ETV Bharat / sports

'ಧೋನಿ ಹನ್ನೊಂದರ ಬಳಗದ ಆಯ್ಕೆಯಲ್ಲ'.. ವಿಶ್ವಶ್ರೇಷ್ಠ ಆಟಗಾರನ ಯುಗಾಂತ್ಯ? - ವಿಂಡೀಸ್ ಪ್ರವಾಸ

ಆಗಸ್ಟ್ ತಿಂಗಳ ಆರಂಭದಲ್ಲಿ ವಿಂಡೀಸ್ ಪ್ರವಾಸ ಕೈಗೊಳ್ಳಲಿರುವ ಟೀಮ್ ಇಂಡಿಯಾ ಕೆರಬಿಯನ್ನರ ನಾಡಿನಲ್ಲಿ ಮೂರು ಮಾದರಿಯ ಕ್ರಿಕೆಟ್ ಆಡಲಿದೆ. ಈ ಪ್ರವಾಸದಲ್ಲಿ ಧೋನಿ ಪಾಲ್ಗೊಳ್ಳುವಿಕೆಯ ಬಗ್ಗೆ ಮೂಡಿದ ಸಹಜ ಕುತೂಹಲಕ್ಕೆ ಬಹುತೇಕ ತೆರೆಬಿದ್ದಿದೆ.

ಧೋನಿ
author img

By

Published : Jul 18, 2019, 6:00 AM IST

Updated : Jul 18, 2019, 6:31 AM IST

ಹೈದರಾಬಾದ್: ವಿಶ್ವಕಪ್​ ಟೂರ್ನಿ ಮುಕ್ತಾಯದ ಬೆನ್ನಲ್ಲೇ ಟೀಮ್ ಇಂಡಿಯಾದ ಹಿರಿಯ ಆಟಗಾರ ಎಂ.ಎಸ್​.ಧೋನಿ ನಿವೃತ್ತಿ ಪಡೆಯಲಿದ್ದಾರೆ ಎನ್ನುವ ಮಾತು ಕೇಳಿಬಂದಿತ್ತಾದರೂ ಮಾಹಿ ಮಾತ್ರ ಈ ಬಗ್ಗೆ ಮೌನ ವಹಿಸಿದ್ದಾರೆ.

ಆಗಸ್ಟ್ ತಿಂಗಳ ಆರಂಭದಲ್ಲಿ ವಿಂಡೀಸ್ ಪ್ರವಾಸ ಕೈಗೊಳ್ಳಲಿರುವ ಟೀಮ್ ಇಂಡಿಯಾ ಕೆರಬಿಯನ್ನರ ನಾಡಿನಲ್ಲಿ ಮೂರು ಮಾದರಿಯ ಕ್ರಿಕೆಟ್ ಆಡಲಿದೆ. ಈ ಪ್ರವಾಸದಲ್ಲಿ ಧೋನಿ ಪಾಲ್ಗೊಳ್ಳುವಿಕೆಯ ಬಗ್ಗೆ ಮೂಡಿದ ಸಹಜ ಕುತೂಹಲಕ್ಕೆ ಬಹುತೇಕ ತೆರೆಬಿದ್ದಿದೆ.

ವಿಂಡೀಸ್ ಪ್ರವಾಸದಿಂದ ಧೋನಿ ತಾವಾಗೇ ಹಿಂದೆ ಸರಿದಿದ್ದಾರೆ ಎನ್ನಲಾಗಿದ್ದು, ಮಾಹಿಯ ಈ ನಿರ್ಧಾರದಿಂದ ಇಕ್ಕಟ್ಟಿಗೆ ಸಿಲುಕಿದ್ದ ಆಯ್ಕೆ ಸಮಿತಿ ಕೊಂಚ ನಿರಾಳವಾಗಿದೆ.

MS Dhoni
ಎಂ.ಎಸ್​.ಧೋನಿ

ಧೋನಿ ತವರು ಹಾಗೂ ವಿದೇಶಿ ನೆಲದಲ್ಲಿ ನಡೆಯುವ ಏಕದಿನ ಹಾಗೂ ಟಿ-20 ಪಂದ್ಯಗಳಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್​ಮನ್​ ಆಗಿ ಮೊದಲ ಆಯ್ಕೆಯಾಗಿರುವುದಿಲ್ಲ. ಯುವ ಪ್ರತಿಭೆ ರಿಷಭ್ ಪಂತ್ ಈ ಸ್ಥಾನವನ್ನು ತುಂಬಲಿದ್ದಾರೆ. ಇದೇ ವೇಳೆ ರಿಷಭ್​ಗೆ ಹಿರಿಯ ಆಟಗಾರ ಧೋನಿ ತಮ್ಮ ಅನುಭವ ಧಾರೆಯೆರೆಯಲಿದ್ದಾರೆ ಎಂದು​​ ಎಂದು ಮೂಲಗಳು ತಿಳಿಸಿವೆ.

ಸದ್ಯಕ್ಕೆ ಧೋನಿ 15ರ ಬಳಗದ ಆಯ್ಕೆಯೇ ಹೊರತು ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸುವ ಸಾಧ್ಯತೆ ತೀರಾ ಕ್ಷೀಣ ಎಂದು ಬಿಸಿಸಿಐ ಮೂಲಗಳು ಹೇಳಿದ್ದು ಈ ಮೂಲಕ ಟೀಮ್ ಇಂಡಿಯಾವನ್ನು ವಿಶ್ವಮಟ್ಟದಲ್ಲಿ ಮಹತ್ತರ ಸ್ಥಾನಕ್ಕೆ ಕೊಂಡೊಯ್ದಿದ್ದ ಶ್ರೇಷ್ಠ ಆಟಗಾರನ ಯುಗಾಂತ್ಯ ಸಮೀಪಿದೆ ಎಂದು ಪರೋಕ್ಷವಾಗಿ ಹೇಳಿದೆ.

ಜುಲೈ 19ರಂದು ಮುಂಬೈನಲ್ಲಿ ಆಯ್ಕೆ ಸಮಿತಿ ಸಭೆ ಸೇರಲಿದ್ದು ಈ ವೇಳೆ ವಿಂಡೀಸ್ ಪ್ರವಾಸಕ್ಕೆ ಟೀಮ್ ಇಂಡಿಯಾವನ್ನು ಆಯ್ಕೆ ಮಾಡಲಿದೆ. ಆಗಸ್ಟ್ 3ರಿಂದ ವಿಂಡೀಸ್ ಸರಣಿ ಆರಂಭವಾಗಲಿದೆ.

Intro:Body:

ಧೋನಿ ಹನ್ನೊಂದರ ಬಳಗದ ಆಯ್ಕೆಯಲ್ಲ..! ವಿಶ್ವಶ್ರೇಷ್ಠ ಆಟಗಾರನ ಯುಗಾಂತ್ಯ!

Conclusion:
Last Updated : Jul 18, 2019, 6:31 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.