಿದ್ದಾರೆ.

ಭಾನುವಾರ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ನೀಡಿದ 342 ರನ್​ಗಳ ಗುರಿ ಬೆನ್ನತ್ತಿದ ಪಾಕಿಸ್ತಾನ 324 ರನ್​ಗಳಿಸಲಷ್ಟೇ ಶಕ್ತವಾಗಿ 17 ರನ್​​ಗಳಿಂದ ಸೋಲುಂಡಿತು. ಫಖರ್ ಝಮಾನ್ 155 ಎಸೆತಗಳಲ್ಲಿ 18 ಬೌಂಡರಿ ಮತ್ತು 10 ಸಿಕ್ಸರ್​ಗಳ ನೆರವಿನಿಂದ 193 ರನ್​ಗಳಿಸಿ ನಡೆಸಿದ ಹೋರಾಟ ವ್ಯರ್ಥವಾಯಿತು. ಆದರೆ, ಏಕದಿನ ಕ್ರಿಕೆಟ್​ನಲ್ಲಿ ಝಮಾನ್ ವಿಶ್ವದಾಖಲೆ ಬರೆದರು.

30 ವರ್ಷದ ಆಟಗಾರ ವಾಟ್ಸನ್​ ಹೆಸರಿನಲ್ಲಿ ಚೇಸಿಂಗ್​ ವೇಳೆ ಗರಿಷ್ಠ ರನ್​ ಬಾರಿಸಿದ ಬ್ಯಾಟ್ಸ್​ಮನ್ ಎಂಬ ದಾಖಲೆ ಬ್ರೇಕ್​ ಮಾಟಿದರು. ವಾಟ್ಸನ್ 2011ರಲ್ಲಿ ಬಾಂಗ್ಲಾದೇಶದ ವಿರುದ್ಧ 185 ರನ್​ಗಳಿಸಿದ್ದರು. ಝಮಾನ್ ಇದೇ ವೇಳೆ ಜೋಹನ್ಸ್​ ಬರ್ಗ್​ನಲ್ಲಿ ಗರಿಷ್ಠ ರನ್​ಗಳಿಸಿದ ಬ್ಯಾಟ್ಸ್​ಮನ್​ ಎಂಬ ಖ್ಯಾತಿಗೂ ಪಾತ್ರರಾದರು. ಈ ಹಿಂದೆ ಹರ್ಷೆಲ್ಸ್​ ಗಿಬ್ಸ್​ ಆಸ್ಟ್ರೇಲಿಯಾ ವಿರುದ್ಧ 177 ರನ್​ಗಳಿಸಿದ್ದು ದಾಖಲೆಯಾಗಿತ್ತು.

ಚೇಸಿಂಗ್ ವೇಳೆ ಗರಿಷ್ಠ ರನ್​ಗಳಿಸಿದ ಬ್ಯಾಟ್ಸ್​ಮನ್​ಗಳು

  • ಫಖರ್ ಝಮಾನ್ vs ದಕ್ಷಿಣ ಆಫ್ರಿಕಾ 193
  • ಶೇನ್ ವಾಟ್ಸನ್​ vs ಬಾಂಗ್ಲಾದೇಶದ 185
  • ಮಹೇಂದ್ರ ಸಿಂಗ್ ಧೋನಿ vs ಶ್ರೀಲಂಕಾ 183
  • ವಿರಾಟ್ ಕೊಹ್ಲಿ vs ಪಾಕಿಸ್ತಾನ 183

ದಕ್ಷಿಣ ಆಫ್ರಿಕಾ ನೆಲದಲ್ಲಿ ಗರಿಷ್ಠ ನ್​ ಬಾರಿಸಿದ ಬ್ಯಾಟ್ಸ್​ಮನ್​

  • ಫಖರ್ ಝಮಾನ್ 193
  • ಫಾಫ್ ಡು ಫ್ಲೆಸಿಸ್​ 185
  • ಕ್ವಿಂಟನ್ ಡಿ ಕಾಕ್ 178
  • ಎಬಿಡಿ ವಿಲಿಯರ್ಸ್​ 176

ETV Bharat Logo

Copyright © 2024 Ushodaya Enterprises Pvt. Ltd., All Rights Reserved.