ಮ್ಯಾಂಚೆಸ್ಟರ್: ಎಲ್ಲ ಮಾದರಿಯ ಕ್ರಿಕೆಟ್ನಲ್ಲಿ ಪಾಕಿಸ್ತಾನ ಬ್ಯಾಟ್ಸ್ಮನ್ ಉತ್ತಮ ಪ್ರದರ್ಶನ ತೋರುತ್ತಿದ್ದರು ಬಾಬರ್ ಅಜಮ್ಗೆ ವಿಶ್ವಕ್ರಿಕೆಟ್ ವೇದಿಕೆಯಲ್ಲಿ ಸಿಗಬೇಕಾದ ಮನ್ನಣೆ ಸಿಗುತ್ತಿಲ್ಲ ಎಂದು ಇಂಗ್ಲೆಂಡ್ ತಂಡದ ಮಾಜಿ ನಾಯಕ ನಾಸಿರ್ ಹುಸೇನ್ ಬೇಸರ ವ್ಯಕ್ತಪಡಿಸಿದ್ದಾರೆ.
ಪಾಕಿಸ್ತಾನದ 25 ವರ್ಷದ ಯುವ ಬ್ಯಾಟ್ಸ್ಮನ್ ನಾಸಿರ್ ಹುಸೇನ್ ಕಳೆದ 8 ಟೆಸ್ಟ್ ಪಂದ್ಯಗಳಿಂದ 104, 97, 08, 102, 60,100* ,143 ಹಾಗೂ ನಿನ್ನೆಯ ಪಂದ್ಯದಲ್ಲಿ ಔಟಾಗದೇ 69 ರನ್ಗಳಿಸಿದ್ದಾರೆ.
ಬುಧವಾರ ಇಂಗ್ಲೆಂಡ್ ವಿರುದ್ಧ ಆರಂಭವಾಗಿರುವ ಪಂದ್ಯದಲ್ಲಿ ಬಾಬರ್, ಜೇಮ್ಸ್ ಆ್ಯಂಡರ್ಸನ್, ಸ್ಟುವರ್ಟ್ ಬ್ರಾಡ್, ಜೋಫ್ರಾ ಆರ್ಚರ್, ಕ್ರಿಸ್ ವೋಕ್ಸ್ ಅಂತಹ ಉತ್ತಮ ಬೌಲರ್ಗಳಿಗೆ ಅದ್ಭುತವಾಗಿ ಬ್ಯಾಟಿಂಗ್ ಮಾಡಿದ್ದಾರೆ. ಆದರೆ, ಬಾಬರ್ ಸಾಮರ್ಥ್ಯವನ್ನು ಮೆಚ್ಚಿ ಹೆಚ್ಚಿನ ಜನರು ಮಾತನಾಡುತ್ತಿಲ್ಲ. ಅದೇ ಈ ಸಾಧನೆ ವಿರಾಟ್ ಕೊಹ್ಲಿ ಮಾಡಿದ್ದರೆ ಪ್ರತಿಯೊಬ್ಬರು ಮಾತನಾಡುತ್ತಿದ್ದರು ಎಂದು ನಾಸಿರ್ ಬೇಸರ ವ್ಯಕ್ತಪಡಿಸಿದ್ದಾರೆ.
" ಈ ಹುಡುಗ ವಿರಾಟ್ ಕೊಹ್ಲಿ ಆಗಿದ್ದರೆ, ಎಲ್ಲರೂ ಈತನ ಸಾಧನೆ ಬಗ್ಗೆ ಮಾತನಾಡುತ್ತಿದ್ದರು. ಆದರೆ, ಅವನು ಬಾಬರ್ ಅಜಮ್ ಆಗಿರುವುದರಿಂದ ಯಾರೂ ಇವನ ಬಗ್ಗೆ ಮಾತನಾಡುವುದಿಲ್ಲ" ಎಂದು ಅವರು ಹೇಳಿದ್ದಾರೆ.
ಇದರ ಜೊತೆಗೆ ಹುಸೇನ್ ಪ್ರಸ್ತುತ ಕ್ರಿಕೆಟ್ನ ಫ್ಯಾಬ್ 4( ಕೊಹ್ಲಿ, ಸ್ಮಿತ್ ರೂಟ್, ವಿಲಿಯಮ್ಸನ್) ಆಟಗಾರರ ಲಿಸ್ಟ್ ಫ್ಯಾಬ್ 5 ಆಗಿ ಬದಲಾಗಬೇಕಿದೆ. ಬಾಬರ್ ಆಗ್ರ 5 ಬ್ಯಾಟ್ಸ್ಮನ್ಗಳ ಸಾಲಿಗೆ ಸೇರಿದ್ದಾರೆ ಎಂದು ಹುಸೇನ್ ಅಭಿಪ್ರಾಯಪಟ್ಟಿದ್ದಾರೆ.
ಬುಧವಾರ ಆರಂಭವಾದ ಮೊದಲ ಟೆಸ್ಟ್ನಲ್ಲಿ ಪಾಕಿಸ್ತಾನ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿತ್ತು. ಆದರೆ 43 ರನ್ಗಳಿಸುವಷ್ಟರಲ್ಲಿ 2 ವಿಕೆಟ್ ಕಳೆದುಕೊಂಡು ಆಘಾತಕ್ಕೊಳಗಾಯಿತು. ಅಬಿದ್ ಅಲಿ 14 ಹಾಗೂ ನಾಯಕ ಅಜರ್ ಅಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದರು. ಈ ಸಂದರ್ಭದಲ್ಲಿ ಶಾನ್ ಮಸೂದ್(46) ಜೊತೆ ಒಂದಾದ ಬಾಬರ್ ಅಜಮ್(69) ಮೂರನೇ ವಿಕೆಟ್ 97 ರನ್ ಸೇರಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.