ದುಬೈ: ರಾಜಸ್ಥಾನ್ ರಾಯಲ್ಸ್ ವಿರುದ್ಧ ಸಂಪೂರ್ಣ ಪ್ರಾಬಲ್ಯ ಸಾಧಿಸಿದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ 60 ರನ್ಗಳ ಭರ್ಜರಿ ಗೆಲುವಿನೊಂದಿಗೆ ತನ್ನ ಪ್ಲೇ ಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಇತ್ತ ಸೋತ ರಾಜಸ್ಥಾನ್ ರಾಯಲ್ಸ್ ಟೂರ್ನಿಯಿಂದ 3ನೇ ತಂಡವಾಗಿ ಹೊರಬಿದ್ದಿತು.
ಮೊದಲು ಬ್ಯಾಟಿಂಗ್ ನಡೆಸಿದ ಕೆಕೆಆರ್ ತಂಡ ನಾಯಕ ಮಾರ್ಗನ್ 68, ಶುಬ್ಮನ್ ಗಿಲ್ 36 ಹಾಗೂ ತ್ರಿಪಾಠಿ ಅವರ 39 ರನ್ಗಳ ನೆರವಿನಿಂದ 20 ಓವರ್ಗಳಲ್ಲಿ 191 ರನ್ಗಳಿಸಿತ್ತು.
192 ರನ್ಗಳ ಗುರಿ ಪಡೆದ ರಾಜಸ್ಥಾನ್ ರಾಯಲ್ಸ್ ರನ್ರೇಟ್ ಜೊತೆಗೆ ಗೆಲ್ಲಬೇಕಾದ ಒತ್ತಡದಿಂದ ಬ್ಯಾಟಿಂಗ್ ನಡೆಸಿ ಕೇವಲ 131 ರನ್ಗಳಿಗೆ ಕುಸಿಯುವ ಮೂಲಕ 60 ರನ್ಗಳಿಂದ ಸೋಲೊಪ್ಪಿಕೊಂಡಿತು. ರಾಜಸ್ಥಾನ್ ರನ್ರೇಟ್ ಪಡೆದು ಪ್ಲೇ ಆಫ್ಗೆ ಪ್ರವೇಶಿಸಿಬೇಕಾದರೆ ಈ ಪಂದ್ಯವನ್ನು 14.1 ಓವರ್ಗಳಲ್ಲಿ ಗೆಲ್ಲಲೇಬೇಕಾಗಿತ್ತು.
ಈ ಒತ್ತಡದಲ್ಲಿ ಬ್ಯಾಟಿಂಗ್ ಇಳಿದ ಆರ್ಆರ್ ಬ್ಯಾಟ್ಸ್ಮನ್ಗಳ ವಿರುದ್ಧ ಕೆಕೆಆರ್ ಬೌಲರ್ಗಳು ಸಂಪೂರ್ಣ ಪ್ರಾಬಲ್ಯ ಸಾಧಿಸಿದರು.
ಪ್ಯಾಟ್ ಕಮ್ಮಿನ್ಸ್ ಪವರ್ ಪ್ಲೇನಲ್ಲೇ ರಾಬಿನ್ ಉತ್ತಪ್ಪ(6), ಬೆನ್ಸ್ಟೋಕ್ಸ್(18), ಸ್ಟಿವ್ ಸ್ಮಿತ್(1) ವಿಕೆಟ್ ಪಡೆದು ರಾಜಸ್ಥಾನಕ್ಕೆ ಆಘಾತ ನೀಡಿದರು. ನಂತರ ಬಂದ ಸಂಜು ಸಾಮ್ಸನ್ರನ್ನು ಶಿವಂ ಮಾವಿ ಪೆವಿಲಿಯನ್ಗಟ್ಟಿದರೆ, ತಮ್ಮ 3ನೇ ಓವರ್ನಲ್ಲಿ ಕಮ್ಮಿನ್ಸ್ ಯುವ ಬ್ಯಾಟ್ಸ್ಮನ್ ರಿಯಾನ್ ಪರಾಗ್ರನ್ನು ಖಾತೆ ತೆರೆಯುವ ಮುನ್ನವೇ ಔಟ್ ಮಾಡಿದರು.
ನಂತರ ಬಟ್ಲರ್ ಹಾಗೂ ತೆವಾಟಿಯಾ 44 ರನ್ಗಳ ಜೊತೆಯಾಟ ನಡೆಸಿ ಚೇತರಿಕೆ ನೀಡುವ ಮುನ್ಸೂಚನೆ ನೀಡಿದ್ದರು. ಆದ್ರೆ ಈ ಹಂತದಲ್ಲಿ ಕಣಕ್ಕಿಳಿದ ವರುಣ್ ಚಕ್ರವರ್ತಿ 35 ರನ್ಗಳಿಸಿದ್ದ ಬಟ್ಲರ್ ಹಾಗೂ 31 ರನ್ಗಳಿಸಿದ್ದ ತೆವಾಟಿಯಾರನ್ನು ತಮ್ಮ ಸ್ಪಿನ್ ಬಲೆಗೆ ಬೀಳಿಸಿದರು.
-
#KKR win by 60 runs to keep their hopes alive in #Dream11IPL 2020. pic.twitter.com/aISfVK98zJ
— IndianPremierLeague (@IPL) November 1, 2020 " class="align-text-top noRightClick twitterSection" data="
">#KKR win by 60 runs to keep their hopes alive in #Dream11IPL 2020. pic.twitter.com/aISfVK98zJ
— IndianPremierLeague (@IPL) November 1, 2020#KKR win by 60 runs to keep their hopes alive in #Dream11IPL 2020. pic.twitter.com/aISfVK98zJ
— IndianPremierLeague (@IPL) November 1, 2020
ನಂತರ ಬಾಲಂಗೋಚಿಗಳಾದ ಆರ್ಚರ್ (6), ಕಾರ್ತಿಕ್ ತ್ಯಾಗಿ(2) ರನ್ಗಳಿಸಿ ಔಟ್ ಆದರು. ಶ್ರೇಯಸ್ ಗೋಪಾಲ್ 23 ರನ್ಗಳಿಸಿ ಔಟಾಗದೆ ಉಳಿದರು.
ಕೆಕೆಆರ್ ಪರ ಪ್ಯಾಟ್ ಕಮ್ಮಿನ್ಸ್ 34 ರನ್ ನೀಡಿ 4 ವಿಕೆಟ್ ಪಡೆದು ಗೆಲುವಿನ ರೂವಾರಿಯಾದರು. ಕಮ್ಮಿನ್ಸ್ಗೆ ಬೆಂಬಲ ನೀಡಿದ ಶಿವಂ ಮಾವಿ 15ಕ್ಕೆ 2, ವರುಣ್ ಚಕ್ರವರ್ತಿ 20ಕ್ಕೆ 2 ಹಾಗೂ ನಾಗರ್ಕೋಟಿ 24ಕ್ಕೆ 1 ವಿಕೆಟ್ ಪಡೆದು ಮಿಂಚಿದರು.
ಈ ಗೆಲುವಿನೊಂದಿಗೆ ಕೆಕೆಆರ್ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದೆ. ಮಂಗಳವಾರ ನಡೆಯುವ ಮುಂಬೈ ವಿರುದ್ಧ ಸನ್ರೈಸರ್ಸ್ ಹೈದರಾಬಾದ್ ತಂಡ ಗೆಲುವು ಸಾಧಿಸಿದರೆ ಕೋಲ್ಕತ್ತಾ ಟೂರ್ನಿಯಿಂದ ಹೊರ ಬೀಳಲಿದೆ. ಒಂದು ವೇಳೆ ಹೈದರಾಬಾದ್ ಸೋತರೆ ಕೋಲ್ಕತ್ತಾ 3 ಅಥವಾ 4ನೇ ಸ್ಥಾನ ಪಡೆಯಲಿದೆ. ಇದಲ್ಲದೆ ನಾಳೆ ನಡೆಯುವ ಆರ್ಸಿಬಿ ಮತ್ತು ಡೆಲ್ಲಿ ತಂಡಗಳ ನಡುವಿನ ಪಂದ್ಯದಲ್ಲಿ ಹೆಚ್ಚು ಅಂತರದಿಂದ ಯಾವುದಾದೇ ತಂಡ ಸೋಲನುಭಿವಿಸಿದರೂ ಕೂಡ ರನ್ರೇಟ್ ಆಧಾರದಲ್ಲಿ ಪ್ಲೇ ಆಫ್ ಹಂತಕ್ಕೇರುವ ಸಣ್ಣ ಅವಕಾಶ ಕೂಡ ಕೆಕೆಆರ್ಗಿದೆ.