ಲಂಡನ್ (ಇಂಗ್ಲೆಂಡ್): ಅನುಮಾನಾಸ್ಪದ ಬೌಲಿಂಗ್ ಸಾಭೀತಾದ ಹಿನ್ನೆಲೆಯಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದ ಆಲ್ರೌಂಡರ್ ಮೊಹಮ್ಮದ್ ಹಫೀಜ್ಗೆ ಇಂಗ್ಲೆಂಡ್ನಲ್ಲಿ ನಡೆಯುವ ಯಾವುದೇ ಟೂರ್ನಿಗಳಲ್ಲಿ ಬೌಲಿಂಗ್ ಮಾಡದಂತೆ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ 2 ವರ್ಷಗಳ ಕಾಲ ನಿಷೇಧ ಹೇರಿದೆ.
ಆಗಸ್ಟ್ 30 ರಂದು ಇಂಗ್ಲೆಂಡ್ನಲ್ಲಿ ನಡೆದಿದ್ದ ವಿಟಾಲಿಟಿ ಬ್ಲಾಸ್ಟ್ (Vitality Blast) 20 ಲೀಗ್ನ ಪಂದ್ಯದಲ್ಲಿ ಮೊಹಮ್ಮದ್ ಹಫೀಜ್ ಬೌಲಿಂಗ್ ಅನುಮಾನಾಸ್ಪದವಾಗಿದೆ ಎಂದು ಅಂಪೈರ್ ವರದಿ ಮಾಡಿದ್ದರು. ಈ ಬಗ್ಗೆ ಪರೀಕ್ಷೆ ನಡೆಸಿದಾಗ ಹಫೀಜ್ ಬೌಲಿಂಗ್ ಶೈಲಿ ಐಸಿಸಿ ನಿಯಮದ ಪ್ರಕಾರ ಇಲ್ಲವೆಂದು ಸಾಬೀತಾಗಿದೆ. ಹೀಗಾಗಿ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಅಯೋಜಿಸುವ ಯಾವುದೇ ಕ್ರಿಕೆಟ್ ಟೂರ್ನಿಗಳಲ್ಲಿ ಬೌಲಿಂಗ್ ಮಾಡದಂತೆ ಹಫೀಜ್ಗೆ 2 ವರ್ಷಗಳ ಕಾಲ ನಿಷೇಧ ಶಿಕ್ಷೆ ವಿಧಿಸಲಾಗಿದೆ.
-
Pak all-rounder Mohammad Hafeez banned from bowling in ECB competitions for illegal bowling action
— ANI Digital (@ani_digital) December 24, 2019 " class="align-text-top noRightClick twitterSection" data="
Read @ANI story | https://t.co/3vx0TpmF8O pic.twitter.com/LxRIm6cQ9o
">Pak all-rounder Mohammad Hafeez banned from bowling in ECB competitions for illegal bowling action
— ANI Digital (@ani_digital) December 24, 2019
Read @ANI story | https://t.co/3vx0TpmF8O pic.twitter.com/LxRIm6cQ9oPak all-rounder Mohammad Hafeez banned from bowling in ECB competitions for illegal bowling action
— ANI Digital (@ani_digital) December 24, 2019
Read @ANI story | https://t.co/3vx0TpmF8O pic.twitter.com/LxRIm6cQ9o
ಹಫೀಜ್ ಐಸಿಸಿ ಮಾನ್ಯತೆ ಪಡೆದ ಕೇಂದ್ರದಲ್ಲಿ ಸ್ವತಂತ್ರ ಪರೀಕ್ಷೆಗೆ ಹಾಜರಾಗಿ, ಬೌಲಿಂಗ್ ಶೈಲಿ ಉತ್ತಮವಾಗಿದೆ ಎಂದು ಸಾಬೀತಾದಲ್ಲಿ ಮತ್ತೆ ಬೌಲಿಂಗ್ ಮಾಡು ಅವಕಾಶ ನೀಡುವುದಾಗಿ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ತಿಳಿಸಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹಫೀಜ್ 'ನನ್ನ ಬೌಲಿಂಗ್ ಶೈಲಿ ಬಗ್ಗೆ ಇಸಿಬಿ ಬೌಲಿಂಗ್ ರಿವ್ಯೂ ತಂಡದ ವರದಿಯನ್ನು ನಾನು ಸ್ವೀಕರಿಸಿದ್ದೇನೆ. ಇಸಿಬಿ ನಿಯಮಾವಳಿಗಳ ಪ್ರಕಾರ, ಐಸಿಸಿ ಮಾನ್ಯತೆ ಪಡೆದ ಕೇಂದ್ರದಲ್ಲಿ ಸ್ವತಂತ್ರ ಪರೀಕ್ಷೆಗೆ ಹಾಜರಾಗಲು ನಾನು ಸಿದ್ಧನಿದ್ದೇನೆ, ಇದರಿಂದಾಗಿ ನಾನು ಇಸಿಬಿ ಟೂರ್ನಮೆಂಟ್ಗಳಲ್ಲಿ ಬೌಲಿಂಗ್ ಮಾಡುವುದಕ್ಕೆ ಅರ್ಹತೆ ಪಡೆಯುತ್ತೇನೆ ಎಂಬ ವಿಶ್ವಾಸವಿದೆ ಎಂದಿದ್ದಾರೆ.
ಈ ಹಿಂದೆ ಕೂಡ ಹಲವು ಬಾರಿ ಮೊಹಮ್ಮದ್ ಹಫೀಜ್ ಮೇಲೆ ಅನುಮಾನಾಸ್ಪದ ಬೌಲಿಂಗ್ ಆರೋಪ ಕೇಳಿಬಂದಿತ್ತು.