ಸೌತಮ್ಟನ್: ಅಫ್ಘಾನಿಸ್ತಾನದ ವಿರುದ್ಧ ಕೊನೆಯ ಓವರ್ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆಯುವ ಮೂಲಕ ಮೊಹಮ್ಮದ್ ಶಮಿ, ವಿಶ್ವಕಪ್ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಎರಡನೇ ಭಾರತೀಯ ಹಾಗೂ ವಿಶ್ವದ 10ನೇ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಕೊನೆಯ ಓವರ್ನಲ್ಲಿ ಅಫ್ಘಾನಿಸ್ತಾನದ ಗೆಲುವಿಗೆ 16 ರನ್ಗಳ ಅಗತ್ಯವಿದ್ದಾಗ ಬೌಲಿಂಗ್ ಮಾಡಲು ಬಂದ ಶಮಿ ಮೊದಲ ಎಸೆತದಲ್ಲಿ ಮಾತ್ರ ರನ್ 4 ಬಿಟ್ಟುಕೊಟ್ಟರು. ನಂತರದ ಎಸೆತದಲ್ಲಿ ಯಾವುದೇ ರನ್ ಬರಲಿಲ್ಲ. 3,4 ಹಾಗೂ 5ನೇ ಎಸೆತದಲ್ಲಿ ಕ್ರಮವಾಗಿ ಮೊಹಮ್ಮದ್ ನಬಿ, ಅಫ್ಟಾಬ್ ಆಲಂ ಹಾಗೂ ಮುಜೀಬ್ ಉರ್ ರಹಮಾನ್ ವಿಕೆಟ್ ಪಡೆದು ಭಾರತಕ್ಕೆ ಗೆಲುವು ತಂದುಕೊಟ್ಟರು.
ಶಮಿಗೂ ಮೊದಲು 1987 ರಲ್ಲಿ ಭಾರತದ ಪರ ಚೇತನ್ ಶರ್ಮಾ ನ್ಯೂಜಿಲ್ಯಾಂಡ್ ವಿರುದ್ಧ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದರು. ಇದು ವಿಶ್ವಕಪ್ ಇತಿಹಾಸದಲ್ಲಿ ಮೊದಲ ಹ್ಯಾಟ್ರಿಕ್ ದಾಖಲೆ ಆಗಿತ್ತು.
ಚೇತನ್ ಶರ್ಮಾ ತಮ್ಮ ಬೌಲಿಂಗ್ನಲ್ಲಿ ಕೆನ್ ರುಥರ್ಫೋರ್ಡ್,ಇಯಾನ್ ಸ್ಮಿತ್ ಹಾಗೂ ಎವೆನ್ ಚಾಟ್ಫೀಲ್ಡ್ರನ್ನು ಬೌಲ್ಡ್ ಮಾಡುವ ಮೂಲಕ ವಿಶ್ವಕಪ್ನಲ್ಲಿ ಮೊದಲ ಹ್ಯಾಟ್ರಿಕ್ ಸಾಧನೆ ಮಾಡಿದ್ದರು.
ವಿಶ್ವಕಪ್ನಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ ಬೌಲರ್ಗಳು:
ಚೇತನ್ ಶರ್ಮಾ 1987
ಸಕ್ಲೈನ್ ಮುಸ್ತಾಕ್ 1999
ಚಮಿಂದಾ ವಾಸ್ 2003
ಬ್ರೆಟ್ ಲೀ 2003
ಲಸಿತ್ ಮಲಿಂಗಾ 2007
ಕೆಮರ್ ರೋಚ್ 2011
ಲಸಿತ್ ಮಲಿಂಗಾ 2011
ಸ್ಟೀಫನ್ಫಿನ್ 2015
ಜೆಪಿ ಡುಮಿನಿ 2015
ಮೊಹಮ್ಮದ್ ಶಮಿ 2019