ಸೌತಾಂಪ್ಟನ್: ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯ ಬಯೋಸೆಕ್ಯೂರ್ ನಿಯಮಗಳನ್ನು ಬ್ರೇಕ್ ಮಾಡಿದ ಪಾಕಿಸ್ತಾನದ ಹಿರಿಯ ಆಟಗಾರ ಮೊಹಮ್ಮದ್ ಹಫೀಜ್ ಸ್ವಯಂ ಕ್ವಾರಂಟೈನ್ನಲ್ಲಿರಲು ಪಿಸಿಬಿ ಸೂಚಿಸಿದೆ.
ಹಫೀಜ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬುಧವಾರ ಏಜಸ್ ಬೌಲ್ನ ಗಾಲ್ಫ್ ಕೋರ್ಟ್ನಲ್ಲಿ 90ರ ವೃದ್ಧೆ ಜೊತೆ ಫೋಟೋ ತೆಗೆಸಿಕೊಂಡು ಬಯೋಸೆಕ್ಯೂರ್ ನಿಯಮ ಉಲ್ಲಂಘಿಸಿದ್ದಲ್ಲದೆ, ಅದನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿದ್ದರು.
ಈ ಫೋಟೋ ವೈರಲ್ ಆಗುತ್ತಿದ್ದಂತೆ ಹಫೀಜ್ ಅವರಿಗೆ ತಂಡದ ಆಟಗಾರರನ್ನು ಭೇಟಿ ಮಾಡದಂತೆ ಹಾಗೂ ಕೋವಿಡ್ ಟೆಸ್ಟ್ನಲ್ಲಿ ನೆಗೆಟಿವ್ ವರದಿ ಬರುವರೆಗೂ ಕ್ವಾರಂಟೈನ್ನಲ್ಲಿರುವಂತೆ ಪಿಸಿಬಿ ಶಿಸ್ತುಕ್ರಮ ಕೈಗೊಂಡಿದೆ.
-
Met an inspirational Young lady today morning at Golf course. She is 90+ & & living her life healthy & happily.Good healthy routine 😍👍🏼 pic.twitter.com/3tsWSkXl1E
— Mohammad Hafeez (@MHafeez22) August 12, 2020 " class="align-text-top noRightClick twitterSection" data="
">Met an inspirational Young lady today morning at Golf course. She is 90+ & & living her life healthy & happily.Good healthy routine 😍👍🏼 pic.twitter.com/3tsWSkXl1E
— Mohammad Hafeez (@MHafeez22) August 12, 2020Met an inspirational Young lady today morning at Golf course. She is 90+ & & living her life healthy & happily.Good healthy routine 😍👍🏼 pic.twitter.com/3tsWSkXl1E
— Mohammad Hafeez (@MHafeez22) August 12, 2020
ದೀರ್ಘಕಾಲದ ನಂತರ ಕ್ರಿಕೆಟ್ ಪುನಾರಂಭ ಕಂಡಿದ್ದು, ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಇದಕ್ಕಾಗಿ ಬಯೋಸೆಕ್ಯೂರ್ ವಲಯ ನಿರ್ಮಿಸಿದೆ. ಈ ವೇಳೆ ಯಾವ ಆಟಗಾರರು ಈ ವಲಯದಿಂದ ಹೊರಬರಬಾರದು. ಮತ್ತು ಹೊರಗಿನ ವ್ಯಕ್ತಿಗಳು ಇಲ್ಲಿಗೆ ಬರಲು ಅವಕಾಶವಿರುವುದಿಲ್ಲ. ಒಂದು ವೇಳೆ ಯಾವುದೇ ಕ್ರಿಕೆಟಿಗರು ಈ ನಿಯಮ ಉಲ್ಲಂಘಿಸಿದರೆ ಅವರಿಗೆ 5 ದಿನಗಳ ಕಾಲ ಕ್ವಾರಂಟೈನ್ನಲ್ಲಿರಲು ಹಾಗೂ 2 ಬಾರಿ ಕೋವಿಡ್ 19 ಟೆಸ್ಟ್ನಲ್ಲಿ ನೆಗೆಟಿವ್ ಫಲಿತಾಂಶ ಬಂದ ನಂತರವಷ್ಟೇ ಮತ್ತೆ ತಂಡ ಸೇರಿಕೊಳ್ಳಲು ಅವಕಾಶ ಮಾಡಿಕೊಡಲಾಗುತ್ತದೆ.
ವೆಸ್ಟ್ ಇಂಡೀಸ್ ವಿರುದ್ಧದ ಸರಣಿ ವೇಳೆ ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್ ಕೂಡ ನಿಯಮ ಉಲ್ಲಂಘಿಸಿ ಪಂದ್ಯದಿಂದ ಹೊರಗುಳಿದಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.