ETV Bharat / sports

ರನೌಟ್​​ನಿಂದ ಆರಂಭವಾದ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್​ ಲೈಫ್​, ರನೌಟ್​ ಮೂಲಕವೇ ಕೊನೆ!

ಕ್ರಿಕೆಟ್‌ ಜಗತ್ತು ಕಂಡಿರುವ ನೆಚ್ಚಿನ ಪ್ಲೇಯರ್​ ಮಹೇಂದ್ರ ಸಿಂಗ್​​ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ.

MS Dhoni
MS Dhoni
author img

By

Published : Aug 16, 2020, 2:45 AM IST

ಹೈದರಾಬಾದ್​: ಭಾರತಕ್ಕೆ ಎರಡು ವಿಶ್ವಕಪ್​ ತಂದುಕೊಟ್ಟ ಕೀರ್ತಿಗಳಿಸಿರುವ ಮಹೇಂದ್ರ ಸಿಂಗ್​ ಧೋನಿ ಕೊನೆಗೂ ಅಂತಾರಾಷ್ಟ್ರೀಯ ಕ್ರಿಕೆಟ್​​ ಬದುಕಿಗೆ ವಿದಾಯ ಘೋಷಣೆ ಮಾಡಿದ್ದಾರೆ. 2019ರ ಐಸಿಸಿ ಏಕದಿನ ವಿಶ್ವಕಪ್​ ಸೆಮಿಫೈನಲ್​ ಬಳಿಕ ತಂಡದಿಂದ ದೂರ ಉಳಿದಿದ್ದ ಮಾಹಿ, ಸುದೀರ್ಘ ವಿಶ್ರಾಂತಿ ಬಳಿಕ ಮತ್ತೊಮ್ಮೆ ತಂಡಕ್ಕೆ ಕಮ್​ಬ್ಯಾಕ್​ ಮಾಡ್ತಾರೆ ಎಂಬ ಚರ್ಚೆಗೆ ನಿವೃತ್ತಿ ಘೋಷಣೆ ಮಾಡುವ ಮೂಲಕ ತೆರೆ ಎಳೆದಿದ್ದಾರೆ.

ಧೋನಿ ನಾಯಕತ್ವದ ಗುಣ ಪುನರಾವರ್ತನೆ ಕಷ್ಟ: ಒಂದು ಯುಗದ ಅಂತ್ಯ ಎಂದ ಗಂಗೂಲಿ!

2004ರಲ್ಲಿ ಬಾಂಗ್ಲಾದೇಶದ ವಿರುದ್ಧದ ಏಕದಿನ ಕ್ರಿಕೆಟ್​ ಮೂಲಕ ಟೀಂ ಇಂಡಿಯಾ ತಂಡಕ್ಕೆ ಪದಾರ್ಪಣೆ ಮಾಡಿದ್ದ ಮಹೇಂದ್ರ ಸಿಂಗ್​ ಧೋನಿ ತಾವು ಆಡಿದ ಮೊದಲ ಪಂದ್ಯದಲ್ಲೇ ರನೌಟ್​ ಆಗಿದ್ದರು. ಅದೇ ರೀತಿ 2019ರಲ್ಲಿ ನ್ಯೂಜಿಲ್ಯಾಂಡ್​ ವಿರುದ್ಧ ನಡೆದ ಸೆಮಿಫೈನಲ್​ ಪಂದ್ಯದಲ್ಲಿ ರನೌಟ್​ ಆಗಿದ್ದರು. ಈ ವೇಳೆ ಅವರು 72 ಎಸೆತಗಳಲ್ಲಿ 50ರನ್​ಗಳಿಕೆ ಮಾಡಿದ್ದರು. ಈ ವೇಳೆ ತಾವು ರನೌಟ್​ ಆಗಿದ್ದಕ್ಕಾಗಿ ಧೋನಿ ಪಶ್ಚಾತ್ತಾಪ ಪಟ್ಟಿದ್ದರು.

ಟೀಂ ಇಂಡಿಯಾ ಪರ 90 ಟೆಸ್ಟ್​​, 350 ಏಕದಿನ ಹಾಗೂ 98 ಅಂತಾರಾಷ್ಟ್ರೀಯ ಟಿ-20 ಪಂದ್ಯಗಳನ್ನಾಡಿರುವ ಧೋನಿ ಕ್ರಮವಾಗಿ 4,876(ಟೆಸ್ಟ್​), 10,773(ಏಕದಿನ) ಹಾಗೂ 1,617(ಟಿ-20)ರನ್​ಗಳಿಕೆ ಮಾಡಿದ್ದಾರೆ. ಜತೆಗೆ ಟೆಸ್ಟ್​​ನಲ್ಲಿ 256 ಕ್ಯಾಚ್, 38 ಸ್ಟಂಪಿಂಗ್​, ಏಕದಿನದಲ್ಲಿ 321 ಕ್ಯಾಚ್​​, 123 ಸ್ಟಂಪಿಂಗ್​ ಹಾಗೂ ಟಿ-20 ಕ್ರಿಕೆಟ್​​ನಲ್ಲಿ 57 ಕ್ಯಾಚ್​ ಮತ್ತು 34 ಸ್ಟಂಪಿಂಗ್​ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.