ಚೆನ್ನೈ: ಭಾರತದ ಪರ ಒಂದೇ ಪ್ರವಾಸದಲ್ಲಿ ಮೂರು ಮಾದರಿಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ ಏಕೈಕ ಆಟಗಾರ ಎನಿಸಿಕೊಂಡಿರುವ ಟಿ. ನಟರಾಜನ್ ಶನಿವಾರ ಮುಡಿ ಕೊಡುವ ಮೂಲಕ ಹರಕೆ ತೀರಿಸಿದ್ದಾರೆ.
13ನೇ ಆವೃತ್ತಿಯ ಐಪಿಎಲ್ನಲ್ಲಿ ಕರಾರುವಾಕ್ ಯಾರ್ಕರ್ಗಳಿಂದ ಘಟಾನುಘಟಿಗಳನ್ನೇ ಬೆಚ್ಚಿ ಬೀಳಿಸಿದ್ದ ನಟರಾಜನ್ ಹೈದರಾಬಾದ್ ಪರ 16 ಪಂದ್ಯಗಳಿಂದ 16 ವಿಕೆಟ್ ಪಡೆದಿದ್ದರು. ನಂತರ ಆಸೀಸ್ ಪ್ರವಾಸಕ್ಕೆ ನೆಟ್ ಬೌಲರ್ ಆಗಿ ತೆರಳಿದ್ದರು. ಅದೃಷ್ಟವಶಾತ್ ತಂಡದಲ್ಲಿದ್ದ ಆಟಗಾರರು ಗಾಯಗೊಂಡ ಪರಿಣಾಮ ನಟರಾಜನ್ ಮೂರು ಮಾದರಿಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದರು.
-
Feeling blessed 🙏🏾 pic.twitter.com/1zKKDS8RZb
— Natarajan (@Natarajan_91) January 31, 2021 " class="align-text-top noRightClick twitterSection" data="
">Feeling blessed 🙏🏾 pic.twitter.com/1zKKDS8RZb
— Natarajan (@Natarajan_91) January 31, 2021Feeling blessed 🙏🏾 pic.twitter.com/1zKKDS8RZb
— Natarajan (@Natarajan_91) January 31, 2021
ಇದೀಗ ಆಸೀಸ್ ಪ್ರವಾಸ ಮುಗಿಸಿಕೊಂಡು ಬರುತ್ತಿದ್ದಂತೆ ಪಳನಿಯ ಮುರುಗನ್ ದೇವಾಲಯಕ್ಕೆ ಕುಟುಂಬಸ್ಥರ ಜೊತೆ ಭೇಟಿ ನೀಡಿದ ಅವರು ತಮ್ಮ ಮುಡಿಕೊಡುವ ಮೂಲಕ ಹರಕೆ ತೀರಿಸಿದ್ದಾರೆ. ಟ್ವಿಟರ್ನಲ್ಲಿ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದು, ದೇವರ ಆಶೀರ್ವಾದ ಪಡೆದಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ನಟರಾಜನ್ ಆಸೀಸ್ ಪ್ರವಾಸದಲ್ಲಿ ಏಕದಿನ ಪಂದ್ಯದಲ್ಲಿ 2 ವಿಕೆಟ್, ಟೆಸ್ಟ್ ಪಂದ್ಯದಲ್ಲಿ 3 ಹಾಗೂ ಟಿ20 ಸರಣಿಯಲ್ಲಿ 6 ವಿಕೆಟ್ ಪಡೆದಿದ್ದರು. ಈ ಪ್ರವಾಸ ಮುಗಿಯುತ್ತಿದ್ದಂತೆ ಭಾರತಕ್ಕೆ ಆಗಮಿಸಿದಾಗ ಅವರ ಸ್ವಂತ ಊರಾದ ಸೇಲಂನಲ್ಲಿ ಅವರಿಗೆ ಭರ್ಜರಿ ಸ್ವಾಗತ ಸಿಕ್ಕಿತ್ತು.
ಇದನ್ನು ಓದಿ: ತಮ್ಮ ಬೌಲಿಂಗ್ ಅನುಕರಣೆ ಮಾಡಿದ ಬುಮ್ರಾರ ಬಗ್ಗೆ ಜಂಬೋ ಮೆಚ್ಚುಗೆ..