ಲಂಡನ್: ಕ್ರಿಕೆಟ್ ಬೈಬಲ್ ಎಂದೇ ಕರೆಸಿಕೊಳ್ಳುವ ವಿಸ್ಡನ್ ಪ್ರಕಟಿಸಿದ ದಶಕದ ಏಕದಿನ ತಂಡದಲ್ಲಿ ಭಾರತದ ಮೂವರು ಆಟಗಾರರು ಅವಕಾಶ ಪಡೆದಿದ್ದಾರೆ.
ಕ್ರಿಕೆಟ್ ಇತಿಹಾಸದ ಅತ್ಯಂತ ಹಳೆಯ ಪ್ರಶಸ್ತಿಯಾದ ವಿಸ್ಡನ್ ಕಳೆದು 10 ವರ್ಷಗಳ ಪ್ರದರ್ಶನದ ಮೇರೆಗೆ ತನ್ನ ಸಲಹಾ ಸಮಿತಿಯ ಚರ್ಚೆಯ ಆಧಾರದ ಮೇಲೆ 11 ಆಟಗಾರರ ಹೆಸರನ್ನು ಶನಿವಾರ ಪ್ರಕಟಿಸಿದೆ.
ಭಾರತದ ಏಕದಿನ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ, ಪ್ರಸ್ತುತ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ವಿಸ್ಡನ್ ದಶಕಗಳ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.
ಇನ್ನು, ರೋಹಿತ್ ಜೊತೆ ಆರಂಭಿಕನಾಗಿ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ವಿರಾಟ್ ಕೊಹ್ಲಿ ಮೂರನೇ ಸ್ಥಾನದಲ್ಲಿದ್ದಾರೆ. 4 ರಲ್ಲಿ ಎಬಿ ಡಿ ವಿಲಿಯರ್ಸ್, 5 ಇಂಗ್ಲೆಂಡ್ ತಂಡದ ಜೋಸ್ ಬಟ್ಲರ್ 6ನೇ ಕ್ರಮಾಂಕದಲ್ಲಿ, ಎಂಎಸ್ ಧೋನಿ 7ನೇ ಸ್ಥಾನದಲ್ಲಿದ್ದರೆ ಬಾಂಗ್ಲಾ ಆಲ್ರೌಂಡರ್ ಶಕಿಬ್ ಅಲ್ ಹಸನ್ ಸಹ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.
ಬೌಲಿಂಗ್ ವಿಭಾಗದಲ್ಲಿ ಶ್ರೀಲಂಕಾದ ಲಸಿತ್ ಮಲಿಂಗಾ, ದಕ್ಷಿಣ ಆಫ್ರಿಕಾದ ಡೇಲ್ ಸ್ಟೈನ್, ನ್ಯೂಜಿಲ್ಯಾಂಡ್ನ ಟ್ರೆಂಟ್ ಬೌಲ್ಟ್ ಹಾಗೂ ಆಸ್ಟ್ರೇಲಿಯಾದ ಡೇಲ್ ಸ್ಟೈನ್ ಅವಕಾಶ ಪಡೆದಿದ್ದಾರೆ.
-
🚨ODI team of the decade🚨
— Wisden (@WisdenCricket) December 21, 2019 " class="align-text-top noRightClick twitterSection" data="
It wasn't easy, but after an intense debate, our panel settled on the following names.
What's your take?https://t.co/ITE0y4JnHy
">🚨ODI team of the decade🚨
— Wisden (@WisdenCricket) December 21, 2019
It wasn't easy, but after an intense debate, our panel settled on the following names.
What's your take?https://t.co/ITE0y4JnHy🚨ODI team of the decade🚨
— Wisden (@WisdenCricket) December 21, 2019
It wasn't easy, but after an intense debate, our panel settled on the following names.
What's your take?https://t.co/ITE0y4JnHy
ಈ ತಂಡದಲ್ಲಿ ಪಾಕಿಸ್ತಾನ ಹಾಗೂ ವೆಸ್ಟ್ ಇಂಡೀಸ್ನ ಯಾವುದೇ ಒಬ್ಬ ಆಟಗಾರನನ್ನು ವಿಸ್ಡನ್ ಸಮಿತಿ ತನ್ನ ದಶಕಗಳ ತಂಡಕ್ಕೆ ಪರಿಗಣಿಸಿಲ್ಲ.
ವಿಸ್ಡನ್ ಪ್ರಕಟಿಸಿದ ದಶಕದ ತಂಡ ಹೀಗಿದೆ:
ರೋಹಿತ್ ಶರ್ಮಾ, ಡೇವಿಡ್ ವಾರ್ನರ್, ವಿರಾಟ್ ಕೊಹ್ಲಿ, ಎಬಿ ಡಿ ವಿಲಿಯರ್ಸ್, ಜೋಸ್ ಬಟ್ಲರ್, ಎಂ.ಎಸ್. ಧೋನಿ, ಶಕೀಬ್ ಅಲ್ ಹಸನ್, ಲಸಿತ್ ಮಲಿಂಗಾ, ಮಿಚೆಲ್ ಸ್ಟಾರ್ಕ್, ಟ್ರೆಂಟ್ ಬೌಲ್ಟ್, ಡೇಲ್ ಸ್ಟೇನ್