ETV Bharat / sports

ಇಂದಿನಿಂದ 15 ದಿನ ಕಾಶ್ಮೀರದಲ್ಲಿ ಗಡಿ ಕಾಯಲಿದ್ದಾರೆ ಧೋನಿ! - ಲೆಫ್ಟಿನೆಂಟ್​ ಕರ್ನಲ್​ ಧೋನಿ

ಭಾರತ ಕ್ರಿಕೆಟ್​ ತಂಡದ ಮಾಜಿ ನಾಯಕ ಹಾಗೂ ವಿಕೆಟ್​ ಕೀಪರ್​ ಮಹೇಂದ್ರ ಸಿಂಗ್​ ಧೋನಿ ಇಂದಿನಿಂದ ಆಗಸ್ಟ್​ 15ರವರೆಗೆ ಕಾಶ್ಮೀರದಲ್ಲಿ ಇತರ ಸೈನಿಕರೊಂದಿಗೆ ಸೇನಾ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

MS Dhoni
author img

By

Published : Jul 31, 2019, 1:42 PM IST

Updated : Jul 31, 2019, 1:56 PM IST

ನವದೆಹಲಿ: ಭಾರತ ಕ್ರಿಕೆಟ್​ ತಂಡದ ಮಾಜಿ ನಾಯಕ ಹಾಗೂ ವಿಕೆಟ್​ ಕೀಪರ್​ ಮಹೇಂದ್ರ ಸಿಂಗ್​ ಧೋನಿ ಇಂದಿನಿಂದ ಆಗಸ್ಟ್​ 15ರವರೆಗೆ ಕಾಶ್ಮೀರದಲ್ಲಿ ಇತರ ಸೈನಿಕರೊಂದಿಗೆ ಸೇನಾ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

2011ರಲ್ಲಿ ಭಾರತೀಯ ಅರೆಸೇನಾ ಪಡೆಯಲ್ಲಿ ಲೆಫ್ಟಿನೆಂಟ್‌ ಕರ್ನಲ್‌ ಗೌರವ ಹುದ್ದೆ ಹೊಂದಿರುವ ಧೋನಿ ಇಂದಿನಿಂದ ಜಮ್ಮು-ಕಾಶ್ಮೀರದಲ್ಲಿ ಸೈನಿಕನಾಗಿ ಸೇವೆ ಸಲ್ಲಿಸಲಿದ್ದಾರೆ. ಈಗಾಗಲೆ ಪ್ಯಾರಾಟ್ರೋಪರ್​ ಆಗಿ ತರಬೇತಿ ಪಡೆದಿದ್ದಾರೆ. ಕಾಶ್ಮೀರದಲ್ಲಿ ಸೇವೆ ಸಲ್ಲಿಸುವ ಅವಕಾಶ ಕೋರಿದ್ದ ಧೋನಿ ಬೇಡಿಕೆಗೆ ಒಪ್ಪಿಗೆ ಸೂಚಿಸಿರುವ ಭಾರತೀಯ ಸೇನೆ, ಧೋನಿಯನ್ನು ಜುಲೈ 31ರಿಂದ ಆ.15ವರೆಗೂ ಜಮ್ಮು ಮತ್ತು ಕಾಶ್ಮೀರದಲ್ಲಿ ಕರ್ತವ್ಯಕ್ಕೆ ನಿಯೋಜಿಸಿದೆ.

ಇಂದಿನಿಂದ ​15 ದಿನಗಳವರೆಗೆ ಧೋನಿ ಅರೆಸೇನಾಪಡೆಯ ವಿಕ್ಟರ್‌ ಫೋರ್ಸ್​ನೊಂದಿಗೆ ಗಾರ್ಡ್​ ಆಗಿ ಗಸ್ತು ತಿರುಗುವುದು, ಪಹರೆ ವಹಿಸುವುದನ್ನು ಮಾಡಲಿದ್ದಾರೆ. ಈ ಪಡೆಯ ಸೈನಿಕರ ಜೊತೆಜೊತೆಗೇ ಇದ್ದು, ಅವರು ನಿರ್ವಹಿಸುವ ಎಲ್ಲ ಕೆಲಸಗಳನ್ನೂ ಧೋನಿ ನಿರ್ವಹಿಸಲಿದ್ದಾರೆ ಎಂದು ಸೇನೆ ತಿಳಿಸಿದೆ.

ಮಿಲಿಯನ್​ ಡಾಲರ್​ಗಳ ಬ್ರಾಂಡ್​ ಮೌಲ್ಯ ಹೊಂದಿರುವ ಧೋನಿ ಅಂತಹವರು ಸೇನೆಯಲ್ಲಿ ತೊಡಗಿಸಿಕೊಳ್ಳುವುದರಿಂದ ರಕ್ಷಣಾ ಪಡೆಯ ದಕ್ಷತೆಗೆ ಹೆಸರು ಬರಲಿದೆ. ಅದರಲ್ಲೂ ಯುವ ಪೀಳಿಗೆಗೆ ಸೇನೆ ಮೇಲೆ ಗೌರವ ಹೆಚ್ಚಲಿದ್ದು, ಸೇನೆ ಸೇರಲು ನೆರವಾಗುತ್ತದೆ ಎಂದು ಧೋನಿ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Intro:Body:Conclusion:
Last Updated : Jul 31, 2019, 1:56 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.