ETV Bharat / sports

ಫ್ಲ್ಯಾಶ್​​​ ಬ್ಯಾಕ್​: 28 ವರ್ಷದ ಬಳಿಕ ವಿಶ್ವಕಪ್​ ಗೆದ್ದು ಬೀಗಿತ್ತು ಭಾರತ, ಇಂದಿಗೆ 9 ವರ್ಷ! - ಟೀಂ ಇಂಡಿಯಾ

ಧೋನಿ ನೇತೃತ್ವದ ಟೀಂ ಇಂಡಿಯಾ ಏಕದಿನ ವಿಶ್ವಕಪ್​​​ ಗೆದ್ದು ಇಂದಿಗೆ 9 ವರ್ಷ. ಆ ದಿನ ಭಾರತೀಯರ ಪಾಲಿಗೆ ಎಂದಿಗೂ ಮರೆಯಲು ಅಸಾಧ್ಯ.

Nine years ago, India lifted its second ODI WC

author img

By

Published : Apr 2, 2020, 9:14 AM IST

Updated : Apr 2, 2020, 9:56 AM IST

ಮುಂಬೈ: ಏಪ್ರಿಲ್​ 2,2011 ಭಾರತದ ಇತಿಹಾಸದಲ್ಲಿ ಅಚ್ಚಳಿಯದೇ ಉಳಿದ ದಿನ. ಭಾರತೀಯ ಕ್ರಿಕೆಟಿಗರ ಪಾಲಿಗೆ ಅಂತೂ ಈ ದಿನ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ಸುದಿನ. ಬರೋಬ್ಬರಿ 28 ವರ್ಷಗಳ ಬಳಿಕ ಧೋನಿ ನಾಯಕತ್ವದಲ್ಲಿ ಟೀಂ ಇಂಡಿಯಾ ಎರಡನೇ ಬಾರಿಗೆ ವಿಶ್ವಕಪ್​ಗೆ ಮುತ್ತಿಕ್ಕಿತ್ತು.

2011 ಏಪ್ರಿಲ್‌ 2 ರಂದು ಮುಂಬೈನ ವಾಂಖೇಡೆ ಕ್ರೀಡಾಂಗಣದಲ್ಲಿ ಈ ಐತಿಹಾಸಿಕ ಘಟನೆ ನಡೆದು ಇಂದಿಗೆ ಬರೋಬ್ಬರಿ 9 ವರ್ಷ. ಇಂದಿಗೂ ಕ್ರಿಕೆಟ್ ಅಭಿಮಾನಿಗಳ ಹೃದಯದಲ್ಲಿ ಶಾಶ್ವತವಾಗಿ ಪ್ರತಿಧ್ವನಿಸುತ್ತದೆ.

ಶ್ರೀಲಂಕಾ ವಿರುದ್ಧ ನಡೆದಿದ್ದ ಫೈನಲ್​ ಪಂದ್ಯದಲ್ಲಿ 275ರನ್​ಗಳ ಗುರಿ ಬೆನ್ನತ್ತಿದ್ದ ಟೀಂ ಇಂಡಿಯಾ ಆರಂಭದಲ್ಲೇ ಸೆಹ್ವಾಗ್​​ ವಿಕೆಟ್​ ಬೇಗ ಕಳೆದುಕೊಂಡಿದ್ದರೂ ಗೌತಮ್​ ಗಂಭೀರ್​ ಕ್ಯಾಪ್ಟನ್​ ಮಹೇಂದ್ರ ಸಿಂಗ್​ ಧೋನಿ ಜೊತೆಯಾಟ ಭಾರತಕ್ಕೆ ಮತ್ತೊಂದು ವಿಶ್ವಕಪ್​ ತಂದಿಟ್ಟಿತ್ತು. 99ರನ್​ಗಳಿಸಿದ್ದ ಗಂಭೀರ್​ ಹಾಗೂ ಧೋನಿ ಅಜೇಯ 91ರನ್​ ಬಾರಿಸಿ, ಕೊನೆಯದಾಗಿ ಸಿಕ್ಸರ್​ ಸಿಡಿಸಿ ಎಲ್ಲರ ಮನದಲ್ಲಿ ಹಸಿರಾಗಿ ಉಳಿಯುವಂತೆ ಮಾಡಿದ್ದರು. 6 ವಿಕೆಟ್​ಗಳೊಂದಿಗೆ ಭರ್ಜರಿ ಜಯ ಸಾಧಿಸಿದ್ದ ಟೀಂ ಇಂಡಿಯಾ ಎರಡನೇ ಬಾರಿ ವಿಶ್ವಕಪ್ ಎತ್ತಿ ಹಿಡಿದಿತ್ತು.

Yuvi
ಯುವರಾಜ್​ ಸಿಂಗ್​​

ಫೈನಲ್ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ತೋರಿದ ಧೋನಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಹಾಗೂ ಟೂರ್ನಿಯುದ್ದಕ್ಕೂ ಅದ್ಭುತ ಆಲ್​ರೌಂಡ್​ ಪ್ರದರ್ಶನ ನೀಡಿದ್ದ ಯುವರಾಜ್ ಸಿಂಗ್ ಸರಣಿ ಶ್ರೇಷ್ಠ ಪ್ರಶಸ್ತಿ ಬಾಚಿಕೊಂಡರು. ಇನ್ನು ಲಿಟಲ್​ ಮಾಸ್ಟರ್​ ಸಚಿನ್​ ತೆಂಡೂಲ್ಕರ್​ ಈ ವಿಶ್ವಕಪ್​ ಟ್ರೋಫಿ ಎತ್ತಿ ಹಿಡಿಯಲು ಬರೋಬ್ಬರಿ 22 ವರ್ಷಗಳ ಕಾಲ ಕಾಯಬೇಕಾಗಿತ್ತು. ಈ ದಿನವನ್ನ ಇದೀಗ ಮತ್ತೊಮ್ಮೆ ಎಲ್ಲರೂ ಮೆಲಕು ಹಾಕಿಕೊಂಡಿದ್ದಾರೆ.

Last Updated : Apr 2, 2020, 9:56 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.