ಅಬುಧಾಬಿ: ದೇಶಿ ಕ್ರಿಕೆಟ್ನಲ್ಲಿ ರನ್ಗಳ ಹೊಳೆಯನ್ನೇ ಹರಿಸಿ ಐಪಿಎಲ್ನಲ್ಲಿ ಪದಾರ್ಪಣೆ ಮಾಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆರಂಭಿಕ ಬ್ಯಾಟ್ಸ್‌ಮನ್ ದೇವದತ್ ಪಡಿಕ್ಕಲ್ ತಮ್ಮ ಮೊದಲ ಆವೃತ್ತಿಯಲ್ಲಿ ಹಲವು ದಾಖಲೆಗಳಿಗೆ ಪಾತ್ರರಾಗಿದ್ದಾರೆ.
ಪಡಿಕ್ಕಲ್ ಪ್ರಸ್ತುತ 14 ಇನ್ನಿಂಗ್ಸ್ಗಳಲ್ಲಿ 5 ಅರ್ಧಶತಕಗಳ ಸಹಿತ 472 ರನ್ಗಳಿಸಿ ಟೂರ್ನಿಯಲ್ಲಿ ಗರಿಷ್ಠ ರನ್ಗಳಿಸಿದ ಬ್ಯಾಟ್ಸ್ಮನ್ಗಲ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದಾರೆ. ಈ ಮೂಲಕ ಐಪಿಎಲ್ನಲ್ಲಿ ಮೊದಲ ಆವೃತ್ತಿಯಲ್ಲೇ ರಾಷ್ಟ್ರೀಯ ತಂಡಕ್ಕೆ ಪದಾರ್ಪಣೆ ಮಾಡದೇ ಹೆಚ್ಚು ರನ್ಗಳಿಸಿದ ಭಾರತೀಯ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಈ ಹಿಂದೆ ಶ್ರೇಯಸ್ ಅಯ್ಯರ್ 439 ರನ್ಗಳಿಸಿ ಈ ದಾಖಲೆಗೆ ಪಾತ್ರರಾಗಿದ್ದರು. ಒಟ್ಟಾರೆ ದಾಖಲೆಯಲ್ಲಿ 2ನೇ ಸ್ಥಾನದಲ್ಲಿದ್ದಾರೆ. ಮೊದಲ ಸ್ಥಾನದಲ್ಲಿ ಪಂಜಾಬ್ ತಂಡದಲ್ಲಿ ಆಡಿದ್ದ ಆಸೀಸ್ ಬ್ಯಾಟ್ಸ್‌ಮನ್ ಶಾನ್ ಮಾರ್ಶ್ 616 ರನ್ಗಳಿಸಿದ್ದರು.
ಇದರ ಜೊತೆಗೆ ಐಪಿಎಲ್ನಲ್ಲಿ ಪದಾರ್ಪಣೆ ಮಾಡಿದ ಮೊದಲ ಆವೃತ್ತಿಯಲ್ಲೇ ಹೆಚ್ಚು ಅರ್ಧಶತಕಗಳಿಸಿದ ದಾಖಲೆಗೂ ಪಡಿಕ್ಕಲ್ ಪಾತ್ರರಾದರು. ಅವರು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 41 ಎಸೆತಗಳಲ್ಲಿ 50 ರನ್ಗಳಿಸುವ ಮೂಲಕ ಶಿಖರ್ ಧವನ್ ಹಾಗೂ ಶ್ರೇಯಸ್ ಅಯ್ಯರ್ ದಾಖಲೆಗಳನ್ನು ಬ್ರೇಕ್ ಮಾಡಿದರು. 2008ರಲ್ಲಿ ಶಿಖರ್ ಧವನ್ ಹಾಗೂ 2014ರಲ್ಲಿ ಶ್ರೇಯಸ್ ಅಯ್ಯರ್ ತಲಾ 4 ಅರ್ಧಶತಕ ಸಿಡಿಸಿದ್ದರು. ಇದೀಗ ಆ ದಾಖಲೆ ಪಡಿಕ್ಕಲ್ ಹೆಸರಿಗೆ ಬದಲಾಗಿದೆ.
ಇನ್ನು ಪಡಿಕ್ಕಲ್ ಈ ಆವೃತ್ತಿಯಲ್ಲಿ ಘಟಾನುಘಟಿಗಳಾದ ಫಿಂಚ್, ಕೊಹ್ಲಿ ಹಾಗೂ ಎಬಿ ಡಿ ವಿಲಿಯರ್ಸ್ ಅವರಿಗಿಂತ ಹೆಚ್ಚು ರನ್ ಬಾರಿಸಿದ್ದಾರೆ. ಪಡಿಕ್ಕಲ್ 472 ರನ್ಗಳಿಸಿದ್ದರೆ, ಕೊಹ್ಲಿ 460, ವಿಲಯರ್ಸ್ 398 ರನ್ಗಳಿಸಿದ್ದಾರೆ.