ಹೈದರಾಬಾದ್: 2002ರಲ್ಲಿ ನಡೆದಿದ್ದ ಭಾರತದ ವಿರುದ್ಧದ ನಾಟ್ವೆಸ್ಟ್ ಸರಣಿಯ ಫೈನಲ್ ಪಂದ್ಯವನ್ನು ಇಂಗ್ಲೆಂಡ್ ತಂಡದ ನಾಯಕ ನಾಸಿರ್ ಹುಸೇನ್ ಮರೆಯಲು ಬಯಸಿದ್ದಾರೆ,
ಐಸಿಸಿ ಟ್ವಿಟರ್ನಲ್ಲಿ ಬುಧವಾರ ಭಾರತ ತಂಡ 2002ರಲ್ಲಿ ಇಂಗ್ಲೆಂಡ್ ವಿರುದ್ಧ ನಾಟ್ವೆಸ್ಟ್ ಸರಣಿ ಫೈನಲ್ ಪಂದ್ಯದಲ್ಲಿ ಜಯ ಸಾಧಿಸಿದ್ದ ಸಂಭ್ರಮದ ಕ್ಷಣವನ್ನು ಹಂಚಿಕೊಂಡಿತ್ತು.
"ಈ ದೃಶ್ಯದಲ್ಲಿ ಭಾರತೀಯರು ಯಾವ ನಾಟಕೀಯ ಗೆಲುವನ್ನು ಆಚರಿಸುತ್ತಿದ್ದಾರೆಂದು ನೀವು ಹೇಳಬಲ್ಲಿರಾ? " ಎಂದು ಟ್ವೀಟ್ ಮಾಡಿಕೊಂಡಿತ್ತು.
ಈ ಪೋಟೋವನ್ನು ನೋಡಿದ ತಕ್ಷಣ ಸಾವಿರಾರು ಅಭಿಮಾನಿಗಳು, 2002ರಲ್ಲಿ ಭಾರತೀಯ ತಂಡದ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಸಾಧಿಸಿದ ಅವಿಸ್ಮರಣೀಯ ಪಂದ್ಯದ ಒಂದು ಚಿತ್ರ ಎಂದು ಅಭಿಮಾನಿಗಳು ತಿಳಿಸಿದ್ದರು.
-
No 😉
— Nasser Hussain (@nassercricket) May 6, 2020 " class="align-text-top noRightClick twitterSection" data="
">No 😉
— Nasser Hussain (@nassercricket) May 6, 2020No 😉
— Nasser Hussain (@nassercricket) May 6, 2020
ಆದರೆ ಇಂಗ್ಲೆಂಡ್ ತಂಡದ ಆಗಿನ ನಾಯಕರಾಗಿದ್ದ ನಾಸಿರ್ ಹುಸೇನ್ ಮಾತ್ರ ಐಸಿಸಿ ಟ್ವೀಟ್ಗೆ ಉತ್ತರಿಸಿ ‘ನೊ’ ಎಂದು ಉತ್ತರಿಸಿದ್ದಾರೆ.
ನಾಟ್ವೆಸ್ಟ್ ಸರಣಿಯ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಟ್ರೆಸ್ಕೋತಿಕ್(109) ಹಾಗೂ ನಾಸಿರ್ ಹುಸೇನ್(115)ರ ಶತಕಗಳ ನೆರವಿನಿಂದ ಭಾರತಕ್ಕೆ 326 ರನ್ಗಳ ಟಾರ್ಗೆಟ್ ನೀಡಿತ್ತು. ಈ ಮೊತ್ತವನ್ನು ಬೆನ್ನತ್ತಿದ ಭಾರತ 146 ರನ್ಗಳಿಗೆ 5 ವಿಕೆಟ್ ಕಳೆದುಕೊಂಡು ಸೋಲಿನತ್ತ ಸಾಗುತ್ತಿತ್ತು.
ಆದರೆ ಯುವರಾಜ್ ಸಿಂಗ್(69) ಹಾಗೂ ಕೈಫ್ ಔಟಾಗದೆ 87 ರನ್ಗಳಿಸಿ ಭಾರತಕ್ಕೆ 2 ವಿಕೆಟ್ಗಳ ಅವಿಸ್ಮರಣೀಯ ಗೆಲುವು ತಂದುಕೊಟ್ಟಿತ್ತು. ಈ ಗೆಲುವಿನ ನಂತರ ಭಾರತ ತಂಡದ ನಾಯಕ ಸೌರವ್ ಗಂಗೂಲಿ ತಮ್ಮ ಜರ್ಸಿ ಬಿಚ್ಚಿ ಸಂಭ್ರಮಿಸಿದ್ದರು. ಈ ಗೆಲುವು ಭಾರತ ತಂಡದ ಪಾಲಿಗೆ ಸಿಕ್ಕ ಅತ್ಯಂತ ಜನಪ್ರಿಯ ಗೆಲುವಾಗಿ ಉಳಿದುಕೊಂಡಿದೆ.