ಲಂಡನ್: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಭಾನುವಾರ ದಶಕದ ಮಹಿಳೆಯರ ಟಿ20 ಮತ್ತು ಏಕದಿನ ಕ್ರಿಕೆಟ್ ತಂಡವನ್ನು ಘೋಷಣೆ ಮಾಡಿದೆ. ಭಾರತ ಏಕದಿನ ತಂಡದ ನಾಯಕಿ ಮಿಥಾಲಿ ರಾಜ್, ಟಿ20 ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ ಸೇರಿದಂತೆ 4 ಆಟಗಾರ್ತಿಯರು ಈ ತಂಡಗಳಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
ಐಸಿಸಿ ಮಹಿಳಾ ಏಕದಿನ ತಂಡದಲ್ಲಿ ಮಿಥಾಲಿ ರಾಜ್ ಹಾಗೂ ಜೂಲಾನ್ ಗೋಸ್ವಾಮಿ ಭಾರತ ತಂಡದಿಂದ ಆಯ್ಕೆಯಾಗಿದ್ದಾರೆ. ಈ ತಂಡಕ್ಕೆ ಆಸ್ಟ್ರೇಲಿಯಾ ಮೆಗ್ ಲ್ಯಾನಿಂಗ್ ನಾಯಕಿಯಾಗಿದ್ದಾರೆ.
ಇನ್ನುಳಿದಂತೆ ಆಸ್ಟ್ರೇಲಿಯಾದ ಅಲಿಸಾ ಹೀಲಿ, ಎಲಿಸಾ ಪೆರ್ರಿ, ನ್ಯೂಜಿಲ್ಯಾಂಡ್ನ ಸೂಜಿ ಬೇಟ್ಸ್, ವೆಸ್ಟ್ ಇಂಡೀಸ್ನ ಸ್ಟೆಫಾನೀ ಟೇಲರ್ ಮತ್ತು ಅನಿಸಾ ಮೊಹಮ್ಮದ್, ಇಂಗ್ಲೆಂಡ್ನ ಸಾರಾ ಟೇಲರ್, ದಕ್ಷಿಣ ಆಫ್ರಿಕಾದ ಡೇನ್ ವೇನ್ ನೀಕರ್ಕ್, ಮರಿಝಾನ್ನೆ ಕಾಪ್ ಅವಕಾಶ ಪಡೆದಿದ್ದಾರೆ.
-
The ICC Women's ODI Team of the Decade 👊
— ICC (@ICC) December 27, 2020 " class="align-text-top noRightClick twitterSection" data="
🇦🇺 🇦🇺 🇦🇺
🇮🇳 🇮🇳
🇿🇦 🇿🇦
🌴 🌴
🇳🇿
🏴 #ICCAwards pic.twitter.com/NxiF9dbnt9
">The ICC Women's ODI Team of the Decade 👊
— ICC (@ICC) December 27, 2020
🇦🇺 🇦🇺 🇦🇺
🇮🇳 🇮🇳
🇿🇦 🇿🇦
🌴 🌴
🇳🇿
🏴 #ICCAwards pic.twitter.com/NxiF9dbnt9The ICC Women's ODI Team of the Decade 👊
— ICC (@ICC) December 27, 2020
🇦🇺 🇦🇺 🇦🇺
🇮🇳 🇮🇳
🇿🇦 🇿🇦
🌴 🌴
🇳🇿
🏴 #ICCAwards pic.twitter.com/NxiF9dbnt9
ಟಿ20 ತಂಡದಲ್ಲಿ ಭಾರತದಿಂದ ಹರ್ಮನ್ ಪ್ರೀತ್ ಕೌರ್ ಮತ್ತು ಪೂನಮ್ ಯಾದವ್ ಅವಕಾಶ ಪಡೆದಿದ್ದಾರೆ. ಈ ತಂಡವನ್ನೂ ಸಹ ಆಸ್ಟ್ರೇಲಿಯಾ ತಂಡದ ನಾಯಕಿ ಮೆಗ್ ಲ್ಯಾನಿಂಗ್ ಮುನ್ನಡೆಸಿದ್ದಾರೆ.
ಉಳಿದಂತೆ ಆಸೀಸ್ನ ಅಲಿಸಾ ಹೀಲಿ, ಎಲಿಸಾ ಪೆರ್ರಿ ಮತ್ತು ಮೇಗನ್ ಶೂಟ್, ಕಿವೀಸ್ನ ಸೂಫಿ ಡಿವೈನ್ ಮತ್ತು ಸೂಜಿ ಬೇಟ್ಸ್, ವಿಂಡೀಸ್ನ ಸ್ಟೆಫಾನೀ ಟೇಲರ್ ಮತ್ತು ದಿಯಾಂಡ್ರ ಡಟ್ಟಿನ್, ಇಂಗ್ಲೆಂಡ್ನ ಅನ್ಯ ಶ್ರುಬ್ಸೋಲ್ ದಶಕದ ಬೆಸ್ಟ್ ಇಲೆವೆನ್ನಲ್ಲಿ ಕಾಣಿಸಿಕೊಂಡಿದ್ದಾರೆ.
-
The ICC Women's T20I Team of the Decade 🔥
— ICC (@ICC) December 27, 2020 " class="align-text-top noRightClick twitterSection" data="
Plenty of runs and wickets in that side! 👏 #ICCAwards pic.twitter.com/mRkVN1SHSf
">The ICC Women's T20I Team of the Decade 🔥
— ICC (@ICC) December 27, 2020
Plenty of runs and wickets in that side! 👏 #ICCAwards pic.twitter.com/mRkVN1SHSfThe ICC Women's T20I Team of the Decade 🔥
— ICC (@ICC) December 27, 2020
Plenty of runs and wickets in that side! 👏 #ICCAwards pic.twitter.com/mRkVN1SHSf
ಅಚ್ಚರಿಯೆಂದರೆ, ಎರಡೂ ತಂಡದಲ್ಲೂ ಪಾಕಿಸ್ತಾನ ಮತ್ತು ಶ್ರೀಲಂಕಾದ ಯಾವುದೇ ಆಟಗಾರ್ತಿಯರು ಅವಕಾಶ ಪಡೆಯುವಲ್ಲಿ ಸಫಲರಾಗಿಲ್ಲ.