ಬ್ರಿಸ್ಬೇನ್: ನಾಯಕಿ ಮೆಗ್ ಲ್ಯಾನಿಂಗ್ ಅವರ ಶತಕದ ನೆರವಿನಿಂದ ನ್ಯೂಜಿಲ್ಯಾಂಡ್ ವಿರುದ್ಧ 2ನೇ ಏಕದಿನ ಪಂದ್ಯವನ್ನು ಗೆದ್ದಿದ್ದು, ಇನ್ನು ಒಂದು ಪಂದ್ಯ ಇರುವಂತೆಯೇ ಸರಣಿ ಜಯ ಸಾಧಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲ್ಯಾಂಡ್ ತಂಡ ನಟಾಲಿಯಾ ಡಾಡ್ 34, ನಾಯಕಿ ಸೋಫಿ ಡಿವೈನ್ 79, ಆಮಿ ಸ್ಯಾಟರ್ತ್ವೈಟ್ 69, ಕೇಟಿ ಮರ್ಟಿನ್ 26, ಮ್ಯಾಡಿ ಗ್ರೀನ್ 21 ರನ್ಗಳ ಉಪಯುಕ್ತ ಕೊಡುಗೆಯೊಂದಿಗೆ 50 ಓವರ್‌ಗೆ 9 ವಿಕೆಟ್ ನಷ್ಟಕ್ಕೆ 252 ರನ್ಗಳಿಸಿತ್ತು.
-
🔥 20th successive ODI win for Australia 🔥
— ICC (@ICC) October 5, 2020 " class="align-text-top noRightClick twitterSection" data="
They have defeated New Zealand by 4️⃣ wickets to take an unassailable 2-0 lead in the #AUSvNZ ODI series 👏 pic.twitter.com/lYgdfPb2Tv
">🔥 20th successive ODI win for Australia 🔥
— ICC (@ICC) October 5, 2020
They have defeated New Zealand by 4️⃣ wickets to take an unassailable 2-0 lead in the #AUSvNZ ODI series 👏 pic.twitter.com/lYgdfPb2Tv🔥 20th successive ODI win for Australia 🔥
— ICC (@ICC) October 5, 2020
They have defeated New Zealand by 4️⃣ wickets to take an unassailable 2-0 lead in the #AUSvNZ ODI series 👏 pic.twitter.com/lYgdfPb2Tv
ಆಸ್ಟ್ರೇಲಿಯಾ ಪರ ಜೆಸ್ ಜೊನಾಸ್ಸೆನ್ 4 ವಿಕೆಟ್, ಮೊಲಿನೆಕ್ಸ್ 2 ಹಾಗೂ ಮೇಗನ್ ಶಟ್ 2 ವಿಕೆಟ್ ಪಡೆದು ಮಿಂಚಿದರು.
253 ರನ್ಗಳ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ತಂಡ ನಾಯಕಿ ಮೆಗ್ ಲ್ಯಾನಿಂಗ್ ಅವರ ಅಜೇಯ 101 ಹಾಗೂ ರಾಚೆಲ್ ಹೇನಸ್ ಅವರ 82 ರನ್ಗಳ ನೆರವಿನಿಂದ 45.1 ಓವರ್ಗಳಲ್ಲಿ ಗುರಿ ತಲುಪಿತು.
96 ಎಸೆತಗಳನ್ನೆದುರಿಸಿದ ಲ್ಯಾನಿಂಗ್ 3 ಸಿಕ್ಸರ್ ಹಾಗೂ 9 ಬೌಂಡರಿ ಸಿಡಿಸಿದರು. ಹೇನಸ್ 89 ಎಸೆತಗಳಲ್ಲಿ 13 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 82 ರನ್ಗಳಿಸಿದರು.
ನ್ಯೂಜಿಲ್ಯಾಂಡ್ ತಂಡದ ಅಮೆಲಿಯಾ ಕೆರ್ 3, ಹೇಲಿ ಜೆನ್ಸನ್ 1 ವಿಕೆಟ್ ಪಡೆದರು. ಅಜೇಯ ಶತಕ ಸಿಡಿಸಿದ ಮೆಗ್ ಲ್ಯಾನಿಂಗ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು. ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯ ಅಕ್ಟೋಬರ್ 7 ರಂದು ನಡೆಯಲಿದೆ.