ETV Bharat / sports

ಧೋನಿ ಇನ್ಮುಂದೆ ನಮ್ಮ ಆಯ್ಕೆ ಅಲ್ಲ, ನಿವೃತ್ತಿ ಘೋಷಣೆಗೆ ಕಾಯುತ್ತಿದ್ದೇವೆ: ಪ್ರಸಾದ್​ - ಟೀಂ ಇಂಡಿಯಾ

ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್​ ಧೋನಿ ತಮ್ಮ ಅಂತಿಮ ನಿರ್ಧಾರ ಘೋಷಣೆ ಮಾಡಬೇಕಾಗಿದೆ ಎಂದು ಆಯ್ಕೆ ಸಮಿತಿ ಮುಖ್ಯಸ್ಥ ತಿಳಿಸಿದ್ದಾರೆ. ಈ ಮೂಲಕ ಮಾಜಿ ನಾಯಕನ ನಿವೃತ್ತಿಗೆ ಆಯ್ಕೆ ಸಮಿತಿ ಹಿಂಟ್​ ನೀಡಿದಂತಿದೆ.

ಎಂಎಸ್​ ಧೋನಿ
author img

By

Published : Jul 15, 2019, 4:45 PM IST

ನವದೆಹಲಿ: ವಿಶ್ವಕಪ್​ ಸೆಮಿಫೈನಲ್​​ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲು ಕಂಡು ಟೂರ್ನಿಯಿಂದ ಹೊರಬಿದ್ದ ಬಳಿಕ ಅನೇಕ ಟೀಕೆ-ಟಿಪ್ಪಣಿಗಳು ಕೇಳಿ ಬರುತ್ತಿವೆ. ಈ ನಡುವೆ, ವೆಸ್ಟ್​ ಇಂಡೀಸ್​ ಟೂರ್​ಗಾಗಿ ಇಂಡಿಯಾ ತಂಡವನ್ನ ಪ್ರಕಟ ಮಾಡಬೇಕಾಗಿದ್ದು, ಇದೀಗ ಆಯ್ಕೆ ಸಮಿತಿ ಕೆಲವೊಂದು ಮಹತ್ವದ ನಿರ್ಧಾರ ಕೈಗೊಳ್ಳಲು ಮುಂದಾಗಿದೆ.

ಸಧ್ಯಕ್ಕೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಎಂಎಸ್​ ಧೋನಿ ಕ್ರಿಕೆಟ್​ ಜೀವನದ ಬಗ್ಗೆ ತಮ್ಮ ಅಂತಿಮ ನಿರ್ಧಾರ ಘೋಷಣೆ ಮಾಡಬೇಕಾಗಿದೆ ಎಂಬ ಮಾತನ್ನ ಆಯ್ಕೆ ಸಮಿತಿ ಹೇಳಿದೆ ಎಂದು ತಿಳಿದು ಬಂದಿದೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಆಯ್ಕೆ ಸಮಿತಿ ಮುಖ್ಯಸ್ಥ ಎಂಎಸ್​ಕೆ ಪ್ರಸಾದ್​, ನಾನು ಆದಷ್ಟು ಬೇಗ ಎಂಎಸ್​ ಧೋನಿ ಜತೆ ಮಾತನಾಡಿ, ನಿಮ್ಮ ಅಂತಿಮ ನಿರ್ಧಾರ ತಿಳಿಸಿ ಎಂದು ಕೇಳುವೆ ಎಂದಿದ್ದಾರೆ. ಒಂದು ವೇಳೆ ತಂಡದಲ್ಲಿ ಅವರು ಮುಂದುವರಿಯಬೇಕಾದರೆ ಅದ್ಭುತ ಪ್ರದರ್ಶನ ನೀಡುವ ಅನಿವಾರ್ಯತೆ ಎದುರಾಗಿದೆ. ಹೀಗಾಗಿ ಮುಂದಿನ ಟೂರ್ನಿಗಳಲ್ಲಿ ಅವರು ನಮ್ಮ ಆಯ್ಕೆಯಾಗಿರುವುದಿಲ್ಲ ಎಂದಿದ್ದಾರೆ.

MSK prasad
ಎಂಎಸ್​ಕೆ ಪ್ರಸಾದ್​​​

ಅವರ ಸ್ಥಾನಕ್ಕೆ ಆಯ್ಕೆಯಾಗಲು ರಿಷಭ್​ ಪಂತ್​ ಅವರಂತಹ ಯುವ ಪ್ಲೇಯರ್​​ಗಳು​​ ತುದಿಗಾಲಿನಲ್ಲಿ ನಿಂತಿದ್ದಾರೆ. ವಿಶ್ವಕಪ್​​ನಲ್ಲಿ ಅವರು ಹೇಳಿಕೊಳ್ಳುವಂತಹ ಪ್ರದರ್ಶನವನ್ನೇನೂ ನೀಡಿಲ್ಲ. ಅವರು ರನ್​ಗಳಿಕೆ ಮಾಡಲು ಹರಸಾಹಸ ಪಡುತ್ತಿದ್ದು, ತಂಡಕ್ಕೆ ಅದರಿಂದ ತೊಂದರೆಯಾಗುತ್ತಿದೆ ಎಂದು ಅವರು ಹೇಳಿದ್ದಾರೆ ಎಂದು ತಿಳಿದು ಬಂದಿದೆ.

2014ರಲ್ಲಿ ಟೆಸ್ಟ್​ ಕ್ರಿಕೆಟ್​ಗೆ ಏಕಾಏಕಿ ಧೋನಿ ನಿವೃತ್ತಿ ಘೋಷಣೆ ಮಾಡಿದ್ದರು. ಅದಾದ ಬಳಿಕ ನಿಗದಿತ ಓವರ್​ಗಳ ಕ್ರಿಕೆಟ್​​ನಲ್ಲಿ ಮಾತ್ರ ಧೋನಿ ಭಾಗಿಯಾಗುತ್ತಿದ್ದಾರೆ. ಈಗಾಗಲೇ ಧೋನಿ ನಿವೃತ್ತಿ ಬಗ್ಗೆ ಅನೇಕ ಪರ-ವಿರೋಧ ಪ್ರತಿಕ್ರಿಯೆಗಳು ಕೇಳಿ ಬಂದಿವೆ. ಇದಕ್ಕೀಗ ಆಯ್ಕೆ ಸಮಿತಿ ಸಹ ಸೇರಿಕೊಂಡಿದೆ. ಧೋನಿ ಯಾವ ನಿರ್ಧಾರ ಕೈಗೊಳ್ಳುತ್ತಾರೆ ಅನ್ನೋದು ಈಗ ಕುತೂಹಲಕ್ಕೆ ಕಾರಣವಾಗಿದೆ.

Intro:Body:

ಧೋನಿ ಇನ್ಮುಂದೆ ನಮ್ಮ ಆಯ್ಕೆ ಅಲ್ಲ, ಅವರ ನಿವೃತ್ತಿ ಘೋಷಣೆಗಾಗಿ ಕಾಯುತ್ತಿದ್ದೇವೆ: ಎಸ್​ಎಸ್​ಕೆ ಪ್ರಸಾದ್​

ನವದೆಹಲಿ: ವಿಶ್ವಕಪ್​ ಸೆಮಿಫೈನಲ್​​ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲು ಕಂಡು ಟೂರ್ನಿಯಿಂದ ಹೊರಬಿದ್ದ ಬಳಿಕ ಅನೇಕ ಟೀಕೆ-ಟಿಪ್ಪಣಿಗಳು ಕೇಳಿ ಬರುತ್ತಿವೆ. ಇದರ ಮಧ್ಯೆ ವೆಸ್ಟ್​ ಇಂಡೀಸ್​ ಟೂರ್​ಗಾಗಿ ಇಂಡಿಯಾ ತಂಡವನ್ನ ಪ್ರಕಟ ಮಾಡಬೇಕಾಗಿದ್ದು, ಇದೀಗ  ಆಯ್ಕೆ ಸಮಿತಿ ಕೆಲವೊಂದು ಮಹತ್ವದ ನಿರ್ಧಾರ ಕೈಗೊಳ್ಳಲು ಮುಂದಾಗಿದೆ. 

ಸಧ್ಯ ಲಭ್ಯವಾಗಿರುವ ಮಾಹಿತಿ ಪ್ರಕಾರ ಎಂಎಸ್​ ಧೋನಿ ಕ್ರಿಕೆಟ್​ ಜೀವನದ ಬಗ್ಗೆ ತಮ್ಮ ಅಂತಿಮ ನಿರ್ಧಾರ ಘೋಷಣೆ ಮಾಡಬೇಕಾಗಿದೆ ಎಂಬ ಮಾತನ್ನ ಆಯ್ಕೆ ಸಮಿತಿ ಹೇಳಿದೆ ಎಂದು ತಿಳಿದು ಬಂದಿದೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಆಯ್ಕೆ ಸಮಿತಿ ಮುಖ್ಯಸ್ಥ ಎಂಎಸ್​ಕೆ ಪ್ರಸಾದ್​, ನಾನು ಆದಷ್ಟು ಬೇಗ ಎಂಎಸ್​ ಧೋನಿ ಜತೆ ಮಾತನಾಡಿ, ನಿಮ್ಮ ಅಂತಿಮ ನಿರ್ಧಾರ ತಿಳಿಸಿ ಎಂದು ಕೇಳುವೆ ಎಂದಿದ್ದಾರೆ. ಒಂದು ವೇಳೆ ತಂಡದಲ್ಲಿ ಅವರು ಮುಂದುವರಿಯಬೇಕಾದರೆ ಅದ್ಭುತ ಪ್ರದರ್ಶನ ನೀಡುವ ಅನಿವಾರ್ಯತೆ ಎದುರಾಗಿದೆ. ಹೀಗಾಗಿ ಮುಂದಿನ ಟೂರ್ನಿಗಳಲ್ಲಿ ಅವರು ನಮ್ಮ ಆಯ್ಕೆಯಾಗಿರುವುದಿಲ್ಲ ಎಂದಿದ್ದಾರೆ. 

ಅವರ ಸ್ಥಾನಕ್ಕೆ ಆಯ್ಕೆಯಾಗಲು ರಿಷಭ್​ ಪಂತ್​ರಂತಹ ಯುವ ಪ್ಲೇಯರ್​​ ತುದಿಗಾಲಿನಲ್ಲಿ ನಿಂತಿದ್ದಾರೆ. ವಿಶ್ವಕಪ್​​ನಲ್ಲಿ ಅವರು ಹೇಳಿಕೊಳ್ಳುವಂತಹ ಪ್ರದರ್ಶನ ಏನು ನೀಡಿಲ್ಲ. ಅವರು ರನ್​ಗಳಿಕೆ ಮಾಡಲು ಹರಸಾಹಸ ಪಡುತ್ತಿದ್ದು, ತಂಡಕ್ಕೆ ಅದರಿಂದ ತೊಂದರೆಯಾಗುತ್ತಿದೆ ಎಂದು ಅವರು ಹೇಳಿದ್ದಾರೆ ಎಂದು ತಿಳಿದು ಬಂದಿದೆ. 

2014ರಲ್ಲಿ ಟೆಸ್ಟ್​ ಕ್ರಿಕೆಟ್​ಗೆ ಏಕಾಏಕಿ ಧೋನಿ ನಿವೃತ್ತಿ ಘೋಷಣೆ ಮಾಡಿದ್ದರು. ಅದಾದ ಬಳಿಕ ನಿಗದಿತ ಓವರ್​ಗಳ ಕ್ರಿಕೆಟ್​​ನಲ್ಲಿ ಮಾತ್ರ ಧೋನಿ ಭಾಗಿಯಾಗುತ್ತಿದ್ದಾರೆ. ಈಗಾಗಲೇ ಧೋನಿ ನಿವೃತ್ತಿ ಬಗ್ಗೆ ಅನೇಕ ಪರ-ವಿರೋಧ ಪ್ರತಿಕ್ರಿಯೆಗಳು ಕೇಳಿ ಬಂದಿವೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.