ಅಬುಧಾಬಿ: ಮುಂಬೈ ಇಂಡಿಯನ್ಸ್ ತಂಡ ಸೆಪ್ಟೆಂಬರ್ 18ರಿಂದ ಆರಂಭವಾಗಲಿರುವ 13ನೇ ಆವೃತ್ತಿಯ ಐಪಿಎಲ್ಗಾಗಿ ನೂತನ ಜರ್ಸಿ ಬಿಡುಗಡೆ ಮಾಡಿದೆ.
ಅಬುಧಾಬಿಯಲ್ಲಿ ನಿನ್ನೆಯಷ್ಟೆ ಅಭ್ಯಾಸ ಶುರುಮಾಡಿರುವ ಹಾಲಿ ಚಾಂಪಿಯನ್ ನೂತನ ಜರ್ಸಿ ಘೋಷಣೆಯ ವಿಚಾರವನ್ನು ಟೀಸರ್ ಮೂಲಕ ತಮ್ಮ ಜಾಲಾತಾಣದಲ್ಲಿ ಹಂಚಿಕೊಂಡಿದೆ.
ಈ ಜರ್ಸಿ ಮೊದಲಿದ್ದ ನೀಲಿಬಣ್ಣದ ಬದಲಾಗಿ ತಿಳಿ ನೀಲಿಯಿಂದ ಕೂಡಿದೆ. ಜೊತೆಗೆ ಭುಜದಲ್ಲಿ ಚಿನ್ನದ ಬಣ್ಣದ ಗೆರೆಗಳಿವೆ. ಪ್ಯಾಂಟ್ ಕೂಡ ಕಪ್ಪು ನೀಲಿ ಬಣ್ಣ ಮಿಶ್ರಿತವಾಗಿದೆ.
-
👕 BLUE. ✨GOLD. 👊🏻AALA RE!!!
— Mumbai Indians (@mipaltan) August 30, 2020 " class="align-text-top noRightClick twitterSection" data="
😍 The wait is over. Paltan, here’s our official jersey for #Dream11IPL! 💙
Pre-order on: https://t.co/14Jd096jBN#OneFamily #MumbaiIndians #MI #Dream11IPL @hydroman_333 @thesouledstore pic.twitter.com/4eKZYWjQPV
">👕 BLUE. ✨GOLD. 👊🏻AALA RE!!!
— Mumbai Indians (@mipaltan) August 30, 2020
😍 The wait is over. Paltan, here’s our official jersey for #Dream11IPL! 💙
Pre-order on: https://t.co/14Jd096jBN#OneFamily #MumbaiIndians #MI #Dream11IPL @hydroman_333 @thesouledstore pic.twitter.com/4eKZYWjQPV👕 BLUE. ✨GOLD. 👊🏻AALA RE!!!
— Mumbai Indians (@mipaltan) August 30, 2020
😍 The wait is over. Paltan, here’s our official jersey for #Dream11IPL! 💙
Pre-order on: https://t.co/14Jd096jBN#OneFamily #MumbaiIndians #MI #Dream11IPL @hydroman_333 @thesouledstore pic.twitter.com/4eKZYWjQPV
6 ದಿನಗಳ ಕ್ವಾರಂಟೈನ್ ಮುಗಿಸಿರುವ ರೋಹಿತ್ ಪಡೆ ಅಬುಧಾಬಿ ಕ್ರಿಕೆಟ್ ಅಸೋಸಿಯೇಷನ್ನಲ್ಲಿ ತರಬೇತಿ ಆರಂಭಿಸಿದೆ.ಶನಿವಾರ ನಾಯಕ ಹಿಟ್ಮ್ಯಾನ್ ಕೂಡ ನೆಟ್ಸ್ನಲ್ಲಿ ಬ್ಯಾಟಿಂಗ್ ಅಭ್ಯಾಸ ನಡೆಸಿದ್ದಾರೆ.
ಮುಂಬೈ ಇಂಡಿಯನ್ಸ್ ಬಿಡುಗಡೆ ಮಾಡಿದ್ದ ವಿಡೀಯೋದಲ್ಲಿ ಮಾತನಾಡಿದ್ದ ರೋಹಿತ್, ಇದು ನಮ್ಮ ಮೊದಲ ತರಬೇತಿ ಸೆಷನ್. ದೀರ್ಘ ಸಮಯದ ನಂತರ ನೆಟ್ಸ್ನಲ್ಲಿ ಅಭ್ಯಾಸ ಮಾಡಲಿದ್ದೇವೆ. ಕೇವಲ ಒಂದು ಗಂಟೆ ಮಾತ್ರ ಅವಕಾಶವಿದೆ. ಈ ಸಮಯವನ್ನು ನಾವು ಸಂಪೂರ್ಣವಾಗಿ ಬಳಿಸಿಕೊಳ್ಳಲಿದ್ದೇವೆ ಎಂದು ತಿಳಿಸಿದ್ದರು.