ಬರ್ಲಿನ್: ಬರ್ಲಿನ್‌ನಲ್ಲಿ ನಡೆದ 'ಲಾರೆಸ್ ವಿಶ್ವ ಸ್ಪೋರ್ಟ್ಸ್ ಪ್ರಶಸ್ತಿ' ಕಾರ್ಯಕ್ರಮದಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರು ವರ್ಷದ 'ಸ್ಪೋರ್ಟಿಂಗ್ ಮೊಮೆಂಟ್ 2000-2020 ಪ್ರಶಸ್ತಿ'ಗೆ ಭಾಜನರಾದರು. ಈ ವೇಳೆ ಕ್ರೀಡೆಯ ಪ್ರೇರಶಕ್ತಿ, ನೆಲ್ಸನ್ ಮಂಡೇಲಾ ಹಾಗೂ ಒಗ್ಗಟ್ಟೂ ಕುರಿತು ಆಡಿದ ಮಾತುಗಳು ನೆರೆದವರನ್ನು ಮೂಕವಿಸ್ಮಯಗೊಳುವಂತೆ ಮಾಡಿದವು.
'ನಾನು ಹತ್ತೊಂಬತ್ತನೆಯ ವರ್ಷದವನಿದ್ದಾಗ, ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷ ನೆಲ್ಸನ್ ಮಂಡೇಲಾ ಅವರನ್ನು ಭೇಟಿ ಮಾಡಿದ್ದು ನನ್ನ ಜೀವನದ ಸುಮದುರ ಕ್ಷಣಗಳು. ಅವರ ಕಷ್ಟ ದಿನಗಳು ಕೇವಲ ನಾಯಕತ್ವದ ಮೇಲೆ ಪರಿಣಾಮ ಬೀರಲ್ಲ. ಹಲವು ಅಂಶಗಳಂತಹ ಸಂದೇಶಗಳನ್ನು ನಮಗೆ ನೀಡಿ ಹೋಗಿದ್ದಾರೆ. ಅದರಲ್ಲಿ ನಾನು ಮುಖ್ಯವಾಗಿ ಕಲಿತದ್ದು ''ಕ್ರೀಡೆ ಒಗ್ಗಟ್ಟನ್ನು ಪ್ರತಿನಿಧಿಸುತ್ತದೆ'' ಎಂಬ ಅವರು ಮಾತುಗಳು' ಎಂದು ಹೇಳುವಾಗ ಸಚಿನ್ ಅವರು ಸ್ವಲ್ಪ ಭಾವುಕರಾದರು.
-
🔈 Sound on 🔈
— Laureus (@LaureusSport) February 17, 2020 " class="align-text-top noRightClick twitterSection" data="
A powerful, strong and moving tribute to a room full of sporting legends from @sachin_rt in honour of Nelson Mandela and the incredible power of sport to unite and inspire 👏#Laureus20 #SportUnitesUs pic.twitter.com/0z3mNatUFh
">🔈 Sound on 🔈
— Laureus (@LaureusSport) February 17, 2020
A powerful, strong and moving tribute to a room full of sporting legends from @sachin_rt in honour of Nelson Mandela and the incredible power of sport to unite and inspire 👏#Laureus20 #SportUnitesUs pic.twitter.com/0z3mNatUFh🔈 Sound on 🔈
— Laureus (@LaureusSport) February 17, 2020
A powerful, strong and moving tribute to a room full of sporting legends from @sachin_rt in honour of Nelson Mandela and the incredible power of sport to unite and inspire 👏#Laureus20 #SportUnitesUs pic.twitter.com/0z3mNatUFh
'ಕ್ರೀಡೆ ಪ್ರತಿಯೊಬ್ಬರನ್ನು, ಪ್ರತಿಯೊಂದನ್ನು ಒಂದುಗೂಡಿಸುತ್ತದೆ. ನಾನು ಈ ದಿನ ಬಹಳ ಶ್ರೇಷ್ಠ ಆಟಗಾರರ ಮಧ್ಯದಲ್ಲಿ ನಿಂತುಕೊಂಡಿದ್ದೇನೆ. ಕೆಲವರು ಎಲ್ಲದರಿಂದಲೂ ಒಳ್ಳೆಯವರು ಆಗಿರಲಿಕಿಲ್ಲ. ಆದರೆ, ಅವರು ಇದುವರೆಗೂ ಮಾಡಿದ್ದು ಮಾತ್ರ ಶ್ರೇಷ್ಠವಾದದ್ದು. ಅದರಿಂದಲೇ ಅವರೆಲ್ಲ ಇವತ್ತು ಚಾಂಪಿಯನ್ ಆಗಿದ್ದಾರೆ. ಯುವಕರನ್ನು ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವಂತೆ ಸ್ಫೂರ್ತಿಯಾದ ಅವರೆಲ್ಲಿರಿಗೂ ನಾನು ಧನ್ಯವಾದ ಹೇಳುತ್ತೇನೆ. ಅವರ ಆಯ್ಕೆ ಮತ್ತು ಅವರ ಕನಸುಗಳನ್ನು ಸಾಕಾರಗೊಳಿಸಿಕೊಂಡಿದ್ದಕ್ಕೂ ಕೂಡ. ಇವತ್ತು ಈ ಪ್ರಶಸ್ತಿ ನನಗೆ ಮಾತ್ರವಲ್ಲ ಯುವಕರನ್ನು ಕ್ರೀಡೆಯತ್ತ ಒಲವು ಮೂಡಲು ಪ್ರೇರಣೆ ನೀಡುವಂತಿದೆ' ಎಂದು ಹೇಳಿದ್ದನ್ನು ಇಡೀ ಸಭಾಂಗಣದಲ್ಲಿ ನೆರೆದವರು ತದೇಕ ಚಿತ್ತದಿಂದ ಕೇಳುತ್ತಿದ್ದರು.