ETV Bharat / sports

ತಂಡದ ಸಹ ಆಟಗಾರರು ನನ್ನನ್ನು ಹುಚ್ಚ ಎಂದು ಪರಿಗಣಿಸಿದ್ದರು: ಯೂನಿಸ್ ಖಾನ್

ತಂಡದ ಇತರ ಆಟಗಾರರ ಬಗ್ಗೆ ಸತ್ಯ ಮಾತನಾಡಿದ್ದಕ್ಕಾಗಿ ಸಹ ಆಟಗಾರರು ತಮ್ಮ ಮೇಲೆ ತೋರುತ್ತಿದ್ದ ಕಠಿಣ ವರ್ತನೆ ಬಗ್ಗೆ ಪಾಕ್ ತಂಡದ ಮಾಜಿ ನಾಯಕ ಯೂನಿಸ್ ಖಾನ್ ಮಾತನಾಡಿದ್ದಾರೆ.

teammates considered me a madman
ಯೂನಿಸ್ ಖಾನ್
author img

By

Published : May 25, 2020, 5:47 PM IST

ಲಾಹೋರ್: ತಂಡದ ನಾಯಕರಾಗಿದ್ದ ಸಮಯದಲ್ಲಿ ಸತ್ಯ ಮಾತನಾಡಿದ್ದಕ್ಕಾಗಿ ಇತರ ಆಟಗಾರರು ನನ್ನನ್ನು ತಲೆಕೆಟ್ಟವನು ಎಂದು ಹೇಳುವ ಮಟ್ಟಿಗೆ ಹೋಗಿದ್ದರು ಎಂದು ಪಾಕ್ ಕ್ರಿಕೆಟ್ ತಂಡದ ಮಾಜಿ ನಾಯಕ ಯೂನಿಸ್ ಖಾನ್ ತಮ್ಮ ಬೇಸರ ತೋಡಿಕೊಂಡಿದ್ದಾರೆ.

ಯೂನಿಸ್ ಖಾನ್ ಪಾಕಿಸ್ತಾನ ಕ್ರಿಕೆಟ್ ಇತಿಹಾಸದ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿದ್ದಾರೆ. ಪಾಕಿಸ್ತಾನದ ಪರ ಟೆಸ್ಟ್ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರಿದ್ದಾರೆ. ಇತ್ತೀಚೆಗೆ ತಂಡದ ಸದಸ್ಯರು ತಮ್ಮ ಮೇಲೆ ತೋರುತ್ತಿದ್ದ ಕಠಿಣ ವರ್ತನೆ ಬಗ್ಗೆ ಯೂನಿಸ್ ಮಾತನಾಡಿದ್ದಾರೆ.

teammates considered me a madman
ಯೂನಿಸ್ ಖಾನ್

ಆಗಾಗ್ಗೆ ಜೀವನದಲ್ಲಿ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತೀರಿ. ನೀವು ಸತ್ಯವನ್ನು ಮಾತನಾಡಿದರೆ, ನಿಮ್ಮನ್ನು ಹುಚ್ಚನಂತೆ ಪರಿಗಣಿಸಲಾಗುತ್ತದೆ. ಮೈದಾನದಲ್ಲಿ ದೇಶಕ್ಕಾಗಿ ಉತ್ತಮ ಪ್ರದರ್ಶನ ತೋರುತ್ತಿಲ್ಲ ಎಂದು ಹೇಳಿದ್ದೇ ನನ್ನ ತಪ್ಪು ಎಂಬಂತೆ ವರ್ತಿಸುತ್ತಿದ್ದರು ಎಂದು ಯೂನಿಸ್ ಹೇಳಿದ್ದಾರೆ.

ಆದಾಗ್ಯೂ, ಆಟಗಾರರು ತಮ್ಮ ವರ್ತನೆ ಬಗ್ಗೆ ವಿಷಾದಿಸುತ್ತಿದ್ದರು. ನಂತರ ನಾವೆಲ್ಲ ಒಂದು ತಂಡಕ್ಕಾಗಿ ಉತ್ತಮ ಪ್ರದರ್ಶನ ನೀಡುತ್ತಿದ್ದೆವು. ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ನನಗೆ ತಿಳಿದಿತ್ತು. ಯಾವಾಗಲೂ ಸತ್ಯವನ್ನು ಮಾತನಾಡುವುದು ಮತ್ತು ವಿನಮ್ರವಾಗಿರುವುದು ನನ್ನ ತಂದೆಯಿಂದ ನಾನು ಕಲಿತ ಪಾಠ ಎಂದು ಯುನಿಸ್ ಖಾನ್ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.