ನವದೆಹಲಿ: ಗುರುವಾರ ಬಿಸಿಸಿಐನ ವಾರ್ಷಿಕ ಸಾಮಾನ್ಯ ಸಭೆ ನಡೆಯಲಿದೆ. ಈ ಸಂದರ್ಭದಲ್ಲಿ ಆಯ್ಕೆ ಸಮಿತಿಯಲ್ಲಿ ಇಂಗ್ಲೆಂಡ್ ಸರಣಿಗೂ ಮುನ್ನ ಬಿಸಿಸಿಐ ಆಯ್ಕೆ ಸಮಿತಿಯಲ್ಲಿ ಖಾಲಿಯಿರುವ ಆಯ್ಕೆಗಾರರ ಹುದ್ದೆಗೆ ಸಂದರ್ಶನ ಮಾಡಲು ಹೊಸ ಕ್ರಿಕೆಟ್ ಸಲಹಾ ಸಮಿತಿ(ಸಿಎಸಿ)ಯನ್ನು ರಚನೆ ಮಾಡಲಾಗುವುದು ಎಂದು ತಿಳಿದು ಬಂದಿದೆ.
ಇಂಗ್ಲೆಂಡ್ ವಿರುದ್ಧ ಫೆಬ್ರವರಿಯಲ್ಲಿ ಟೆಸ್ಟ್ ಹಾಗೂ ಸೀಮಿತ ಓವರ್ಗಳ ಸರಣಿ ನಡೆಯಲಿದೆ. ಇದಕ್ಕೂ ಮುನ್ನ ಆಯ್ಕೆ ಸಮಿತಿಯಲ್ಲಿ ಖಾಲಿಯಿರುವ ಆಯ್ಕೆಗಾರರನ್ನು ಸಂದರ್ಶನ ಮಾಡಿ ನೇಮಕ ಮಾಡಲು ಕ್ರಿಕೆಟ್ ಸಲಹಾ ಸಮಿತಿಯನ್ನು ರಚನೆ ಮಾಡಲು ಬಿಸಿಸಿಐ ಬಯಸಿದೆ.
ಮಾಜಿ ಕ್ರಿಕೆಟಿಗ ಮದನ್ಲಾಲ್ ನೇತೃತ್ವದ ಸಮಿತಿಯನ್ನು ಒಂದು ಸಭೆಗೆ ಆಯ್ಕೆ ಮಾಡಲಾಗಿತ್ತು. ಇದೀಗ ಗುರುವಾರ ನಡೆಯುವ ವಾರ್ಷಿಕ ಸಾಮಾನ್ಯ ಸಭೆ(ಎಜಿಎಂ) ನಂತರ ಸಿಎಸಿ ಅಧಿಕಾರ ವಹಿಸಿಕೊಂಡು ಸಂದರ್ಶನ ನಡೆಸಲಿವೆ ಎಂದು ತಿಳಿದು ಬಂದಿದೆ.
ಮದನ್ ಲಾಲ್, ರುದ್ರ ಪ್ರತಾಪ್ ಸಿಂಗ್ ಮತ್ತು ಸುಲಕ್ಷಣ ನಾಯಕ್ ಅವರನ್ನು ಒಂದು ಸಭೆಗೆ ನೇಮಿಸಲಾಗಿತ್ತು. ಅವರು ಸುನೀಲ್ ಜೋಶಿ ಮತ್ತು ಹರ್ವಿಂದರ್ ಸಿಂಗ್ ಅವರನ್ನು ನೇಮಕ ಮಾಡಿದ್ದರು ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಪಿಟಿಐಗೆ ಮಾಹಿತಿ ನೀಡಿದ್ದಾರೆ.
ಈಗಾಗಲೇ 3 ವಯಲಗಳ ಆಯ್ಕೆಗಾರರ ಸ್ಥಾನಕ್ಕೆ ಅಜಿತ್ ಅಗರ್ಕರ್ ಸೇರಿದಂತೆ , ಚೇತನ್ ಶರ್ಮಾ, ಮಣೀಂದರ್ ಸಿಂಗ್ ಮತ್ತು ಚೇತನ್ ಶರ್ಮಾರಂತಹ ಘಟಾನುಘಟಿಗಳು ಅರ್ಜಿ ಸಲ್ಲಿಸಿದ್ದಾರೆ.