ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ನ ಮುಂದಿನ ಆವೃತ್ತಿಗೋಸ್ಕರ ಎಲ್ಲಾ ಫ್ರಾಂಚೈಸಿಗಳು ಈಗಾಗಲೇ ತಯಾರಿ ನಡೆಸಿದ್ದು, ಕೆಲವೊಂದು ದೇಶಿ ಪ್ರತಿಭೆಗಳಿಗೆ ಅವಕಾಶ ನೀಡಲು ಪ್ಲಾನ್ ಹಾಕಿಕೊಂಡಿವೆ.
-
Some footage of the 16 yrs old khrievitso Kense from the #SyedMushtaqAliTrophy2021 @abumetha @BCCIdomestic @TNCACricket pic.twitter.com/tNyOZGqiYN
— Hyunilo Anilo Khing (@hyunilokhing) January 28, 2021 " class="align-text-top noRightClick twitterSection" data="
">Some footage of the 16 yrs old khrievitso Kense from the #SyedMushtaqAliTrophy2021 @abumetha @BCCIdomestic @TNCACricket pic.twitter.com/tNyOZGqiYN
— Hyunilo Anilo Khing (@hyunilokhing) January 28, 2021Some footage of the 16 yrs old khrievitso Kense from the #SyedMushtaqAliTrophy2021 @abumetha @BCCIdomestic @TNCACricket pic.twitter.com/tNyOZGqiYN
— Hyunilo Anilo Khing (@hyunilokhing) January 28, 2021
ಅದೇ ರೀತಿ ಮುಂಬೈ ಇಂಡಿಯನ್ಸ್ ತಂಡ ಕೂಡ ಇದೀಗ 16 ವರ್ಷದ ನಾಗಾಲ್ಯಾಂಡ್ ಸ್ಪಿನ್ನರ್ ಮೇಲೆ ಕಣ್ಣು ಹಾಕಿದ್ದು, ಟ್ರಯಲ್ಗೆ ಬರುವಂತೆ ಆಹ್ವಾನ ನೀಡಿದೆ. ಸಯ್ಯದ್ ಮುಸ್ತಾಕ್ ಅಲಿ ಕ್ರಿಕೆಟ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಖ್ರಿವಿಟ್ಸೊ ಕೆನ್ಸ್, ತಾವು ಆಡಿರುವ ನಾಲ್ಕು ಪಂದ್ಯಗಳಿಂದ 7 ವಿಕೆಟ್ ಪಡೆದುಕೊಂಡಿದ್ದು, ಇದರಲ್ಲಿ ಎರಡು ಪಂದ್ಯಗಳಿಂದ ಆರು ವಿಕೆಟ್ ಕಬಳಿಸಿದ್ದಾರೆ. ಇವರ ಪ್ರದರ್ಶನದಿಂದ ಫಿದಾ ಆಗಿರುವ ಮುಂಬೈ ಇಂಡಿಯನ್ಸ್, ಇದೀಗ ಈ ಚಾನ್ಸ್ ನೀಡಿದೆ.
ಲೆಗ್ ಸ್ಪಿನ್ನರ್ ಆಗಿರುವ ಖ್ರಿವಿಟ್ಸೊ ಕೆನ್ಸ್ ಅದ್ಭುತವಾಗಿ ಬೌಲಿಂಗ್ ಮಾಡುವ ಸಾಮರ್ಥ್ಯ ಹೊಂದಿರುವ ಕಾರಣ ಅವರಿಗೆ ಈ ಅವಕಾಶ ಸಿಕ್ಕಿದೆ ಎಂದು ನಾಗಾಲ್ಯಾಂಡ್ ಕ್ರಿಕೆಟ್ ಅಸೋಸಿಯೇಷನ್ ಹೇಳಿಕೊಂಡಿದೆ.
ಈಗಾಗಲೇ ಮುಂಬೈ ಇಂಡಿಯನ್ಸ್ ತಂಡ ಕಾಶ್ಮೀರದ ವೇಗದ ಬೌಲರ್ವೊಬ್ಬರಿಗೆ ಟ್ರಯಲ್ಗೆ ಆಹ್ವಾನ ನೀಡಿದೆ. ಮುಂಬೈ ಇಂಡಿಯನ್ಸ್ ತಂಡ ಅನೇಕ ಬೌಲರ್ಗಳನ್ನು ಕೈಬಿಟ್ಟಿದ್ದು, ಅದರಲ್ಲಿ ಮಿಚೆಲ್ ಮೆಕ್ ಲಾಗೆನ್, ನಾಥನ್ ಕೌಲ್ಟರ್ ನೇಲ್, ಜೇಮ್ಸ್ ಪ್ಯಾಟಿನ್ಸನ್ ಹಾಗೂ ರುದರ್ಫೋರ್ಡ್ ಸೇರಿಕೊಂಡಿದ್ದಾರೆ. ಜತೆಗೆ ಲಸಿತ್ ಮಲಿಂಗಾ ಕೂಡ ತಂಡದಿಂದ ಹೊರಗುಳಿಯಲಿದ್ದಾರೆ.