ಸಿಡ್ನಿ : ಭಾರತದ ಆರಂಭಿಕ ಬ್ಯಾಟ್ಸ್ಮನ್ ಕೆ ಎಲ್ ರಾಹುಲ್ 2020ರ ಆವೃತ್ತಿಯ ಅಂತಾರಾಷ್ಟ್ರೀಯ ಟಿ20ಯಲ್ಲಿ ಗರಿಷ್ಠ ರನ್ಗಳಿಸಿದ ಖ್ಯಾತಿಗೆ ಪಾತ್ರರಾಗಿದ್ದಾರೆ.
ರಾಹುಲ್ ಇಂದು ಮುಗಿದ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಲ್ಲಿ 81 ರನ್ ಗಳಿಸಿದ್ದಾರೆ. ಒಟ್ಟಾರೆ 2020ರಲ್ಲಿ 10 ಇನ್ನಿಂಗ್ಸ್ಗಳಿಂದ 44.88ರ ಸರಾಸರಿ, 140.7 ಸ್ಟ್ರೈಕ್ರೇಟ್ನಲ್ಲಿ 404 ರನ್ಗಳಿಸುವ ಮೂಲಕ ವರ್ಷದ ಗರಿಷ್ಠ ರನ್ಗಳಿಸಿದ ಬ್ಯಾಟ್ಸ್ಮನ್ ಆಗಿದ್ದಾರೆ. 4 ಅರ್ಧಶತಕ ಕೂಡ ಸಿಡಿಸಿದ್ದಾರೆ.
2ನೇ ಸ್ಥಾನದಲ್ಲಿ ಇಂಗ್ಲೆಂಡ್ನ ಡೇವಿಡ್ ಮಲನ್ 10 ಇನ್ನಿಂಗ್ಸ್ಗಳಿಂದ 4 ಅರ್ಧಶತಕದ ಸಹಿತ 397 ರನ್ಗಳಿಸಿದ್ದಾರೆ. ಬೈರ್ಸ್ಟೋವ್ 11 ಇನ್ನಿಂಗ್ಸ್ಗಳಿಂದ 329 ರನ್ಗಿಸಿ 3ನೇ ಸ್ಥಾನದಲ್ಲಿದ್ದಾರೆ. ಕೊಹ್ಲಿ 295 ರನ್ಗಳೊಂದಿಗೆ 4ನೇ ಸ್ಥಾನದಲ್ಲಿದ್ದಾರೆ.
ಈ ತಿಂಗಳು ಪಾಕಿಸ್ತಾನ ಮತ್ತು ನ್ಯೂಜಿಲ್ಯಾಂಡ್ ತಂಡಗಳ ನಡುವೆ 3 ಪಂದ್ಯಗಳ ಟಿ20 ಸರಣಿ ನಡೆಯಲಿದೆ. ಈ ಸರಣಿಯಲ್ಲಿ ಬಾಬರ್ ಅಜಮ್ 129 ಹಾಗೂ ಮೊಹಮ್ಮದ್ ಹಫೀಜ್ 130 ರನ್ಗಿಸಿದ್ರೆ ರಾಹುಲ್ ಅವರನ್ನ ಹಿಂದಿಕ್ಕಲಿದ್ದಾರೆ.
ಇಲ್ಲವಾದಲ್ಲಿ ರಾಹುಲ್ 2020ರ ಗರಿಷ್ಠ ಟಿ20 ರನ್ ಸ್ಕೋರರ್ ಎನಿಸಿಕೊಳ್ಳಲಿದ್ದಾರೆ. ಪ್ರಸ್ತುತ ಬಾಬರ್ 6 ಇನ್ನಿಂಗ್ಸ್ಗಳಿಂದ 276 ಹಾಗೂ ಹಫೀಜ್ 5 ಇನ್ನಿಂಗ್ಸ್ಗಳಿಂದ 275 ರನ್ಗಳಿಸಿದ್ದಾರೆ.