ಹ್ಯಾಮಿಲ್ಟನ್: ಇಲ್ಲಿನ ಸೆಡ್ಡನ್ ಪಾರ್ಕ್ನಲ್ಲಿ ನ್ಯೂಜಿಲ್ಯಾಂಡ್ ಮತ್ತು ಭಾರತದ ನಡುವೆ ಮೂರನೇ ಟಿ-20 ಪಂದ್ಯ ನಡೆಯಲಿದ್ದು, ಕಿವೀಸ್ ತಂಡ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡಿದೆ.
-
New Zealand have won the toss and they will bowl first in the 3rd T20I.#NZvIND pic.twitter.com/l9nS0lK4PU
— BCCI (@BCCI) January 29, 2020 " class="align-text-top noRightClick twitterSection" data="
">New Zealand have won the toss and they will bowl first in the 3rd T20I.#NZvIND pic.twitter.com/l9nS0lK4PU
— BCCI (@BCCI) January 29, 2020New Zealand have won the toss and they will bowl first in the 3rd T20I.#NZvIND pic.twitter.com/l9nS0lK4PU
— BCCI (@BCCI) January 29, 2020
ಮೂರನೇ ಟಿ-20 ಪಂದ್ಯದಲ್ಲಿ ಕಿವೀಸ್ ತಂಡ ಟಾಸ್ ಗೆದ್ದಿದ್ದು, ಬೌಲಿಂಗ್ ಆಯ್ದುಕೊಂಡಿದೆ. ಇಂದಿನ ಪಂದ್ಯ ರೋಚಕತೆಯಿಂದ ಕೂಡಿರಲಿದೆ. ಕಿವೀಸ್ ತಂಡಕ್ಕೆ ಇದು ಮಾಡು ಇಲ್ಲವೇ ಮಡಿ ಪಂದ್ಯವಾದ್ರೆ, ಭಾರತ ತಂಡಕ್ಕೆ ಮೊದಲ ಬಾರಿ ನ್ಯೂಜಿಲ್ಯಾಂಡ್ ನೆಲದಲ್ಲಿ ಸರಣಿ ಗೆದ್ದು ಇತಿಹಾಸ ನಿರ್ಮಿಸುವ ಅವಕಾಶ ಸಿಕ್ಕಿದೆ.
ಐದು ಟಿ-20 ಪಂದ್ಯಗಳ ಸರಣಿಯಲ್ಲಿ ಭಾರತ ತಂಡ ಕಿವೀಸ್ ವಿರುದ್ಧ ಎರಡು ಪಂದ್ಯ ಗೆದ್ದು ಮುನ್ನುಗ್ಗಿದೆ. ಇಲ್ಲಿಯವರೆಗೆ ನ್ಯೂಜಿಲ್ಯಾಂಡ್ನಲ್ಲಿ ಭಾರತ ಒಂದೇ ಒಂದು ಟಿ-20 ಸರಣಿ ಗೆದ್ದಿಲ್ಲ. ಈ ಬಾರಿ ಸರಣಿ ಗೆಲ್ಲುವ ಅವಕಾಶ ಭಾರತ ತಂಡಕ್ಕೆ ಹೆಚ್ಚಾಗಿದೆ.
ಆಟಗಾರರ ಪಟ್ಟಿ...
ಭಾರತ ತಂಡ: ರೋಹಿತ್ ಶರ್ಮಾ, ಕೆ.ಎಲ್.ರಾಹುಲ್ (ವಿಕೆಟ್ ಕೀಪರ್), ವಿರಾಟ್ ಕೊಹ್ಲಿ (ನಾಯಕ), ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ, ಶಿವಮ್ ದುಬೆ, ರವೀಂದ್ರ ಜಡೇಜಾ, ಶಾರ್ದುಲ್ ಠಾಕೂರ್, ಮೊಹಮ್ಮದ್ ಶಮಿ, ಯಜುವೇಂದ್ರ ಚಾಹಲ್, ಜಸ್ಪ್ರೀತ್ ಬುಮ್ರಾ.
ನ್ಯೂಜಿಲ್ಯಾಂಡ್ ತಂಡ: ಮಾರ್ಟಿನ್ ಗುಪ್ಟಿಲ್, ಕಾಲಿನ್ ಮುನ್ರೊ, ಕೇನ್ ವಿಲಿಯಮ್ಸನ್ (ನಾಯಕ), ಕಾಲಿನ್ ಡಿ ಗ್ರ್ಯಾಂಡ್‌ಹೋಮ್, ರಾಸ್ ಟೇಲರ್, ಟಿಮ್ ಸೀಫರ್ಟ್ (ವಿಕೆಟ್ ಕೀಪರ್), ಮಿಚೆಲ್ ಸ್ಯಾಂಟ್ನರ್, ಟಿಮ್ ಸೌಥಿ, ಸ್ಕಾಟ್ ಕುಗ್ಗೆಲೀಜ್ನ್, ಇಶ್ ಸೋಧಿ, ಹಮೀಶ್ ಬೆನೆಟ್.