ಹ್ಯಾಮಿಲ್ಟನ್: ಕೇನ್ ವಿಲಿಯಮ್ಸನ್ ದ್ವಿಶತಕ ಹಾಗೂ ಬೌಲರ್ಗಳ ಅದ್ಭುತ ಪ್ರದರ್ಶನದ ನೆರವಿನಿಂದ ನ್ಯೂಜಿಲ್ಯಾಂಡ್ ತಂಡ ವಿಂಡೀಸ್ ವಿರುದ್ಧ ಇನ್ನಿಂಗ್ಸ್ ಹಾಗೂ 134 ರನ್ಗಳ ಜಯ ಸಾಧಿಸಿ ಸರಣಿಯಲ್ಲಿ 1-0 ಮೂಲಕ ಮುನ್ನಡೆ ಪಡೆದುಕೊಂಡಿದೆ.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲ್ಯಾಂಡ್ ತಂಡ ಮೊದಲ ಇನ್ನಿಂಗ್ಸ್ನಲ್ಲಿ 7 ವಿಕೆಟ್‌ಗಳನ್ನು ಕಳೆದುಕೊಂಡು 519 ರನ್ ಗಳಿಸಿತ್ತು. ನಾಯಕ ಕೇನ್ ವಿಲಿಯಮ್ಸನ್ 251, ಟಾಮ್ ಲ್ಯಾಥಮ್ 86 ಹಾಗೂ ಜಮೀಸನ್ 51 ರನ್ ಗಳಿಸಿದ್ದರು.
ವೆಸ್ಟ್ ಇಂಡೀಸ್ ಪರ ಕೆಮರ್ ರೋಚ್ 3, ಗೇಬ್ರಿಯಲ್ 2 ಹಾಗೂ ಜೋಸೆಪ್ 1 ವಿಕೆಟ್ ಪಡೆದುಕೊಂಡಿದ್ದರು.
ಓದಿ: 34 ಬೌಂಡರಿ ಸಿಡಿಸಿ ವಿಲಿಯಮ್ಸನ್ ಭರ್ಜರಿ ದ್ವಿಶತಕ: ವಿಂಡೀಸ್ ವಿರುದ್ಧ ಕಿವೀಸ್ ಅಬ್ಬರ
ಪಂದ್ಯದ 3ನೇ ದಿನ ವೆಸ್ಟ್ ಇಂಡೀಸ್ ಮೊದಲ ಇನ್ನಿಂಗ್ಸ್ನಲ್ಲಿ ಕೇವಲ 138ಗೆ ಆಲೌಟ್ ಆಗುವ ಮೂಲಕ ಫಾಲೋಆನ್ಗೆ ತುತ್ತಾಗಿತ್ತು. 3ನೇ ದಿನವೇ 89 ರನ್ಗಳಿಸಿ 6 ವಿಕೆಟ್ ಕಳೆದುಕೊಂಡು ಮತ್ತೆ ಆಘಾತ ಅನುಭವಿಸಿತ್ತು.
-
3️⃣ wickets in 🔟 balls and New Zealand wrap up the win by an innings and 134 runs 🇳🇿
— ICC (@ICC) December 5, 2020 " class="align-text-top noRightClick twitterSection" data="
Neil Wagner finishes the innings with figures of 4/66 💪 #NZvWI SCORECARD ▶️ https://t.co/5W5qK9wDQX pic.twitter.com/S5oRHMlqpK
">3️⃣ wickets in 🔟 balls and New Zealand wrap up the win by an innings and 134 runs 🇳🇿
— ICC (@ICC) December 5, 2020
Neil Wagner finishes the innings with figures of 4/66 💪 #NZvWI SCORECARD ▶️ https://t.co/5W5qK9wDQX pic.twitter.com/S5oRHMlqpK3️⃣ wickets in 🔟 balls and New Zealand wrap up the win by an innings and 134 runs 🇳🇿
— ICC (@ICC) December 5, 2020
Neil Wagner finishes the innings with figures of 4/66 💪 #NZvWI SCORECARD ▶️ https://t.co/5W5qK9wDQX pic.twitter.com/S5oRHMlqpK
ಆದರೆ ಜರ್ಮೈನ್ ಬ್ಲಾಕ್ವುಡ್ (104) ಹಾಗೂ ಜೋಸೆಫ್ (86) 7ನೇ ವಿಕೆಟ್‌ಗಳಿಗೆ 155 ರನ್ಗಳ ಜೊತೆಯಾಟ ನಡೆಸಿ ಸೋಲನ್ನು ಒಂದು ದಿನ ಮುಂದಕ್ಕೆ ತಳ್ಳಿದರು. ಪಂದ್ಯದ ಮುಕ್ತಾಯಕ್ಕೆ ತಂಡ 247 ರನ್ಗಳಿಗೆ ಆಲೌಟ್ ಆಯಿತು. ಈ ಮೂಲಕ ಕಿವೀಸ್ ತಂಡ ಇನ್ನಿಂಗ್ಸ್ ಹಾಗೂ 134 ರನ್ಗಳ ಜಯ ಸಾಧಿಸಿ ಸರಣಿಯನ್ನು 1-0 ಪಾಯಿಂಟ್‌ಗಳಲ್ಲಿ ಮುನ್ನಡೆ ಸಾಧಿಸಿತು.
ಕಿವೀಸ್ ಪರ ಮೊದಲ ಇನ್ನಿಂಗ್ಸ್ನಲ್ಲಿ ಸೌಥಿ 4, ಬೌಲ್ಟ್ 1, ಜೆಮೀಸನ್ ಹಾಗೂ ವ್ಯಾಗ್ನರ್ ತಲಾ 2 ವಿಕೆಟ್ ಪಡೆದಿದ್ದರು, 2ನೇ ಇನ್ನಿಂಗ್ಸ್ನಲ್ಲಿ ವ್ಯಾಗ್ನರ್ 4, ಜೆಮೀಸನ್ 2 , ಬೌಲ್ಟ್, ಸೌಥಿ ಹಾಗೂ ಮಿಚೆಲ್ ತಲಾ ಒಂದು ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಓದಿ: ಒಂದೇ ದಿನ ಟೀಂ ಇಂಡಿಯಾದ ಮೂವರು ಸ್ಟಾರ್ ಆಟಗಾರರಿಗೆ ಹುಟ್ಟುಹಬ್ಬದ ಸಂಭ್ರಮ