ನವದೆಹಲಿ: ಮಹಿಳಾ ಐಪಿಎಲ್ ಈ ವರ್ಷ ನಡೆಯಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳುತ್ತಿದ್ದಂತೆ ಭಾರತ ತಂಡದ ನಾಯಕಿ ಮಿಥಾಲಿ ರಾಜ್ ಸಂತಸ ವ್ಯಕ್ತಪಡಿಸಿದ್ದು, ಮಹಿಲಾ ಕ್ರಿಕೆಟ್ಗೆ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಎಂದು ಧನ್ಯವಾದ ಅರ್ಪಿಸಿದ್ದಾರೆ.
ಪುರುಷರ ಐಪಿಲ್ ಸೆಪ್ಟೆಂಬರ್ 19ರಿಂದ ನವೆಂಬರ್ 8 ಅಥವಾ 10ರೊಳಗೆ ಯುಎಇನಲ್ಲಿ ನಡೆಯಲಿದೆ. ಇದರಂತೆಯ ಮಹಿಳಾ ಐಪಿಎಲ್ ಟೂರ್ನಿ ಕೂಡ ಪ್ರತಿ ವರ್ಷದಂತೆ ನಡೆಯಲಿದೆ. ವೇಳಾಪಟ್ಟಿಯನ್ನು ರಚಿಸಲಿದ್ದೇವೆ ಎಂದು ಗಂಗೂಲಿ ಹೇಳಿದ್ದಾರೆ. ಈ ಸುದ್ದಿಯನ್ನು ಪತ್ರಕರ್ತರೊಬ್ಬರು ತಮ್ಮ ಅಧಿಕೃತ ಖಾತೆಯಲ್ಲಿ ಟ್ವೀಟ್ ಮಾಡಿದ್ದರು.
ಇದಕ್ಕೆ ಪ್ರತಿಕ್ರಿಸಯಿಸಿರುವ ಮಿಥಾಲಿ " ಇದೊಂದು ಅತ್ಯುತ್ತಮ ಸುದ್ದಿ. ನಮ್ಮ ಏಕದಿನ ವಿಶ್ವಕಪ್ ಅಭಿಯಾನಕ್ಕೆ ಉತ್ತರ ಆರಂಭವಾಗಲಿದೆ. ಮಹಿಳಾ ಕ್ರಿಕೆಟ್ ಪ್ರೋತ್ಸಾಹ ನೀಡುತ್ತಿರುವುದಕ್ಕೆ ಸೌರವ್ ಗಂಗೂಲಿಯವರಿಗೆ, ಬಿಸಿಸಿಐ ಹಾಗೂ ಜಯ್ ಶಾ ಅವರಿಗೆ ಧನ್ಯವಾದಗಳು" ಎಂದು ಭಾರತ ಏಕದಿನ ತಂಡದ ನಾಯಕಿ ಟ್ವೀಟ್ ಮಾಡಿದ್ದಾರೆ.
-
This is excellent news . Our ODI World Cup campaign to finally kick start . A big thank you to @SGanguly99 @BCCI @JayShah and thank you @BoriaMajumdar for your support to women’s cricket . https://t.co/JpJSMGapzV
— Mithali Raj (@M_Raj03) August 2, 2020 " class="align-text-top noRightClick twitterSection" data="
">This is excellent news . Our ODI World Cup campaign to finally kick start . A big thank you to @SGanguly99 @BCCI @JayShah and thank you @BoriaMajumdar for your support to women’s cricket . https://t.co/JpJSMGapzV
— Mithali Raj (@M_Raj03) August 2, 2020This is excellent news . Our ODI World Cup campaign to finally kick start . A big thank you to @SGanguly99 @BCCI @JayShah and thank you @BoriaMajumdar for your support to women’s cricket . https://t.co/JpJSMGapzV
— Mithali Raj (@M_Raj03) August 2, 2020
ಇನ್ನು ಭಾರತ ತಂಡದ ಹಿರಿಯ ಬೌಲರ್ ಪೂನಮ್ ಯಾದವ್ ಕೂಡ ಇದೊಂದು ಒಳ್ಳೆಯ ಸುದ್ದಿಯಾಗಿದ್ದು, ಗಂಗೂಲಿ ಹಾಗೂ ಬಿಸಿಸಿಐಗೆ ಧನ್ಯವಾದ ಎಂದು ಟ್ವೀಟ್ ಮಾಡಿದ್ದಾರೆ.
ಇದಕ್ಕೂ ಮುನ್ನ ಬಿಸಿಸಿಐ ಅಧ್ಯಕ್ಷ ಗಂಗೂಲಿ "ಮಹಿಳಾ ಐಪಿಎಲ್ ಟೂರ್ನಿ ನಡೆಯಲಿದೆ ಎಂದು ನಾನು ನಿಮಗೆ ಖಚಿತಪಡಿಸುತ್ತೇನೆ. ಟೂರ್ನಿಯಲ್ಲಿ ನಮ್ಮ ರಾಷ್ಟ್ರೀಯ ತಂಡವನ್ನು ಸೇರಿಸುವ ಯೋಜನೆ ಕೂಡ ಇದೆ" ಎಂದು ಗಂಗೂಲಿ ಹೇಳಿದ್ದಾರೆ.
-
Good news! Thank you @SGanguly99 and the BCCI. https://t.co/WWkpydctII
— Poonam Yadav (@poonam_yadav24) August 2, 2020 " class="align-text-top noRightClick twitterSection" data="
">Good news! Thank you @SGanguly99 and the BCCI. https://t.co/WWkpydctII
— Poonam Yadav (@poonam_yadav24) August 2, 2020Good news! Thank you @SGanguly99 and the BCCI. https://t.co/WWkpydctII
— Poonam Yadav (@poonam_yadav24) August 2, 2020
ಬಿಸಿಸಿಐ ಮೂಲಗಳ ಪ್ರಕಾರ ಮಹಿಳಾ ಐಪಿಎಲ್ ಟೂರ್ನಿ ಪುರುಷರ ಐಪಿಎಲ್ನ ಕೊನೆಯಲ್ಲಿ ಅಂದರೆ ನವೆಂಬರ್ 1 ರಿಂದ 10ರೊಳಗೆ ನಡೆಯುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
2018ರಲ್ಲಿ ಮೊದಲ ಬಾರಿಗೆ ಮಹಿಳಾ ಐಪಿಎಲ್ ನಡೆಸಲಾಗಿತ್ತು. ಅದರಲ್ಲಿ 2 ತಂಡಗಳು ಸೆಣಸಾಡಿದ್ದವು. 2019ರಲ್ಲಿ ಮೂರು ತಂಡಗಳು 4 ಪಂದ್ಯಗಳನ್ನಾಡಿದ್ದವು. 2020 ರಲ್ಲಿ 4 ತಂಡಗಳನ್ನು ಆಡಿಸಲು ಚಿಂತನೆ ನಡೆಸಲಾಗಿದೆ.