ಮುಂಬೈ:13ನೇ ಆವೃತ್ತಿಯ ಐಪಿಎಲ್ನಲ್ಲಿ 5ನೇ ಬಾರಿಗೆ ಟ್ರೋಫಿ ಎತ್ತಿ ಹಿಡಿರುವ ಮುಂಬೈ ಇಂಡಿಯನ್ಸ್ ಮತ್ತೊಮ್ಮೆ ಭಾರತದ ಅತ್ಯಂತ ಯಶಸ್ವಿ ಕ್ರೀಡಾ ಕ್ಲಬ್ ಎನಿಸಿಕೊಂಡಿದೆ. ಜೊತೆಗೆ ಜಾಗತಿಕವಾಗಿ ವೇಗವಾಗಿ ಬೆಳೆಯುತ್ತಿರುವ ಭಾರತೀಯ ಕ್ರೀಡಾ ಬ್ರಾಂಡ್ ಆಗಿ ತನ್ನ ಪ್ರಾಬಲ್ಯ ಹೆಚ್ಚಿಸಿಕೊಂಡಿದೆ.
ಐಪಿಎಲ್ ಚಾಂಪಿಯನ್ ಆಗಿರುವ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಸಾಮಾಜಿಕ ಜಾಲಾತಾಣಗಳಲ್ಲಿ (ಫೇಸ್ಬುಕ್, ಇನ್ಸ್ಟಾಗ್ರಾಂ ಮತ್ತು ಟ್ವಿಟರ್) ಹೆಚ್ಚು ತೊಡಗಿಸಿಕೊಂಡ ಫ್ರಾಂಚೈಸಿ ಎಂಬ ಹೆಗ್ಗಳಿಕೆಗೆ ಸತತ ಮೂರನೇ ವರ್ಷವೂ ಪಾತ್ರವಾಗಿದೆ. ಕೊರೊನಾ ಸಾಂಕ್ರಾಮಿಕ ಹಿನ್ನೆಲೆ ಅಭಿಮಾನಿಗಳೊಂದಿಗೆ ಸಂಪರ್ಕ ಅಸಾಧ್ಯವಾಗಿತ್ತು. ಆದರೆ, ಮುಂಬೈ ಇಂಡಿಯನ್ಸ್ ಡಿಜಿಟಲ್ ಇನ್ನೋವೇಷನ್ ಮೂಲಕ ಅಭಿಮಾನಿಗಳ ಜೊತೆ ಮಿಲಿಯನ್ ಡಾಲರ್ ಟೂರ್ನಿಯಲ್ಲಿ ಉತ್ತಮ ಬಾಂಧವ್ಯ ಸಾಧಿಸುವಲ್ಲಿ ಯಶಸ್ವಿಯಾಗಿತ್ತು.
ಇದನ್ನು ಓದಿ:ಮೊದಲ ಟೆಸ್ಟ್ನಲ್ಲಿ ಭಾರತೀಯ ಬ್ಯಾಟ್ಸ್ಮನ್ಗಳ ವೈಫಲ್ಯಕ್ಕೆ ಕಾರಣ ಬಿಚ್ಚಿಟ್ಟ ತೆಂಡೂಲ್ಕರ್
ಅಂಕಿ - ಅಂಶಗಳ ಪ್ರಕಾರ ಮುಂಬೈ ಇಂಡಿಯನ್ಸ್ 2020 ಐಪಿಎಲ್ನ 60 ದಿನಗಳಲ್ಲಿ ಫೇಸ್ಬುಕ್, ಟ್ವಟರ್ ಮತ್ತು ಇನ್ಸ್ಟಾಗ್ರಾಂ ಮೂಲಕ ಸುಮಾರು 317 ಮಿಲಿಯನ್ ಅಭಿಮಾನಿಗಳ ಜೊತೆ ಸಂವಹನ ಸಾಧಿಸಿದೆ. ಇದು ಐಪಿಎಲ್ನಲ್ಲಿ ಹೆಚ್ಚು ಎಂಗೇಜ್ ಆದ ಕ್ಲಬ್ ಎಂಬ ಕಿರೀಟವನ್ನು ಪಡೆದುಕೊಂಡಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು 277.65 ಮಿಲಿಯನ್, ಹಾಗೂ ಸಿಎಸ್ಕೆ 189,67 ಮಿಲಿಯನ್ ಅಭಿಮಾನಿಗಳ ಜೊತೆಗೆ ಸಾಮಾಜಿಕ ಜಾಲಾತಾಣಗಳಲ್ಲಿ ಸಂವಹನ ಸಾಧಿಸಿ ನಂತರದ ಸ್ಥಾನ ಪಡೆದುಕೊಂಡಿವೆ.