ETV Bharat / sports

ತಂದೆ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ, ಅಂತಿಮ ನಮನ ಸಲ್ಲಿಸಿದ ಸಿರಾಜ್​

author img

By

Published : Jan 21, 2021, 5:51 PM IST

ಸಿರಾಜ್​ ಆಸ್ಟ್ರೇಲಿಯಾದಿಂದ ಗುರುವಾರ ಶಂಶಾಬಾದ್​ನ ರಾಜೀವ್​ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದರು. ಅಲ್ಲಿಂದ ನೇರವಾಗಿ ಖೈರತಾಬಾದ್​ನಲ್ಲಿರುವ ತಂದೆಯ ಸ್ಮಶಾನವಿರುವ ಸ್ಥಳಕ್ಕೆ ಭೇಟಿ ನೀಡಿ ಅಂತಿಮ ನಮನ ಸಲ್ಲಿದ್ದಾರೆ.

ಮೊಹಮ್ಮದ್ ಸಿರಾಜ್​
ಮೊಹಮ್ಮದ್ ಸಿರಾಜ್​

ಹೈದರಾಬಾದ್​: ಭಾರತ ತಂಡದ ವೇಗಿ ಮೊಹಮ್ಮದ್ ಸಿರಾಜ್​ ಆಸ್ಟ್ರೇಲಿಯಾದಿಂದ ಹೈದರಾಬಾದ್​ಗೆ ಮರಳುತ್ತಿದ್ದಂತೆ ಸೀದಾ ತಮ್ಮ ತಂದೆಯ ಸಮಾಧಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಸಿರಾಜ್​ ಆಸ್ಟ್ರೇಲಿಯಾದಿಂದ ಗುರುವಾರ ಶಂಶಾಬಾದ್​ನ ರಾಜೀವ್​ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದರು. ಅಲ್ಲಿಂದ ನೇರವಾಗಿ ಖೈರತಾಬಾದ್​ನಲ್ಲಿರುವ ತಂದೆಯ ಸ್ಮಶಾನವಿರುವ ಸ್ಥಳಕ್ಕೆ ಭೇಟಿ ನೀಡಿ, ಅಂತಿಮ ನಮನ ಸಲ್ಲಿಸಿದ್ದಾರೆ.

ಸಿರಾಜ್ ತನ್ನ ತಂದೆಯ ಸಮಾಧಿಗೆ ಹೂಗಳನ್ನು ಹಾಕಿ ಪ್ರಾರ್ಥನೆ ಸಲ್ಲಿಸಿದರು. ಸಮಾಧಿಯ ಬಳಿ ಸ್ವಲ್ಪ ಸಮಯ ಕಳೆದು ನಂತರ ಅವರು ಟೋಲಿಚೌಕಿಯ ಅಲ್-ಹಸ್ನಾಥ್ ಕಾಲೋನಿಯಲ್ಲಿರುವ ಮನೆಗೆ ತೆರಳಿದರು.

53 ವರ್ಷದ ಸಿರಾಜ್ ತಂದೆ ಮೊಹಮ್ಮದ್ ಗೌಸ್​ ನವೆಂಬರ್​ 20ರಂದು ಶ್ವಾಸಕೋಶ ಕಾಯಿಲೆಗೆ ಬಲಿಯಾಗಿದ್ದರು. ಆದರೆ ಆಗತಾನೇ ಆಸ್ಟ್ರೇಲಿಯಾದಲ್ಲಿ 10 ದಿನಗಳ ಕ್ವಾರಂಟೈನ್ ಮುಗಿಸಿದ್ದ ಸಿರಾಜ್, ಕ್ವಾರಂಟೈನ್ ನಿಯಮಗಳು ಕಠಿಣವಾಗಿದ್ದರಿಂದ ಅಲ್ಲೇ ಉಳಿದು ತಂದೆಯ ಕನಸಾದ ಟೆಸ್ಟ್​ ಕ್ರಿಕೆಟ್​ನಲ್ಲಿ ಭಾಗಿಯಾಗಿ ಭಾರತದ ಯಶಸ್ವಿ ವೇಗಿ ಎನಿಸಿಕೊಂಡಿದ್ದರು.

26 ವರ್ಷದ ಯುವ ವೇಗಿ ಆಸ್ಟ್ರೇಲಿಯಾ ಪ್ರವಾಸದಲ್ಲಿ 2ನೇ ಟೆಸ್ಟ್​ನಲ್ಲಿ ಪಾದಾರ್ಪಣೆ ಮಾಡಿದ್ದರು. ಪ್ರಧಾನ ಬೌಲರ್​ಗಳಾದ ಬುಮ್ರಾ, ಶಮಿ ಹಾಗೂ ಉಮೇಶ್​ ಯಾದವ್​ ಗಾಯಗೊಂಡ ಕಾರಣ ತಾವೇ ಬೌಲಿಂಗ್ ವಿಭಾಗದ ನೇತೃತ್ವ ವಹಿಸಿಕೊಂಡಿದ್ದರು. ಅವರು ಕೊನೆಯ ಟೆಸ್ಟ್​ನಲ್ಲಿ 5 ವಿಕೆಟ್​ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಅಲ್ಲದೆ ಟೆಸ್ಟ್​ ಸರಣಿಯಲ್ಲಿ 3 ಪಂದ್ಯಗಳಿಂದ 13 ವಿಕೆಟ್​ ಪಡೆದಿದ್ದರು.

ಇದನ್ನು ಓದಿ;ಎಕ್ಸ್​ಕ್ಲೂಸಿವ್​: ಸುಂದರ್​ ಟೆಸ್ಟ್​ ಆಡಬೇಕೆಂಬುದು ಕುಟುಂಬದ ಕನಸಾಗಿತ್ತು... ಸಹೋದರಿ ಶೈಲಜ ಸಂತಸ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.