ETV Bharat / sports

ಆಸ್ಪತ್ರೆಯಿಂದ ಹೆಲ್ತ್​ ಬುಲೆಟಿನ್​.. ದಾದಾ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರಿಂದ ಮಾಹಿತಿ - Sourav Ganguly latest news

ಪ್ರಸ್ತುತ ಅವರು ಹೆಮೋಡೈನಮಿಕ್ ಆಗಿ ಸ್ಥಿರವಾಗಿದ್ದಾರೆ ಮತ್ತು ಡ್ಯುಯಲ್ ಆ್ಯಂಟಿ ಪ್ಲೇಟ್‌ಲೇಟ್‌ಗಳು ಮತ್ತು ಸ್ಟ್ಯಾಟಿನ್ ಲೋಡಿಂಗ್ ಡೋಸಸ್​ ತೆಗೆದುಕೊಂಡಿದ್ದಾರೆ. ಈಗ ಪ್ರಾಥಮಿಕ ಆಂಜಿಯೋಪ್ಲ್ಯಾಸ್ಟಿಗೆ ಒಳಗಾಗುತ್ತಿದ್ದಾರೆ..

ಸೌರವ್​ ಗಂಗೂಲಿ
ಸೌರವ್​ ಗಂಗೂಲಿ
author img

By

Published : Jan 2, 2021, 4:34 PM IST

Updated : Jan 2, 2021, 4:43 PM IST

ಕೋಲ್ಕತ್ತಾ : ಬಿಸಿಸಿಐ ಅಧ್ಯಕ್ಷ ಮತ್ತು ಮಾಜಿ ಟೀಂ​ ಇಂಡಿಯಾ ಕ್ಯಾಪ್ಟನ್​ ಸೌರವ್​ ಗಂಗೂಲಿ ಲಘು ಹೃದಯಾಘಾತದಿಂದ ಕೋಲ್ಕತ್ತಾದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ದಾದಾ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆಯು ಹೆಲ್ತ್​ ಬುಲೆಟಿನ್‌ನಲ್ಲಿ ತಿಳಿಸಿದೆ.

ಬಿಸಿಸಿಐ ಅಧ್ಯಕ್ಷ ಹಾಗೂ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ, 48 ವರ್ಷದ ಸೌರವ್​ ಗಂಗೂಲಿ, ತಮ್ಮ ಮನೆಯ ಜಿಮ್‌ನಲ್ಲಿ ಟ್ರೆಡ್ ಮಿಲ್ ಮಾಡುವಾಗ ಎದೆ ನೋವಿನಿಂದ ಅಸ್ವಸ್ಥಗೊಂಡಿದ್ದರು.

ಗಂಗೂಲಿಯ ಪೂರ್ವಿಕರು ಹೃದಯ ಸಂಬಂಧಿತ 'ಇಷ್ಕೆಮಿಯಾ' ಎಂದರೆ ಕಡಿಮೆ ರಕ್ತ ಪೂರೈಕೆಯ ಇಸ್ಕೆಮಿಕ್ ಹಾರ್ಟ್ ಡಿಸೀಸ್ (ಐಎಚ್‌ಡಿ) ಖಾಯಿಲೆ ಹೊಂದಿದ್ದರು. ಪ್ಲೇಕ್ (ಪ್ಲೇಕ್) ಎಂಬ ಪದಾರ್ಥವು ರಕ್ತನಾಳಗಳ ಒಳಗೆ ನಿರ್ಮಾಣವಾಗಿ ರಕ್ತದ ಸಾಮಾನ್ಯ ಹರಿವನ್ನು ನಿರ್ಬಂಧಿಸುತ್ತದೆ. ಸೌರವ್ ಅವರಿಗೆ ಇದೇ ಕಾರಣದಿಂದ ಹೃದಯ ಸ್ತಂಭನ ಸಂಭವಿಸಿದೆ ಎಂದು ಹೆಲ್ತ್​ ಬುಲೆಟ್​ನಲ್ಲಿ ತಿಳಿಸಲಾಗಿದೆ.

ಮಧ್ಯಾಹ್ನ 1 ಗಂಟೆ ವೇಳೆಗೆ ಆಸ್ಪತ್ರೆಗೆ ದಾಖಲಾದಾಗ ಅವರ ನಾಡಿಮಿಡಿತ ನಿಮಿಷಕ್ಕೆ 70 ಬಾರಿ ಬಡಿದುಕೊಳ್ಳುತ್ತಿತ್ತು. ರಕ್ತದ ಒತ್ತಡ (ಬಿಪಿ) 130/80 ಎಂಎಂ ಮತ್ತು ಇತರ ಕ್ಲಿನಿಕಲ್​​​ ಪ್ಯಾರಾಮೀಟರ್​ಗಳು​ ಸಾಮಾನ್ಯ ಮಿತಿಯಲ್ಲಿದ್ದವು. ಇಸಿಜಿಯಲ್ಲಿ ನರಗಳ ಚಲನೆಯ ಸ್ಪಾಸ್ಮೊಡಿಕ್ ಟಾರ್ಟಿಕೊಲಿಸ್ (ಎಸ್​ಟಿ) ಅನೈಚ್ಛಿಕವಾಗಿ ಮೇಲ್ಮುಖವಾಗಿ ಇರುವುದು ಕಂಡು ಬಂತು.

ಆಮ್ಲಜನಕಯುಕ್ತ ರಕ್ತ ಪರಿಚಲನೆಯ ಎಡ ಹೃದಯ ಕವಾಟದಲ್ಲಿ ಸೌಮ್ಯತೆಯ ಕ್ರಿಯೆ ಕಂಡು ಬಂದಿದೆ. ಹೃದಯವು ಸ್ಥಿರವಾದ ದರದಲ್ಲಿ ರಕ್ತ ಪಂಪ್ ಮಾಡುತ್ತಿದ್ದು, ದೇಹದಲ್ಲಿ ರಕ್ತದ ಪರಿಚಲನೆ ಉತ್ತಮವಾಗಿದೆ. ಡ್ಯುಯಲ್ ಆ್ಯಂಟಿ ಪ್ಲೇಟ್‌ಲೆಟ್‌ ಡೋಸ್​ ತೆಗೆದುಕೊಂಡಿದ್ದಾರೆ. ಈಗ ಗಂಗೂಲಿ ಅವರು ಪ್ರಾಥಮಿಕ ಆಂಜಿಯೋಪ್ಲ್ಯಾಸ್ಟಿಗೆ ಒಳಗಾಗುತ್ತಿದ್ದಾರೆ ಎಂದು ಹೆಲ್ತ್​ ಬುಲೆಟಿನ್​ನಲ್ಲಿ ವೈದ್ಯರು ತಿಳಿಸಿದ್ದಾರೆ.

ಇದನ್ನೂ ಓದಿ: 'ಬೇಗ ಗುಣಮುಖರಾಗಿ': ಗಂಗೂಲಿ ಚೇತರಿಕೆಗೆ ಕೊಹ್ಲಿ, ವೀರೂ​ ಸೇರಿ ಗಣ್ಯಾತಿಗಣ್ಯರ ಹಾರೈಕೆ

Last Updated : Jan 2, 2021, 4:43 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.