ದುಬೈ: ಐಪಿಎಲ್ನ ನಿನ್ನೆಯ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ 20 ರನ್ಗಳ ಗೆಲುವು ದಾಖಲು ಮಾಡಿದೆ. ಈ ಮೂಲಕ ಫ್ಲೇ-ಆಫ್ ಕನಸು ಜೀವಂತವಾಗಿರಿಸಿಕೊಂಡಿದೆ. ಆದರೆ, ಮೈದಾನದಲ್ಲಿ ಧೋನಿ ವರ್ತನೆಯಿಂದಾಗಿ ಅಂಪೈರ್ ತಮ್ಮ ನಿರ್ಧಾರವನ್ನೇ ಬದಲಾಯಿಸಿದ್ರಾ ಎಂಬ ಮಾತು ಕೇಳಿ ಬರಲು ಶುರುವಾಗಿದೆ.
-
FairPlay award goes to #CSK pic.twitter.com/ZiRUIaMCiu
— ✨💫 (@Kourageous__) October 13, 2020 " class="align-text-top noRightClick twitterSection" data="
">FairPlay award goes to #CSK pic.twitter.com/ZiRUIaMCiu
— ✨💫 (@Kourageous__) October 13, 2020FairPlay award goes to #CSK pic.twitter.com/ZiRUIaMCiu
— ✨💫 (@Kourageous__) October 13, 2020
ಚೆನ್ನೈ ಸೂಪರ್ ಕಿಂಗ್ಸ್ ತಂಡ ಶಾರ್ದೂಲ್ ಠಾಕೂರ್ ಎಸೆದ 19ನೇ ಓವರ್ನಲ್ಲಿ ಈ ಘಟನೆ ನಡೆದಿದೆ. ಶಾರ್ದೂಲ್ ಠಾಕೂರ್ ಮೊದಲನೇ ಎಸೆತ ವೈಡ್ ಹಾಕಿದ್ದಾರೆ. ಇದಾದ ಬಳಿಕ ಎರಡನೇ ಎಸೆತ ಕೂಡ ಅದೇ ರೀತಿಯಲ್ಲಿ ಹಾಕಿದ್ದರಿಂದ ಅಂಪೈರ್ ಅದನ್ನ ವೈಡ್ ನೀಡಲು ಮುಂದಾಗುವುದರಲ್ಲಿದ್ದರು. ಆದರೆ, ವಿಕೆಟ್ ಕೀಪಿಂಗ್ ಮಾಡ್ತಿದ್ದ ಧೋನಿ ಕೋಪದಲ್ಲೇ ಸನ್ನೆ ಮಾಡಿದ್ದಾರೆ. ಹೀಗಾಗಿ ಧೋನಿ ತಾವು ತೆಗೆದುಕೊಳ್ಳುವ ನಿರ್ಧಾರದಲ್ಲೇ ಬದಲಾವಣೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇನ್ನು ಅಂಪೈರ್ ನಿರ್ಧಾರ ನೋಡಿರುವ ಹೈದರಾಬಾದ್ ತಂಡದ ಕ್ಯಾಪ್ಟನ್ ವಾರ್ನರ್ ಕೂಡ ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಧೋನಿ ನಡೆ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಕೂಲ್ ಕ್ಯಾಪ್ಟನ್ ಎಂದು ಹೆಸರು ಗಳಿಸಿರುವ ಧೋನಿ ದಿಢೀರ್ ಆಗಿ ಈ ರೀತಿಯಾಗಿ ನಡೆದುಕೊಳ್ಳಲು ಕಾರಣ ಏನು ಎಂಬುದು ಅನೇಕರ ಪ್ರಶ್ನೆಯಾಗಿದೆ.