ETV Bharat / sports

ಉತ್ತಮ ಫೀಲ್ಡರ್​ ಆಗುವುದಕ್ಕೆ ಅಭ್ಯಾಸ ಹೇಗಿರಬೇಕು? ಯುವ ಆಟಗಾರರಿಗೆ ಸಲಹೆ ನೀಡಿದ ಕೈಫ್​

ಭಾರತ ಕ್ರಿಕೆಟ್ ಇತಿಹಾಸದಲ್ಲಿ ಮೊಹಮ್ಮದ್​ ಕೈಫ್​ ಹಾಗೂ ಯುವರಾಜ್ ಸಿಂಗ್​ ಅದ್ಭುತ ಫಿಲ್ಡರ್​ಗಳಾಗಿದ್ದಾರೆ. ಇವರು 30 ಅಡಿ ಸರ್ಕಲ್​ನಲ್ಲಿ ನಿಂತು ಸಾಕಷ್ಟು ರನ್​ ಉಳಿಸಿಕೊಟ್ಟಿದ್ದಾರೆ. ಸಾಕಷ್ಟು ಡೈವ್​ ಹಾಗೂ ಸಾಕಷ್ಟು ಕ್ಯಾಚ್​ಗಳನ್ನು ಹಿಡಿದಿದ್ದಾರೆ.

author img

By

Published : May 28, 2020, 1:29 PM IST

ಮೊಹಮ್ಮದ್​ ಕೈಫ್​
ಮೊಹಮ್ಮದ್​ ಕೈಫ್​

ನವದೆಹಲಿ: ಭಾರತ ಕಂಡ ಶ್ರೇಷ್ಠ ಫೀಲ್ಡರ್​ ಆಗಿರುವ ಮೊಹಮ್ಮದ್​ ಕೈಫ್ ಒಬ್ಬ ಉತ್ತಮ ಫೀಲ್ಡರ್ ಆಗಲು ಹೇಗೆ ಅಭ್ಯಾಸ ಮಾಡಬೇಕು ಎಂದು ತಿಳಿಸಿಕೊಟ್ಟಿದ್ದಾರೆ.

ಭಾರತ ಕ್ರಿಕೆಟ್ ಇತಿಹಾಸದಲ್ಲಿ ಮೊಹಮ್ಮದ್​ ಕೈಫ್​ ಹಾಗೂ ಯುವರಾಜ್ ಸಿಂಗ್​ ಅದ್ಭುತ ಫಿಲ್ಡರ್​ಗಳಾಗಿದ್ದಾರೆ. ಇವರು 30 ಅಡಿ ಸರ್ಕಲ್​ನಲ್ಲಿ ನಿಂತು ಸಾಕಷ್ಟು ರನ್​ ಉಳಿಸಿಕೊಟ್ಟಿದ್ದಾರೆ. ಸಾಕಷ್ಟು ಆಕರ್ಷಕ ಡೈವ್​ ಹಾಗೂ ಸಾಕಷ್ಟು ಕ್ಯಾಚ್​ಗಳನ್ನು ಹಿಡಿದಿದ್ದಾರೆ. ಭಾರತದ ಮಾಜಿ ಬ್ಯಾಟ್ಸ್​ಮನ್​ ಕೈಫ್​​ ಒಬ್ಬ ಉತ್ತಮ ಕ್ಷೇತ್ರ ರಕ್ಷಕನಾಗಲು ಬೇಕಿರುವ ಗುಣಗಳನ್ನು ತಿಳಿಸಿಕೊಟ್ಟಿದ್ದಾರೆ.

ಖಾಸಗಿ ಮಾಧ್ಯಮಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಫೀಲ್ಡಿಂಗ್​ ಕೂಡ ಬ್ಯಾಟಿಂಗ್​ ಇದ್ದಂತೆ ಎಂದಿದ್ದಾರೆ. ಪ್ರಸ್ತುತ ಭಾರತ ತಂಡದ ಆಲ್​ರೌಂಡರ್​ ರವೀಂದ್ರ ಜಡೇಜಾ ತಮ್ಮ ವಯಸ್ಸಿಗೆ ತಕ್ಕಂತೆ ಫೀಲ್ಡಿಂಗ್​ನಲ್ಲಿ ಸುಧಾರಣೆ ಕಾಣುತ್ತಿದ್ದಾರೆ. ಒಬ್ಬ ಪರಿಪೂರ್ಣ ಬ್ಯಾಟ್ಸ್​ಮನ್​ ಆಗಲು ಬೌನ್ಸರ್​ಗೆ ಆಡುವುದು, ಡ್ರೈವ್​ ಮಾಡುವುದು, ಫುಲ್​ ಶಾಟ್​ ಮಾಡುವುದರ ಜೊತೆಗೆ ಸ್ಪಿನ್​ ಬೌಲಿಂಗ್​ಗೆ ಆಡುವುದು ಹಾಗೂ ಕ್ರೀಸ್​ನಲ್ಲಿ ತಾಳ್ಮೆಯಿಂದ ಆಡವುದನ್ನು ಕಲಿತಿರಬೇಕು.

ಹಾಗೆಯೇ ಒಬ್ಬರು ಉತ್ತಮವಾದ ಫೀಲ್ಡರ್​ ಆಗಲು ವೇಗವಾಗಿ ಓಡುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ದೀರ್ಘವಾಗಿ ಫೀಲ್ಡಿಂಗ್​ ಅಭ್ಯಾಸ ಮಾಡಬೇಕು. ಎಲ್ಲಕ್ಕಿಂತ ಮಿಗಿಲಾಗಿ ತಾವೊಬ್ಬ ಉತ್ತಮ ಫೀಲ್ಡರ್​ ಆಗುವ ಗೀಳನ್ನು ಹೊಂದಿರಬೇಕು.

ಪಂದ್ಯ ಕೇವಲ 30 ನಿಮಿಷದಲ್ಲಿ ಮುಗಿಯುವುದಿಲ್ಲ. ಹಾಗಾಗಿ ಹೆಚ್ಚು ಸಮಯದವೆರೆಗೆ ಗ್ರೌಂಡ್​ನಲ್ಲಿ ಉಳಿಯುವ ಸಾಮರ್ಥ್ಯವನ್ನು ಹೊಂದಿರಬೇಕು. ಉತ್ತಮ ಗುಣಮಟ್ಟದ ತಂತ್ರಗಾರಿಕೆ, ಉತ್ತಮ ಕಣ್ಣಿನ ಸಮನ್ವಯವನ್ನು ಹೊಂದಿರಬೇಕು. ನೀವು ಹೆಚ್ಚು ಮೈದಾನದಲ್ಲಿ ಸಮಯ ಕಳೆದಷ್ಟು ನೀವು ಉತ್ತಮ ಫೀಲ್ಡರ್ ಆಗಲಿದ್ದೀರಾ. ಆದರೆ ಸಮಯವನ್ನು ಬದಿಗೊತ್ತಿ ಅಭ್ಯಾಸ ಮಾಡಬೇಕು ಎಂದು ಕೈಫ್​ ಸಲಹೆ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.