ಹೈದರಾಬಾದ್: ಎಲ್ಲ ಸಮಯದಲ್ಲೂ ಸದಾ ಶಾಂತಚಿತ್ತರಾಗಿ ಪರಿಸ್ಥಿತಿ ನಿಭಾಯಿಸುವ ಎಂ.ಎಸ್.ಧೋನಿ ಇದೇ ಕಾರಣಕ್ಕೆ ಕೂಲ್ ಕ್ಯಾಪ್ಟನ್ ಎಂದೇ ಕರೆಸಿಕೊಂಡಿದ್ದರು. ಧೋನಿಯ ಈ ತಾಳ್ಮೆಯೇ ಹಲವರಿಗೆ ಸ್ಫೂರ್ತಿ ಹಾಗೂ ಇಷ್ಟ.
ವಿಶ್ವಕಪ್ ಟೂರ್ನಿ ಬಳಿಕ ಮೈದಾನದಿಂದ ಕೊಂಚ ದೂರ ಸರಿದಿರುವ ಧೋನಿ ತಮ್ಮ ಈ ತಾಳ್ಮೆ ಹಾಗೂ ಒತ್ತಡದ ಪರಿಸ್ಥಿತಿಯನ್ನು ನಿಭಾಯಿಸುವ ಬಗ್ಗೆ ಮಾತನಾಡಿದ್ದಾರೆ.
ಋಣಾತ್ಮಕ ವಿಚಾರಗಳಿಂದ ಸಾಕಷ್ಟು ದೂರ ಉಳಿಯುವ ಧೋನಿ, ಎಲ್ಲ ಭಾವನೆಗಳನ್ನು ವ್ಯಕ್ತಪಡಿಸುವಲ್ಲಿಯೂ ಧೋನಿ ಸಮಚಿತ್ತರು. ಈ ವಿಚಾರದಲ್ಲಿ ನಾನು ಉಳಿದೆಲ್ಲರಿಗಿಂತ ಭಿನ್ನ ಎಂದು ಸ್ವತಃ ಧೋನಿಯೇ ಹೇಳಿದ್ದಾರೆ.
ಸಮಸ್ಯೆಗಳಿಂದ ಎದುರಾದಾಗ ಭಯದಿಂದ ಇರುವ ಬದಲು ಅದಕ್ಕೆ ಸೂಕ್ತ ಪರಿಹಾರ ಹುಡುಕುವ ಪ್ರಯತ್ನ ಮಾಡುತ್ತೇನೆ. ಭಾವನೆಗಳ ತೋರ್ಪಡಿಕೆಗಿಂತ ಆ ಸಮಯಕ್ಕೆ ಏನು ಬೇಕೋ ಅದನ್ನು ಮಾಡುವುದು ಪ್ರಾಮುಖ್ಯತೆ ಪಡೆಯುತ್ತದೆ ಎಂದು ಧೋನಿ ಹೇಳುತ್ತಾರೆ.
38 ವರ್ಷದ ಟೀಂ ಇಂಡಿಯಾ ಹಿರಿಯ ಆಟಗಾರ ಧೋನಿ ನಿವೃತ್ತಿ ಬಗ್ಗೆ ಮಾಜಿ ಆಟಗಾರರು ತಮ್ಮದೇ ಆದ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದು, ಧೋನಿ ಮಾತ್ರ ಈ ಬಗ್ಗೆ ಮೌನ ವಹಿಸಿದ್ದಾರೆ. ವಿಶ್ವಕಪ್ ಸೆಮಿಫೈನಲ್ ಬಳಿಕ ಧೋನಿ ಮೈದಾನಕ್ಕಿಳಿದಿಲ್ಲ.