ದುಬೈ: ಬುಧವಾರ ನಡೆದ ಮೊದಲ ಟೆಸ್ಟ್ನಲ್ಲಿ ಪಾಕಿಸ್ತಾನ ತಂಡವನ್ನು 101 ರನ್ಗಳ ಅಂತರದಿಂದ ಸೋಲಿಸಿದ ನ್ಯೂಜಿಲ್ಯಾಂಡ್ ತಂಡ ನೂತನ ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.
"ಪಾಕಿಸ್ತಾನದ ವಿರುದ್ದ ಮೊದಲ ಟೆಸ್ಟ್ ಗೆಲ್ಲುವ ಮೂಲಕ ದೀರ್ಘ ಮಾದರಿಯ ಕ್ರಿಕೆಟ್ನಲ್ಲಿ ನ್ಯೂಜಿಲ್ಯಾಂಡ್ ತಂಡ ಮೊದಲ ಸ್ಥಾನಕ್ಕೇರಿದೆ" ಎಂದು ಐಸಿಸಿ ಟ್ವೀಟ್ ಮೂಲಕ ಖಚಿತಪಡಿಸಿದೆ. ಆದರೆ ತಂಡಗಳ ರೇಟಿಂಗ್ ಪಾಯಿಂಟ್ಗಳನ್ನು ಇನ್ನೂ ಬಿಡುಗಡೆ ಮಾಡಿಲ್ಲ. ಬಹುಶಃ ಎರಡನೇ ಟೆಸ್ಟ್ ಮುಗಿದ ನಂತರ ಬಿಡುಗಡೆಯಾಗಲಿದೆ.
-
New Zealand move closer to the No.1 spot in the @MRFWorldwide ICC Test Team Rankings with a stirring win over Pakistan! They will confirm their place at the 🔝 if they win the #NZvPAK Test series 🙌 pic.twitter.com/ROwKdXhVfo
— ICC (@ICC) December 30, 2020 " class="align-text-top noRightClick twitterSection" data="
">New Zealand move closer to the No.1 spot in the @MRFWorldwide ICC Test Team Rankings with a stirring win over Pakistan! They will confirm their place at the 🔝 if they win the #NZvPAK Test series 🙌 pic.twitter.com/ROwKdXhVfo
— ICC (@ICC) December 30, 2020New Zealand move closer to the No.1 spot in the @MRFWorldwide ICC Test Team Rankings with a stirring win over Pakistan! They will confirm their place at the 🔝 if they win the #NZvPAK Test series 🙌 pic.twitter.com/ROwKdXhVfo
— ICC (@ICC) December 30, 2020
ಐಸಿಸಿ ಅಂಕಗಳ ವ್ಯವಸ್ಥೆಯಲ್ಲಿ ಒಂದು ಪಂದ್ಯ ಗೆದ್ದರೆ 1 ಅಂಕವನ್ನು ತಂಡ ಪಡೆಯಲಿದೆ. ಡ್ರಾ ಸಾಧಿಸಿದರೆ 0.5 ಹಾಗೂ ಸರಣಿ ಗೆದ್ದರೆ ಹೆಚ್ಚುವರಿ ಅಂಕಗಳನ್ನು ತಂಡಗಳು ಪಡೆಯಲಿವೆ. ನ್ಯೂಜಿಲ್ಯಾಂಡ್ ತಂಡ ಪಾಕ್ ವಿರುದ್ಧ 2ನೇ ಟೆಸ್ಟ್ ಪಂದ್ಯವನ್ನು ಗೆದ್ದರೆ ಒಟ್ಟು 3 ಅಂಕ ಪಡೆಯಲಿದೆ. ಒಂದು ವೇಳೆ ಪಾಕಿಸ್ತಾನ ಗೆದ್ದರೆ ಎರಡೂ ತಂಡಗಳು ತಲಾ ಒಂದು ಅಂಕ ಪಡೆಯಲಿವೆ. ಆಗಲೂ ಕೂಡ ಕಿವೀಸ್ ತಂಡವೇ ನಂಬರ್ ಒನ್ ಸ್ಥಾನದಲ್ಲೇ ಉಳಿಯಲಿದೆ.
ಡಿಸೆಂಬರ್ 14ರಂದು ಐಸಿಸಿ ಬಿಡುಗಡೆ ಮಾಡಿದ ಶ್ರೇಯಾಂಕ ಪಟ್ಟಿಯಲ್ಲಿ ಆಸ್ಟ್ರೇಲಿಯಾ (116) ಹಾಗೂ ನ್ಯೂಜಿಲ್ಯಾಂಡ್ (116) ಮೊದಲೆರಡು ಸ್ಥಾನ ಪಡೆದಿದ್ದವು. ಭಾರತ ಮೂರನೇ ಸ್ಥಾನಕ್ಕೆ ಕುಸಿದಿತ್ತು. ಇದೀಗ ನ್ಯೂಜಿಲ್ಯಾಂಡ್ ಬಳಿ 117 ಅಂಕಗಳಿವೆ.