ETV Bharat / sports

ಮೂರನೇ ಏಕದಿನ ಪಂದ್ಯ... ಟಾಸ್​​ ಗೆದ್ದ ನ್ಯೂಜಿಲ್ಯಾಂಡ್​ ಫೀಲ್ಡಿಂಗ್​ ಆಯ್ಕೆ

ಟೀಂ ಇಂಡಿಯಾ ವಿರುದ್ಧ ಇಂದು ಕೊನೆಯ ಏಕದಿನ ಪಂದ್ಯ ನಡೆಯಲಿದ್ದು, ಟಾಸ್​ ಗೆದ್ದ ಕಿವೀಸ್​ ತಂಡ ಫೀಲ್ಡಿಂಗ್​ ಆಯ್ದುಕೊಂಡಿದೆ.

New Zealand
New Zealand
author img

By

Published : Feb 11, 2020, 7:38 AM IST

ಮೌಂಟ್​ ಮಾಂಗ್ನುಯಿ: ಪ್ರವಾಸಿ ಭಾರತದ​ ವಿರುದ್ಧದ ಫೈನಲ್​ ಪಂದ್ಯದಲ್ಲಿ ಟಾಸ್​ ಗೆದ್ದಿರುವ ನ್ಯೂಜಿಲ್ಯಾಂಡ್ ತಂಡ ಫೀಲ್ಡಿಂಗ್​ ಆಯ್ದುಕೊಂಡಿದೆ. ಸರಣಿ ಕ್ಲೀನ್​ ಸ್ವೀಪ್​ ತಪ್ಪಿಸಿಕೊಳ್ಳಲು ಟೀಂ ಇಂಡಿಯಾ ಸೆಣಸಾಟ ನಡೆಸಲಿದೆ.

ಈಗಾಗಲೇ ನಡೆದಿರುವ ಎರಡು ಪಂದ್ಯಗಳಲ್ಲಿ ನ್ಯೂಜಿಲ್ಯಾಂಡ್​ ತಂಡ ಗೆಲುವು ಸಾಧಿಸಿ ಸರಣಿ ಕೈವಶ ಮಾಡಿಕೊಂಡಿದ್ದು, ಇಂದಿನ ಪಂದ್ಯದಲ್ಲೂ ಟೀಂ ಇಂಡಿಯಾ ಮೇಲೆ ಸವಾರಿ ನಡೆಸುವ ಸಾಧ್ಯತೆ ಇದೆ. ಆದರೆ ಈ ಪಂದ್ಯದಲ್ಲಿ ಎದುರಾಳಿ ತಂಡಕ್ಕೆ ಕೊಹ್ಲಿ ಪಡೆ ತಿರುಗೇಟು ನೀಡುವ ಯೋಜನೆಯೊಂದಿಗೆ ಕಣಕ್ಕಿಳಿಯಲಿದೆ.

ಈ ಪಂದ್ಯದಲ್ಲಿ ಟೀಂ ಇಂಡಿಯಾ ಒಂದು ಪ್ರಮುಖ ಬದಲಾವಣೆಯೊಂದಿಗೆ ಕಣಕ್ಕಿಳಿಯುತ್ತಿದ್ದು, ಕೇದಾರ್​ ಜಾಧವ್​ ಸ್ಥಾನದಲ್ಲಿ ಮನೀಷ್​ ಪಾಂಡೆ ಬ್ಯಾಟ್​ ಬೀಸಲಿದ್ದಾರೆ. ಇನ್ನು ಮೊದಲೆರಡು ಪಂದ್ಯಗಳಿಂದ ಹೊರಗುಳಿದಿದ್ದ ಕಿವೀಸ್​ ಕ್ಯಾಪ್ಟನ್​ ಕೇನ್​ ವಿಲಿಯಮ್ಸನ್​ ತಂಡಕ್ಕೆ ಮರಳಿದ್ದಾರೆ.

ತಂಡ ಇಂತಿವೆ:

ಟೀಂ ಇಂಡಿಯಾ: ಪೃಥ್ವಿ ಶಾ, ಮಯಾಂಕ್​ ಅಗರವಾಲ್​, ವಿರಾಟ್​ ಕೊಹ್ಲಿ(ಕ್ಯಾಪ್ಟನ್​), ಶ್ರೇಯಸ್​ ಅಯ್ಯರ್​, ಕೆ ಎಲ್ ರಾಹುಲ್​(ಕೀಪರ್), ಮನೀಷ್​ ಪಾಂಡೆ​, ರವೀಂದ್ರ ಜಡೇಜಾ, ಶಾರ್ದೂಲ್​ ಠಾಕೂರ್​, ನವದೀಪ್​ ಸೈನಿ,ಯಜುವೇಂದ್ರ ಚಹಾಲ್​, ಜಸ್ಪ್ರಿತ್​ ಬುಮ್ರಾ.

ನ್ಯೂಜಿಲ್ಯಾಂಡ್: ​​ಮಾರ್ಟಿನ್​ ಗಪ್ಟಿಲ್​​, ಹೆನ್ರಿ ನಿಕೂಲಸ್​, ಕೇನ್​ ವಿಲಿಯಮ್ಸನ್​ (ಕ್ಯಾಪ್ಟನ್​) ಥಾಮ್​ ಲಾಥಮ್​​(ವಿ.ಕೀ​), ರಾಸ್​ ಟೇಲರ್​, ಜೇಮ್ಸ್​​ ನಿಸ್ಸಮ್​, ಗ್ರ್ಯಾಂಡ್​ಹೊಮ್, ಸ್ಯಾಟ್ನರ್​,ಥೀಮ್​​ ಸೌಥಿ, ಜೆಮಿಸ್ಸೋನ್​​, ಹಿಮಿಶ್​ ಬೆನಿಟ್.​​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.