ಫ್ಲೋರಿಡಾ: ವಿಂಡೀಸ್ ವಿರುದ್ಧ ಪದಾರ್ಪಣೆ ಪಂದ್ಯದಲ್ಲೇ ಮಿಂಚಿದ ನವದೀಪ್ ಸೈನಿ 3 ವಿಕೆಟ್ ಪಡೆದಿದ್ದಲ್ಲದೆ 20ನೇ ಓವರ್ನಲ್ಲಿ ಒಂದೂ ರನ್ ಬಿಟ್ಟುಕೊಡದೇ ಮೇಡನ್ ಮಾಡುವ ಮೂಲಕ ದಾಖಲೆ ಪುಟ ಸೇರಿದ್ದಾರೆ.
ಚೊಚ್ಚಲ ಪಂದ್ಯದ ಚೊಚ್ಚಲ ಓವರ್ನಲ್ಲಿ ಸ್ಫೋಟಕ ಆಟಗಾರರಾದ ಪೂರನ್ ಹಾಗೂ ಹೆಟ್ಮೈರ್ರ ವಿಕೆಟ್ ಕಿತ್ತು 6 ರನ್ ಬಿಟ್ಟುಕೊಟ್ಟಿದ್ದ ಸೈನಿ ನಂತರದ 2 ಓವರ್ಗಳಲ್ಲಿ 11 ರನ್ ನೀಡಿದ್ದರು. ಕೊನೆಯಲ್ಲಿ 20 ನೇ ಓವರ್ ಎಸೆಯಲು ಬಂದ ಅವರು 49 ರನ್ ಗಳಿಸಿದ್ದ ಪೊಲಾರ್ಡ್ಗೆ 2 ಎಸೆತಗಳನ್ನು ಡಾಟ್ ಮಾಡಿಸಿ 3ನೇ ಎಸೆತದಲ್ಲಿ ಅವರ ವಿಕೆಟ್ ಪಡೆದರು. ನಂತರ ಮೂರು ಎಸೆತವನ್ನು ಒಶಾನ್ ಥಾಮಸ್ರಿಗೆ ಬೀಟ್ ಮಾಡುವ ಮೂಲಕ ಮೇಡನ್ ಸಂಪಾದಿಸಿದರು.
ಈ ಮೂಲಕ ಸೈನಿ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಕೊನೆಯ ಓವರ್ ಮೇಡನ್ ಸಾಧಿಸಿದ ಮೊದಲ ಭಾರತೀಯ ಬೌಲರ್ ಹಾಗೂ ವಿಶ್ವದ 4ನೇ ಬೌಲರ್ ಎನಿಸಿಕೊಂಡರು.
ಸೈನಿಗೂ ಮೊದಲು ನ್ಯೂಜಿಲ್ಯಾಂಡ್ನ ಜೀತನ್ ಪಾಟೇಲ್ ವಿಂಡೀಸ್ ವಿರುದ್ಧ, ಮೊಹಮ್ಮದ್ ಅಮೀರ್ ಆಸ್ಟ್ರೇಲಿಯಾ ವಿರುದ್ಧ, ಸಿಂಗಾಪುರದ ಜನಕ್ ಪ್ರಕಾಶ್ ಕತಾರ್ ವಿರುದ್ಧ 20 ನೇ ಓವರ್ ಮೇಡನ್ ಮಾಡಿದ್ದರು.