ಮುಂಬೈ: ಭಾರತದ ಸ್ಪೋಟಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಸೀಮಿತ ಓವರ್ಗಳ ಕ್ರಿಕೆಟ್ನಲ್ಲಿ ವಿಶ್ವಶ್ರೇಷ್ಠ ಬ್ಯಾಟ್ಸ್‌ಮನ್ ಆಗಿ ಬೆಳೆದು ನಿಂತಿರುವುದಕ್ಕೆ ಎಂ.ಎಸ್. ಧೋನಿ ಕಾರಣ ಎಂದು ಗೌತಮ್ ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.
2007ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದಾಗಿನಿಂದ ರೋಹಿತ್ ಮಧ್ಯಮ ಕ್ರಮಾಂಕದಲ್ಲಿ ರನ್ಗಳಿಸಲಾಗದೆ ನರಳಾಡುತ್ತಿದ್ದರು. ಜೊತೆಗೆ ಸ್ಥಿರತೆ ಕಾಪಾಡಿಕೊಳ್ಳುವುದು ಅವರಿಗೆ ಕಷ್ಟವಾಗಿತ್ತು.

ರೋಹಿತ್ ಶರ್ಮಾ ಇಂದು ಶ್ರೇಷ್ಠಮಟ್ಟಕ್ಕೆ ಬೆಳೆದು ನಿಂತಿದ್ದಾರೆ ಎಂದರೆ ಅದಕ್ಕೆ ಎಂ.ಎಸ್. ಧೋನಿ ಕಾರಣ ಎಂದು ಭಾರತ ತಂಡದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ಗಂಭೀರ್ ತಿಳಿಸಿದ್ದಾರೆ.

ನೀವು ಆಯ್ಕೆ ಸಮಿತಿ ಮತ್ತು ತಂಡದ ನಿರ್ವಹಣಾ ಮಂಡಳಿಯ ಬಗ್ಗೆ ಮಾತನಾಡಬಹುದು. ಆದರೆ ನಿಮಗೆ ನಾಯಕನ ಬೆಂಬಲ ಸಿಗದಿದ್ದರೆ ಎಲ್ಲವೂ ನಿಷ್ಪ್ರಯೋಜಕ. ಎಲ್ಲವೂ ನಾಯಕನ ಕೈಯಲ್ಲೇ ಇರುತ್ತದೆ. ಧೋನಿ ರೋಹಿತ್ಗೆ ಬೆಂಬಲ ನೀಡಿದಷ್ಟು ಬೆಂಬಲವನ್ನು ಬೇರೆ ಯಾವುದೇ ಆಟಗಾರನಿಗೆ ನೀಡಿಲ್ಲ ಎಂದವರು ಹೇಳಿದ್ದಾರೆ.
ರೋಹಿತ್ 33ನೇ ಜನ್ಮದಿನಕ್ಕೆ ಕಾಲಿಟ್ಟ ವೇಳೆ ಗಂಭೀರ್ 'ರೋಹಿತ್ ಶರ್ಮಾ ವಿಶ್ವದ ಅತ್ಯಂತ ಶ್ರೇಷ್ಠ ವೈಟ್ಬಾಲ್ ಕ್ರಿಕೆಟಿಗ' ಎಂದು ಬಣ್ಣಿಸಿದ್ದರು.