ETV Bharat / sports

ಒಂದೇ ಪಂದ್ಯ, ಹಲವು ಮಹತ್ವದ ದಾಖಲೆಗಳಿಗೆ ಪಾತ್ರವಾದ ಎಬಿ ಡಿ ವಿಲಿಯರ್ಸ್​ - ಎಬಿ ಡಿ ವಿಲಿಯರ್ಸ್ 4000 ರನ್ಸ್​

2011ರಿಂದ ಆರ್‌ಸಿಬಿ ತಂಡದಲ್ಲಿರುವ ಎಬಿ ಡಿ ವಿಲಿಯರ್ಸ್ ರಾಯಲ್ಸ್​ ವಿರುದ್ಧದ ಪಂದ್ಯದ ವೇಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರವಾಗಿ 4,000 ರನ್ ಪೂರೈಸಿದರು. ಪಂದ್ಯದಲ್ಲಿ 48 ರನ್ ಗಳಿಸಿದ ನಂತರ ಅವರು ಈ ಮೈಲಿಗಲ್ಲು ತಲುಪಿದರು.

ಎಬಿ ಡಿ ವಿಲಿಯರ್ಸ್​
ಎಬಿ ಡಿ ವಿಲಿಯರ್ಸ್​
author img

By

Published : Oct 17, 2020, 9:27 PM IST

ದುಬೈ: ರಾಜಸ್ಥಾನ್ ರಾಯಲ್ಸ್ ವಿರುದ್ಧ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ಮಿಸ್ಟರ್​ 360 ಖ್ಯಾತಿಯ ಎಬಿ ಡಿ ವಿಲಿಯರ್ಸ್​ ಈ ಪಂದ್ಯದಲ್ಲಿ ಹಲವಾರು ದಾಖಲೆಗಳಿಗೆ ಪಾತ್ರರಾಗಿದ್ದಾರೆ.

ಈ ಪಂದ್ಯದಲ್ಲಿ 4 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಬಂದ ಎಬಿಡಿ ಕೇವಲ 22 ಎಸೆತಗಳಲ್ಲಿ 6 ಸಿಕ್ಸರ್​ ಹಾಗೂ ಒಂದು ಬೌಂಡರಿ ಸಹಿತ 55 ರನ್​ಗಳಿಸಿ ಔಟಾಗದೇ ಉಳಿದು ತಂಡಕ್ಕೆ ಗೆಲುವು ತಂದುಕೊಟ್ಟರು.

2011ರಿಂದ ಆರ್‌ಸಿಬಿ ತಂಡದಲ್ಲಿರುವ ಎಬಿ ಡಿ ವಿಲಿಯರ್ಸ್ ರಾಯಲ್ಸ್​ ವಿರುದ್ಧದ ಪಂದ್ಯದ ವೇಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರವಾಗಿ 4,000 ರನ್ ಪೂರೈಸಿದರು. ಪಂದ್ಯದಲ್ಲಿ 48 ರನ್ ಗಳಿಸಿದ ನಂತರ ಅವರು ಈ ಮೈಲಿಗಲ್ಲು ತಲುಪಿದರು.

ಆದರೆ, ಆರ್‌ಸಿಬಿ ಪರ ವಿರಾಟ್ ಕೊಹ್ಲಿ ಅತಿ ಹೆಚ್ಚು ರನ್‌ಗಳಿಸಿದ ದಾಖಲೆ ಹೊಂದಿದ್ದಾರೆ, ಅವರು 201 ಪಂದ್ಯಗಳಲ್ಲಿ 6,183 ರನ್ ಕಲೆಹಾಕಿದ್ದಾರೆ. ನಂತರದ ಸ್ಥಾನವನ್ನ ಎಬಿಡಿ ಅಲಂಕರಿಸಿದ್ದು, 136 ಪಂದ್ಯಗಳಲ್ಲಿ 4,040 ರನ್ ಕಲೆ ಹಾಕಿದ್ದಾರೆ.

25ಕ್ಕಿಂತ ಕಡಿಮೆ ಎಸೆತಗಳಲ್ಲಿ ಹೆಚ್ಚು ಅರ್ಧಶತಕ

ಐಪಿಎಲ್​ನಲ್ಲಿ 25ಕ್ಕಿಂತ ಕಡಿಮೆ ಎಸೆತಗಳಲ್ಲಿ ಹೆಚ್ಚು ಅರ್ಧಶತಕ ಸಿಡಿಸಿದ ಬ್ಯಾಟ್ಸ್​ಮನ್​ಗಳ ಪೈಕಿ ಎಬಿಡಿ ಮೊದಲ ಸ್ಥಾನವನ್ನು ಸನ್​ರೈಸರ್ಸ್​ ನಾಯಕ ಡೇವಿಡ್ ವಾರ್ನರ್​ ಜೊತೆ ಹಂಚಿಕೊಂಡರು. ಈ ಇಬ್ಬರು ಬ್ಯಾಟ್ಸ್​ಮನ್​ಗಳು 8 ಬಾರಿ 25 ಎಸೆತಗಳಿಗಿಂತ ಕಡಿಮೆ ಎಸೆತದಲ್ಲಿ ಅರ್ಧಶತಕ ಬಾರಿಸಿದ್ದಾರೆ. ನಂತರದ ಸ್ಥಾನದಲ್ಲಿ ಕೀರನ್ ಪೊಲಾರ್ಡ್​ 7, ವಿರೇಂದ್ರ ಸೆಹ್ವಾಗ್ 6 ಕ್ರಿಸ್ ಗೇಲ್ ಹಾಗೂ ಧೋನಿ 5 ಬಾರಿ ಈ ಸಾಧನೆ ಮಾಡಿದ್ದಾರೆ.

ಅತಿ ಹೆಚ್ಚು ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿ

ಈಗಾಗಲೆ 22 ಮ್ಯಾನ್ ಆಫ್ ದಿ ಮ್ಯಾಚ್​ ಪಡೆಯುವ ಮೂಲಕ ಐಪಿಎಲ್​ನಲ್ಲಿ ದಾಖಲೆ ಹೊಂದಿರುವ ಎಬಿಡಿ ತಮ್ಮ ದಾಖಲೆಯನ್ನು 23 ಕ್ಕೆ ಏರಿಸುವ ಮೂಲಕ ಮತ್ತಷ್ಟು ಬಲಪಡಿಸಿಕೊಂಡರು. 2ನೇ ಸ್ಥಾನದಲ್ಲಿ ಕ್ರಿಸ್​ ಗೇಲ್​ ಇದ್ದು 21 ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.