ಮುಂಬೈ: ಭಾರತ ತಂಡದ ಸ್ಟಾರ್ ವೇಗದ ಬೌಲರ್ ಮೊಹಮ್ಮದ್ ಶಮಿ ಮುಖ್ಯ ಕೋಚ್ ರವಿ ಶಾಸ್ತ್ರಿಗೆ ಈದ್ ಉಲ್ ಫಿತರ್ ಪ್ರಯುಕ್ತ ಭರ್ಜರಿ ಔತಣ ನೀಡಿದ್ದಾರೆ.
ನಿನ್ನೆ ಇಡೀ ದೇಶದಲ್ಲಿ ಮುಸ್ಲಿಂ ಬಾಂಧವರು ಈದ್ ಉಲ್ ಫಿತರ್ ಆಚರಿಸಿದ್ದಾರೆ. ಕ್ರಿಕೆಟಿಗ ಮೊಹಮ್ಮದ್ ಶಮಿ ಟೀಂ ಇಂಡಿಯಾ ಮುಖ್ಯ ಕೋಚ್ ರವಿ ಶಾಸ್ತ್ರಿ ಅವರಿಗೆ ಮಟನ್ ಬಿರಿಯಾನಿ, ಸೆವಿಯಾನ್ ಹಾಗೂ ಖೀರ್ ಪಾರ್ಸಲ್ ಮಾಡಿದ್ದಾರೆ.
ಟ್ವಿಟರ್ನಲ್ಲಿ ಈ ವಿಚಾರ ಶೇರ್ ಮಾಡಿಕೊಂಡಿರುವ ಶಮಿ, ‘ರವಿ ಭಾಯ್, ನಿಮಗೆ ಸೆವಿಯಾನ್, ಖೀರ್ ಮತ್ತು ಮಟನ್ ಬಿರಿಯಾನಿಯನ್ನು ನಾನು ಕೋರಿಯರ್ ಮಾಡಿದ್ದೇನೆ. ಇನ್ನ ಸ್ವಲ್ಪ ಸಮಯದಲ್ಲಿ ನಿಮಗೆ ತಲುಪಲಿದೆ’ ಎಂದು ತಮ್ಮ ಅಧಿಕೃತ ಟ್ವಿಟರ್ನಲ್ಲಿ ಬರೆದು ಪೋಸ್ಟ್ ಮಾಡಿಕೊಂಡಿದ್ದಾರೆ. ಟ್ವೀಟ್ನಲ್ಲಿ ಮಟನ್ ಬಿರಿಯಾನಿ, ಖೀರ್ ಫೋಟೋ ಕೂಡ ಶೇರ್ ಮಾಡಿದ್ದಾರೆ.
-
Ravi bhai app ki Seviyan ,kheer ,or Mutton biryani maine courier kardia hey Kucch time main pahunch jaega dekhlo app @RaviShastriOfc pic.twitter.com/MZSshUpz3O
— Mohammad Shami (@MdShami11) May 25, 2020 " class="align-text-top noRightClick twitterSection" data="
">Ravi bhai app ki Seviyan ,kheer ,or Mutton biryani maine courier kardia hey Kucch time main pahunch jaega dekhlo app @RaviShastriOfc pic.twitter.com/MZSshUpz3O
— Mohammad Shami (@MdShami11) May 25, 2020Ravi bhai app ki Seviyan ,kheer ,or Mutton biryani maine courier kardia hey Kucch time main pahunch jaega dekhlo app @RaviShastriOfc pic.twitter.com/MZSshUpz3O
— Mohammad Shami (@MdShami11) May 25, 2020
ಮೊಹಮ್ಮದ್ ಶಮಿ ಬಿರಿಯಾನಿ ಪ್ರಿಯರಾಗಿದ್ದಾರೆ. ಅವರು ರಂಜಾನ್ ಅಂತ್ಯದಲ್ಲಿ ಈದ್ ಆಚರಿಸಿದ್ದು, ತಮಗಿಷ್ಟವಾದ ತಿನಿಸುಗಳನ್ನು ತಾವು ಸವಿಯುವುದರ ಜೊತೆಗೆ ಇತರರಿಗೂ ನೀಡುವ ಮೂಲಕ ಪವಿತ್ರ ಹಬ್ಬವನ್ನು ಆಚರಿಸಿಕೊಂಡಿದ್ದಾರೆ.
-
Eid Mubarak! May Allah fulfill your all dreams and hopes. pic.twitter.com/KHHfgNjTr1
— Mohammad Shami (@MdShami11) May 25, 2020 " class="align-text-top noRightClick twitterSection" data="
">Eid Mubarak! May Allah fulfill your all dreams and hopes. pic.twitter.com/KHHfgNjTr1
— Mohammad Shami (@MdShami11) May 25, 2020Eid Mubarak! May Allah fulfill your all dreams and hopes. pic.twitter.com/KHHfgNjTr1
— Mohammad Shami (@MdShami11) May 25, 2020
ಇದಕ್ಕು ಮೊದಲು ತಮ್ಮ ಅಭಿಮಾನಿಗಳಿಗೆ ನಿಮ್ಮ ಕನಸು ಮತ್ತು ಗುರಿಗಳು ನನಸಾಗಲಿ ಎಂದು ಈದ್ ಮುಬಾರಕ್ ಶುಭಾಶಯ ಕೋರಿದ್ದರು.