ETV Bharat / sports

ಟಿ-20 ಮೂಲಕ ರಾಷ್ಟ್ರೀಯ ತಂಡಕ್ಕೆ ಪದಾರ್ಪಣೆ: ಚಾಲಕನ ಮಗನ ಪರಿಶ್ರಮಕ್ಕೆ ಸಿಕ್ತು ಬೆಲೆ! - ನವ್​ದೀಪ್​ ಸೈನಿ-ಗೌತಮ್​ ಗಂಭೀರ್​

ಕೇವಲ 250-300 ರೂಪಾಯಿಗಾಗಿ ಟೆನ್ನಿಸ್​ ಬಾಲ್​ ಕ್ರಿಕೆಟ್​ ಆಡುತ್ತಿದ್ದ ಯುವಕ ಇಂದು ಭಾರತ ತಂಡದಲ್ಲಿ ನೀಲಿ ಬಣ್ಣದ ಜರ್ಸಿ ತೊಟ್ಟು ಆಡುವ ಮೂಲಕ ಕನಸು ನನಸು ಮಾಡಿಕೊಂಡಿದ್ದಾರೆ.

Navdeep Saini
author img

By

Published : Aug 3, 2019, 9:00 PM IST

ಫ್ಲೋರಿಡಾ: ಟೆನ್ನಿಸ್​ ಬಾಲ್​ ಆಡುತ್ತಿದ್ದ ದೆಹಲಿಯ ಚಾಲಕನ ಮಗ ನವ್​ದೀಪ್​ ಸೈನಿ ಭಾರತ ತಂಡದಲ್ಲಿ ಸ್ಥಾನ ಗಿಟ್ಟಿಸಿದ್ದು ಟಿ-20ಗೆ ಪದಾರ್ಪಣೆ ಮಾಡಿದ್ದಾರೆ.

ಕೇವಲ 250-300 ರೂಪಾಯಿಗಾಗಿ ಟೆನ್ನಿಸ್​ ಬಾಲ್​ ಕ್ರಿಕೆಟ್​ ಆಡುತ್ತಿದ್ದ ಯುವಕ ಇಂದು ಭಾರತ ತಂಡದಲ್ಲಿ ನೀಲಿ ಬಣ್ಣದ ಜರ್ಸಿ ತೊಟ್ಟು ಆಡುತ್ತಿದ್ದಾರೆ. ಈ ಮೂಲಕ ಅವರು ಕ್ರಿಕೆಟ್ ಲೋಕದ ಗಮನ ಸೆಳೆದರು.

ತಂದೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಚಾಲಕನಾಗಿ ಕೆಲಸ ಮಾಡಿ ನಿವೃತ್ತಿ ಹೊಂದಿದ್ದಾರೆ. ಮನೆಯಲ್ಲಿ ಬಡತನದ ಕಾರಣ ತನ್ನ ಖರ್ಚನ್ನು ತಾನೇ ನೋಡಿಕೊಳ್ಳಲು ಟೆನ್ನಿಸ್​ ಬಾಲ್​ ಟೂರ್ನಮೆಂಟ್​ಗಳಲ್ಲಿ ಬೌಲಿಂಗ್​ ಮಾಡುತ್ತಿದ್ದವರು ಈ ಸೈನಿ. ರಣಜಿ ನಡೆಯುವ ಸಂದರ್ಭದಲ್ಲಿ ಆಟಗಾರರಿಗೆ ನೆಟ್ಸ್​ನಲ್ಲಿ ಅಭ್ಯಾಸದ ವೇಳೆ ಬೌಲಿಂಗ್​ ಮಾಡುತ್ತಿದ್ದರು. ಇದನ್ನು ಗಮನಿಸಿದ ಟೀಮ್​ ಇಂಡಿಯಾ ಮಾಜಿ ಆಟಗಾರ ಗೌತಮ್​ ಗಂಭೀರ್​ ಸೈನಿಗೆ ಧೈರ್ಯ ತುಂಬಿ ಲೆದರ್​ ಬಾಲ್​ ಹಿಡಿಯುವಂತೆ ಪ್ರೋತ್ಸಾಹಿಸಿದ್ರು. ಅಲ್ಲಿಂದ ಹಿಂತಿರುಗಿ ನೋಡದ ಸೈನಿ ಕಠಿಣ ಪರಿಶ್ರಮದಿಂದ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅವಕಾಶ ಪಡೆದು ಯಶಸ್ವಿಯಾಗಿದ್ದಾರೆ.

ಸೈನಿ ಮೂಲತಃ ಹರಿಯಾಣವಾದ್ದರಿಂದ ಅವರನ್ನು ಡೆಲ್ಲಿ ರಣಜಿ ತಂಡಕ್ಕೆ ಆಯ್ಕೆ ಮಾಡುವಲ್ಲಿ ಡೆಲ್ಲಿ ಕ್ರಿಕೆಟ್​ ಆಕಾಡೆಮಿ ಹಿಂದೇಟು ಹಾಕಿತ್ತು. ಆದರೆ ಗಂಭೀರ್​ ಒತ್ತಾಯದ ಮೇರೆಗೆ ಅವರನ್ನು ಡೆಲ್ಲಿ ತಂಡಕ್ಕೆ ಆಯ್ಕೆ ಮಾಡಲಾಗಿತ್ತು. ನಂತರ ಭಾರತ ಎ, ಐಪಿಎಲ್​, ಭಾರತ ಟೆಸ್ಟ್​ ತಂಡ ಇದೀಗ ಭಾರತ ಟಿ20 ತಂಡದಲ್ಲೂ ಅವಕಾಶ ಪಡೆದು ಕಠಿಣ ಪರಿಶ್ರಮವೊಂದಿದ್ದರೆ ಏನನ್ನಾದರೂ ಸಾಧಿಸಬಹುದು ಎಂದು ಕ್ರಿಕೆಟ್​ ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ.

2018 ರಲ್ಲಿ ಸೈನಿ ಭಾರತ ಹಾಗೂ ಅಫ್ಘಾನಿಸ್ತಾನದ ನಡುವೆ ನಡೆದಿದ್ದ ಏಕೈಕ ಟೆಸ್ಟ್​ ಪಂದ್ಯದಲ್ಲಿ ತಂಡಕ್ಕೆ ಆಯ್ಕೆಯಾಗಿದ್ದರು. 2019 ರ ಐಪಿಎಲ್​ನಲ್ಲಿ ಆರ್​ಸಿಬಿ 3 ಕೋಟಿ ರೂ ಕೊಟ್ಟು ಯುವ ಪ್ರತಿಭೆಯನ್ನು ಖರೀದಿಸಿತ್ತು.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.