ETV Bharat / sports

ಟಿ20 ಇನ್ನಿಂಗ್ಸ್​ನಲ್ಲಿ ಹೆಚ್ಚು ಸಿಕ್ಸರ್​ ಸಿಡಿಸಿ ದಾಖಲೆ ಬರೆದ ಸ್ಕಾಟ್ಲೆಂಡ್​ನ ಜಾರ್ಜ್​ ಮುನ್ಸೆ

author img

By

Published : Sep 16, 2019, 9:36 PM IST

ಸ್ಕಾಟ್ಲೆಂಡ್​ ತಂಡದ ಆರಂಭಿಕ ಬ್ಯಾಟ್ಸ್​ಮನ್​ ಜಾರ್ಜ್​ ಮುನ್ಸೆ(127) ನೆದರ್​ಲ್ಯಾಂಡ್​ ವಿರುದ್ಧ 14 ಸಿಕ್ಸರ್​ ಸಿಡಿಸುವ ಮೂಲಕ ಆಸ್ಟ್ರೇಲಿಯಾದ ಆ್ಯರೋನ್​ ಫಿಂಚ್​ ದಾಖಲೆ ಸರಿಗಟ್ಟಿದ್ದಾರೆ.

Munsey

ಡಬ್ಲಿನ್​: ಸ್ಕಾಟ್ಲೆಂಡ್​ ತಂಡದ ಆರಂಭಿಕ ಬ್ಯಾಟ್ಸ್​ಮನ್​ ಜಾರ್ಜ್​ ಮುನ್ಸೆ ನೆದರ್​ಲ್ಯಾಂಡ್​ ವಿರುದ್ಧ 14 ಸಿಕ್ಸರ್​ ಸಿಡಿಸುವ ಮೂಲಕ ಆಸ್ಟ್ರೇಲಿಯಾದ ಆ್ಯರೋನ್​ ಫಿಂಚ್​ ದಾಖಲೆ ಸರಿಗಟ್ಟಿದ್ದಾರೆ.

ಐರ್ಲೆಂಡ್​ನಲ್ಲಿ ನಡೆಯುತ್ತಿರುವ ತ್ರಿಕೋನ ಸರಣಿಯಲ್ಲಿ ಸ್ಕಾಟ್ಲೆಂಡ್​ ತಂಡ ನೆದರ್​ಲ್ಯಾಂಡ್ ವಿರುದ್ಧ ದಾಖಲೆಯ 252 ರನ್​ಗಳಿಸಿದೆ. ಈ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದಿದ್ದ ಜಾರ್ಜ್​ ಮುನ್ಸೆ(127) ಹಾಗೂ ಕೈಲ್​ ಕೋಯಟ್ಜರ್(89)​ ಮೊದಲ ವಿಕೆಟ್​ ಜೊತೆಯಾಟದಲ್ಲಿ 200 ರನ್​ಗಳ ದಾಖಲೆಯ ಜೊತೆಯಾಟ ನೀಡಿದರು. ಸ್ಕಾಟ್ಲೆಂಡ್​ ಒಟ್ಟಾರೆ 20 ಓವರ್​ಗಳಲ್ಲಿ 252 ರನ್​ಗಳಿಸಿತು.

ಈ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದಿದ್ದ ಜಾರ್ಜ್​ ಮುನ್ಸೆ 56 ಎಸೆತಗಳಲ್ಲಿ 14 ಸಿಕ್ಸರ್​ ಹಾಗೂ 5 ಬೌಂಡರಿ ಸಹಿತ 127 ರನ್​ಗಳ ರನ್​ ಸಿಡಿಸಿದರು. ಟಿ20 ಕ್ರಿಕೆಟ್​ನಲ್ಲಿ 14 ಸಿಕ್ಸರ್​ ಸಿಡಿಸುವ ಮೂಲಕ ಚುಟುಕು ಕ್ರಿಕೆಟ್​ನಲ್ಲಿ ಅತಿ ಹೆಚ್ಚು ಸಿಕ್ಸರ್​ ಸಿಡಿಸಿದ ದಾಖಲೆಯನ್ನು ಹಂಚಿಕೊಂಡರು.

ಟಿ20 ಕ್ರಿಕೆಟ್​ನ ಪಂದ್ಯವೊಂದರಲ್ಲಿ ಹೆಚ್ಚು ಸಿಕ್ಸರ್​ ಸಿಡಿಸಿರುವ ದಾಖಲೆ ಅಫ್ಘಾನಿಸ್ತಾನದ ಹಜರತ್ತುಲ್ಹಾ ಝಾಜೈ ಅವರು ಮೊದಲ ಸ್ಥಾನದಲ್ಲಿದ್ದಾರೆ. ಅತಿ ಹೆಚ್ಚು ವೈಯಕ್ತಿಕ ಸ್ಕೋರ್​ ದಾಖಲೆ ಕೂಡ ಅವರ ಹೆಸರಿನಲ್ಲಿಯೇ ಇದೆ.​

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.