ಹೈದರಾಬಾದ್: ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ನ ಇನ್ನಿಂಗ್ಸ್ವೊಂದರಲ್ಲಿ ಅತಿಹೆಚ್ಚು ರನ್ ಸಿಡಿಸಿರುವ ವೆಸ್ಟ್ ಇಂಡೀಸ್ ಕ್ರಿಕೆಟ್ ದಿಗ್ಗಜ ಬ್ರಿಯಾನ್ ಲಾರಾ(400) ದಾಖಲೆ ಮುರಿಯುವ ಅವಕಾಶ ಸಿಗಬಹುದು ಎಂದು ಆಸೀಸ್ ತಂಡದ ಸ್ಫೋಟಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಹೇಳಿದ್ರು.
ಪಾಕಿಸ್ತಾನದ ವಿರುದ್ಧ ನಡೆದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಅಬ್ಬರಿಸಿದ್ದ ವಾರ್ನರ್ 335 ರನ್ ಗಳಿಸಿ ಔಟ್ ಆಗದೆ ಕ್ರಿಸ್‌ನಲ್ಲಿ ಉಳಿದಿದ್ದರು. ತಂಡದ ನಾಯಕ ಟಿಮ್ ಪೇನ್ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದ್ದರಿಂದ ವಾರ್ನರ್ಗೆ ಹೊಸ ಇತಿಹಾಸ ಸೃಷ್ಟಿಸಲು ಸಾಧ್ಯವಾಗಲಿಲ್ಲ.
- " class="align-text-top noRightClick twitterSection" data="
">
ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಗಾಲ್ಫ್ ಪಂದ್ಯದ ವೇಳೆ ಲಾರಾ ಮತ್ತು ವಾರ್ನರ್ ಮುಖಾಮುಖಿಯಾಗಿದ್ದಾರೆ. ಈ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಫೋಟೋ ಹಂಚಿಕೊಂಡಿರುವ ವಾರ್ನರ್ 'ದಿಗ್ಗಜ ಲಾರಾ ಅವರನ್ನ ಭೇಟಿಯಾಗಿದ್ದು ಖುಷಿ ಕೊಟ್ಟಿದೆ. ಬಹುಶಃ ಮುಂದೊಂದು ದಿನ ಅವರ 400 ರನ್ಗಳ ದಾಖಲೆ ಬ್ರೇಕ್ ಮಾಡುವ ಅವಕಾಶ ದೊರಕಬಹುದು' ಎಂದು ಬರೆದುಕೊಂಡಿದ್ದಾರೆ.
- View this post on Instagram
735 Not Out! @davidwarner31 congrats!! #AustralianOpengolf #AustralianG.C #lefthanders
">
ಅದೇ ಫೋಟೋವನ್ನ ಹಂಚಿಕೊಂಡಿರುವ ಲಾರಾ '735 ನಾಟ್ಔಟ್' ಎಂದು ಬರೆದುಕೊಂಡಿದ್ದಾರೆ.