ETV Bharat / sports

ರಾಣಾ, ತ್ರಿಪಾಠಿ ಸ್ಫೋಟಕ ಅರ್ಧಶತಕ: ಹೈದರಾಬಾದ್​ಗೆ 188 ರನ್​ಗಳ ಟಾರ್ಗೆಟ್ ನೀಡಿದ ಕೆಕೆಆರ್​

ಐಪಿಎಲ್​ 14ರ 3ನೇ ಪಂದ್ಯದಲ್ಲಿ ನಿತೀಶ್ ರಾಣ ಮತ್ತು ರಾಹುಲ್​ ತ್ರಿಪಾಠಿಯ ಅರ್ಧಶತಕದ ನೆರವಿನಿಂದ ಸನ್​ರೈಸರ್ಸ್​ ಹೈದರಾಬಾದ್ ತಂಡ 187ರನ್​ಗಳ ಸ್ಪರ್ಧಾತ್ಮಕ ಮೊತ್ತ ದಾಖಲಿಸಿದೆ.

ಕೋಲ್ಕತ್ತಾ ನೈಟ್ ರೈಡರ್ಸ್ vs ಸನ್​ರೈಸರ್ಸ್​
ಕೋಲ್ಕತ್ತಾ ನೈಟ್ ರೈಡರ್ಸ್ vs ಸನ್​ರೈಸರ್ಸ್​
author img

By

Published : Apr 11, 2021, 9:19 PM IST

ಚೆನ್ನೈ: ನಿತೀಶ್ ರಾಣಾ ಮತ್ತು ರಾಹುಲ್ ತ್ರಿಪಾಠಿ ಅವರ ಭರ್ಜರಿ ಅರ್ಧಶತಕದ ನೆರವಿನಿಂದ ಕೋಲ್ಕತ್ತಾ ನೈಟ್​ ರೈಡರ್ಸ್​ 20 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು 187 ರನ್​ಗಳಿಸಿದೆ.

ಟಾಸ್​ ಸೋತು ಬ್ಯಾಟಿಂಗ್ ಇಳಿಯಲ್ಪಟ್ಟ ಕೆಕೆಆರ್ ತಂಡಕ್ಕೆ ಶುಬ್ಮನ್ ಗಿಲ್ ಮತ್ತು ನಿತೀಶ್​ ರಾಣಾ ಮೊದಲ ವಿಕೆಟ್​ಗೆ 53ರನ್​ಗಳ ಜೊತೆಯಾಟ ನೀಡಿದರು. ಆದರೆ ಗಿಲ್​ 13 ಎಸೆತಗಳಲ್ಲಿ 15 ರನ್​ಗಳಿಸಿ ರಶೀದ್ ಬೌಲಿಂಗ್​ನಲ್ಲಿ ಬೌಲ್ಡ್​ ಆದರು.

ಎರಡನೇ ವಿಕೆಟ್​ಗೆ ರಾಣಾ ಜೊತೆಗೂಡಿದ ರಾಹುಲ್ ತ್ರಿಪಾಠಿ(53) ಹೈದರಾಬಾದ್​ ಬೌಲರ್​ಗಳನ್ನು ಮನಬಂದಂತೆ ದಂಡಿಸಿದರು. ಈ ಜೋಡಿ ಕೇವಲ 50 ಎಸೆತಗಳಲ್ಲಿ 93 ಸೂರೆಗೈದರು. 29 ಎಸೆತಗಳಲ್ಲಿ ತ್ರಿಪಾಠಿ 2 ಸಿಕ್ಸರ್​ ಮತ್ತು 5 ಬೌಂಡರಿ ಸಹಿತ 53 ರನ್​ಗಳಿಸಿ ನಟರಾಜನ್​ಗೆ ವಿಕೆಟ್​ ಒಪ್ಪಿಸಿದರು.

ಈ ಜೋಡಿ ಬೇರ್ಪಡುತ್ತಿದ್ದಂತೆ ದಿಢೀರ್ ಕುಸಿತ ಕಂಡ ಕೆಕೆಆರ್​ 14 ರನ್​ಗಳ ಅಂತರದಲ್ಲಿ ರಾಣಾ ಸೇರಿದಂತೆ 3 ವಿಕೆಟ್​ ಕಳೆದುಕೊಂಡಿತು. ರಸೆಲ್​ 5, ಮಾರ್ಗನ್​ 2 ರನ್​ಗಳಿ ವಿಕೆಟ್ ಒಪ್ಪಿಸಿ ನಿರಾಶೆಯನುಭವಿಸಿದರು. ರಾಣಾ 56 ಎಸೆತಗಳಲ್ಲಿ 9 ಬೌಂಡರಿ ಮತ್ತು 4 ಸಿಕ್ಸರ್​ ಸಹಿತ 80 ರನ್​ಗಳಿಸಿ ನಬಿ ಬೌಲಿಂಗ್​ನಲ್ಲಿ ಔಟಾದರು.

ಕೊನೆಯಲ್ಲಿ ಅಬ್ಬರಿಸಿದ ದಿನೇಶ್ ಕಾರ್ತಿಕ್ ಕೇವಲ 9 ಎಸೆತಗಳಲ್ಲಿ 2 ಬೌಂಡರಿ ಮತ್ತು 1 ಸಿಕ್ಸರ್​ ಸೇರಿದಂತೆ 22 ರನ್​ಗಳಿಸಿ ತಂಡದ ಮೊತ್ತವನ್ನು ಹೆಚ್ಚಿಸಿದರು. ಒಟ್ಟಾರೆ 20 ಓವರ್​ಗಳಲ್ಲಿ ಕೆಕೆಆರ್​ 6 ವಿಕೆಟ್ ಕಳೆದುಕೊಂಡು 187ರನ್​ಗಳ ಸ್ಪರ್ಧಾತ್ಮಕ ಮೊತ್ತ ದಾಖಲಿಸಿತು.

ಹೈದರಾಬಾದ್ ಪರ ರಶೀದ್ ಖಾನ್ 24ಕ್ಕೆ 2, ಮೊಹಮ್ಮದ್ ನಬಿ 32 ಕ್ಕೆ 2, ನಟರಾಜನ್​ 37ಕ್ಕೆ1 ಮತ್ತು ಭುವನೇಶ್ವರ್​ 45ಕ್ಕೆ 1 ವಿಕೆಟ್ ಪಡೆದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.