ನವದೆಹಲಿ: ಐಪಿಎಲ್ ಹರಾಜು ಪ್ರಕ್ರಿಯೆಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಸ್ವೀವ್ ಸ್ಮಿತ್ ಸೇರಿದಂತೆ ಕೆಲ ಪ್ರಮುಖ ಪ್ಲೇಯರ್ಸ್ ಖರೀದಿ ಮಾಡಿದ್ದು, ಇದರ ಬಗ್ಗೆ ತಂಡದ ಕ್ಯಾಪ್ಟನ್ ಶ್ರೇಯಸ್ ಅಯ್ಯರ್ ಮಾತನಾಡಿದ್ದಾರೆ.
-
#SkipperShreyas reacts to a perfectly balanced DC squad and looks forward to more unconditional support from our fans in #IPL2021 💙#YehHaiNayiDilli @ShreyasIyer15 pic.twitter.com/XA0EQ7oxWz
— Delhi Capitals (@DelhiCapitals) February 20, 2021 " class="align-text-top noRightClick twitterSection" data="
">#SkipperShreyas reacts to a perfectly balanced DC squad and looks forward to more unconditional support from our fans in #IPL2021 💙#YehHaiNayiDilli @ShreyasIyer15 pic.twitter.com/XA0EQ7oxWz
— Delhi Capitals (@DelhiCapitals) February 20, 2021#SkipperShreyas reacts to a perfectly balanced DC squad and looks forward to more unconditional support from our fans in #IPL2021 💙#YehHaiNayiDilli @ShreyasIyer15 pic.twitter.com/XA0EQ7oxWz
— Delhi Capitals (@DelhiCapitals) February 20, 2021
ಕಳೆದ ಆವೃತ್ತಿ ರನ್ನರ್ ಅಪ್ ತಂಡ ಆಗಿರುವ ಡೆಲ್ಲಿ ಕ್ಯಾಪಿಟಲ್ಸ್ ಈ ಸಲದ ಆವೃತ್ತಿಯಲ್ಲೂ ಉತ್ತಮ ಪ್ರದರ್ಶನ ನೀಡುವ ಇರಾದೆ ಇಟ್ಟುಕೊಂಡಿದ್ದು, ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಆಡಿರುವ ಸ್ಮಿತ್ ಹಾಗೂ ಟಾಮ್ ಕರ್ರನ್, ಸ್ಯಾಮ್ ಬಿಲ್ಲಿಂಗ್ಸ್ ಸೇರಿದಂತೆ ಕೆಲ ಪ್ರಮುಖ ಅನ್ಕ್ಯಾಪ್ಡ್ ಪ್ಲೇಯರ್ಸ್ಗೆ ಖರೀದಿ ಮಾಡಿದೆ.
ಓದಿ: ಬೆಲೆ ಟ್ಯಾಗ್ ಬಗ್ಗೆ ಯೋಚನೆ ಮಾಡಲ್ಲ, ಧೋನಿ ಜತೆ ಆಟವಾಡುವುದೇ 'ಆಶೀರ್ವಾದ': ಕನ್ನಡಿಗ ಗೌತಮ್!
ಕಳೆದ ಆವೃತ್ತಿಯಲ್ಲಿ ನಾವು ಉತ್ತಮ ಪ್ರದರ್ಶನ ನೀಡಿದ್ದೆವು. ಇದೀಗ ತಂಡಕ್ಕೆ ಹೊಸದಾಗಿ ಸೇರಿಕೊಂಡಿರುವ ಪ್ಲೇಯರ್ಸ್ ಸಾಕಷ್ಟು ಅನುಭವ ತರುತ್ತಾರೆ ಎಂಬ ವಿಶ್ವಾಸವಿದೆ ಎಂದಿದ್ದಾರೆ. ಜತೆಗೆ ಲುಕ್ಮನ್ ಮರಿವಾಲಾ ಸೈಯದ್ ಮುಸ್ತಾಕ್ ಅಲಿ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದು, ಇದು ಇತರ ಪ್ಲೇಯರ್ಸ್ಗೆ ಸಹಕಾರಿಯಾಗಲಿದೆ ಎಂದಿದ್ದಾರೆ.
ಡೆಲ್ಲಿ ತಂಡದಲ್ಲಿ ಶಿಖರ್ ಧವನ್, ಅಜಿಂಕ್ಯ ರಹಾನೆ, ರಿಷಭ್ ಪಂತ್ ಹೆಟ್ಮೇಯರ್, ಆರ್. ಅಶ್ವಿನ್, ಅಮಿತ್ ಮಿಶ್ರಾ, ಉಮೇಶ್ ಯಾದವ್, ಇಶಾಂತ್ ಶರ್ಮಾ, ಕಗಿಸೋ ರಬಾಡ ಸೇರಿದಂತೆ ಪ್ರಮುಖ ಪ್ಲೇಯರ್ಸ್ ಪಟ್ಟಿ ಇದೆ.