ETV Bharat / sports

ಟಿ20 ವಿಶ್ವಕಪ್​ನಲ್ಲಿ ಆರಂಭಿಕನಾಗಿ ಕಣಕ್ಕಿಳಿಯುವುದರ ಬಗ್ಗೆ ಕೊಹ್ಲಿ ಹೀಗಂತಾರೆ.. - ಏಕದಿನ ಸರಣಿಯ ಬಗ್ಗೆ ವಿರಾಟ್ ಕೊಹ್ಲಿ

ಟಿ20 ವಿಶ್ವಕಪ್​ ಹತ್ತಿರ ಬರುತ್ತಿದ್ದಂತೆ ನಾವು ಇದರ ಬಗ್ಗೆ ಮಾತುಕತೆ ನಡೆಸುತ್ತೇವೆ. ನಾನು ಐಪಿಎಲ್​ನಲ್ಲಿ ಆರಂಭಿಕನಾಗಿ ಹೇಗೆ ಆಡಲಿದ್ದೇನೆ ಎಂಬುದು ತುಂಬಾ ಆಸಕ್ತಿಕರವಾಗಿದೆ..

ರೋಹಿತ್ ಶರ್ಮಾ -ವಿರಾಟ್ ಕೊಹ್ಲಿ
ರೋಹಿತ್ ಶರ್ಮಾ -ವಿರಾಟ್ ಕೊಹ್ಲಿ
author img

By

Published : Mar 22, 2021, 11:02 PM IST

ಪುಣೆ : ಮುಂಬೈ ಇಂಡಿಯನ್ಸ್​ ತಂಡದ ಸೂರ್ಯಕುಮಾರ್ ಯಾದವ್​ ಇದೇ ರೀತಿ ಬ್ಯಾಟಿಂಗ್ ಮಾಡಿದರೆ ತಾವು ಯಾವುದೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಸಿದ್ಧವೆಂದು ಸೋಮವಾರ ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ತಿಳಿಸಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಕೊಹ್ಲಿ, ಟಿ20 ವಿಶ್ವಕಪ್​ ಹತ್ತಿರ ಬರುತ್ತಿದ್ದಂತೆ ಭಾರತ ತಂಡದ ಸಂಪೂರ್ಣ ಸಂಯೋಜನೆಯ ಚಿತ್ರಣ ಹೊರಬರಲಿದೆ. ಈಗಿನ ಪ್ರಯೋಗಗಳನ್ನು ತಾತ್ಕಾಲಿಕವಷ್ಟೇ ಎಂದಿದ್ದಾರೆ.

"ಮೊದಲಿಗೆ ಭಾರತ ತಂಡದ ಆಯ್ಕೆಯಲ್ಲಿ ಟೀಂ ಮ್ಯಾನೇಜ್​ಮೆಂಟ್ ಪಾತ್ರವಿರುವುದಿಲ್ಲವೋ ಹಾಗೆಯೇ, ಮೈದಾನದಲ್ಲಿ ಆಡುವ ಸಂಯೋಜನೆಯಲ್ಲಿ ಆಯ್ಕೆಗಾರರು ಯಾವುದೇ ಪಾತ್ರವನ್ನು ಹೊಂದಿರುವುದಿಲ್ಲ(ಕ್ರಮಾಂಕ ಬದಲಾವಣೆಯ ಬಗ್ಗೆ), ಎರಡನೆಯದಾಗಿ ರೋಹಿತ್ ಹೇಳಿದಂತೆ ಇದು ತಂಡದ ಕಾರ್ಯತಂತ್ರದ ನಡೆಯಾಗಿದೆ.

ನಾವಿಬ್ಬರು ಆರಂಭಿಕರಾಗಿ ಕೊನೆಯ ಟಿ20 ಪಂದ್ಯದಲ್ಲಿ ಒಟ್ಟಿಗೆ ಬ್ಯಾಟಿಂಗ್ ಮಾಡುವ ಮೂಲಕ ಆನಂದಿಸಿದ್ದೇವೆ. ಆದರೆ, ಭವಿಷ್ಯದಲ್ಲಿ ಇದನ್ನು ಮುಂದುವರಿಸಲಾಗುವುದು ಎಂಬುದರ ಬಗ್ಗೆ ಖಾತ್ರಿಯಿಲ್ಲ" ಎಂದು ಕೊಹ್ಲಿ ತಿಳಿಸಿದ್ದಾರೆ.

ಇದನ್ನು ಓದಿ:ಇಂಗ್ಲೆಂಡ್ v/s ಭಾರತ ODI : ಸಚಿನ್, ಪಾಂಟಿಂಗ್ ದಾಖಲೆ ಸರಿಗಟ್ಟಲಿದ್ದಾರೆ ಕಿಂಗ್‌ ಕೊಹ್ಲಿ

ಆದರೆ, ಐಪಿಎಲ್​ನಲ್ಲಿ ನಾನು ಆರ್​ಸಿಬಿ ತಂಡದಲ್ಲಿ ಆರಂಭಿಕನಾಗಿ ಆಡಲಿದ್ದೇನೆ. ನಾನು ಈ ಹಿಂದೆ 3,4ನೇ ಕ್ರಮಾಂಕದಲ್ಲಿ ಆಡಿದ್ದೇನೆ. ಈಗ ನಾನು ಆರಂಭಿಕನಾಗಿ ನನ್ನ ಪಾತ್ರವೇನು ಎಂಬುದನ್ನು ಅರ್ಥ ಮಾಡಿಕೊಂಡಿದ್ದೇನೆ. ನಾನು ಈ ಹಿಂದೆಯೇ ಆರಂಭಿಕನಾಗಿ ಯಶಸ್ವಿಯಾಗಿದ್ದೇನೆ.

ಇದೀಗ ಸೂರ್ಯಕುಮಾರ್​ ಆಟಗಾರರಿಗೆ ಆಯ್ಕೆ ಮಾಡಿಕೊಡಬೇಕಿದೆ. ಒಂದು ವೇಳೆ ಅವರು ಇದೇ ರೀತಿಯ ಪ್ರದರ್ಶನವನ್ನು ಮುಂದುವರಿಸಿದರೆ, ತಂಡ ಬಯಸಿದ ಯಾವುದೇ ಜವಾಬ್ದಾರಿಯನ್ನು ನಿರ್ವಹಿಸಲು ನಾನು ಸಿದ್ಧನಿದ್ದೇನೆ.

ಟಿ20 ವಿಶ್ವಕಪ್​ ಹತ್ತಿರ ಬರುತ್ತಿದ್ದಂತೆ ನಾವು ಇದರ ಬಗ್ಗೆ ಮಾತುಕತೆ ನಡೆಸುತ್ತೇವೆ. ನಾನು ಐಪಿಎಲ್​ನಲ್ಲಿ ಆರಂಭಿಕನಾಗಿ ಹೇಗೆ ಆಡಲಿದ್ದೇನೆ ಎಂಬುದು ತುಂಬಾ ಆಸಕ್ತಿಕರವಾಗಿದೆ ಎಂದು ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.