ETV Bharat / sports

ದಕ್ಷಿಣ ಆಫ್ರಿಕಾ ವಿರುದ್ಧ ಮುಂದುವರಿದ ಕನ್ನಡಿಗನ​ ಅಬ್ಬರ... ಭರ್ಜರಿ ದ್ವಿಶತಕ ಸಿಡಿಸಿದ ಮಯಾಂಕ್​​​ - ದಕ್ಚಿಣ ಆಫ್ರಿಕಾ-ಭಾರತ ಟೆಸ್ಟ್​ ಕ್ರಿಕೆಟ್​

ರೋಹಿತ್​ ಶರ್ಮಾ ಜೊತೆ ದಾಖಲೆಯ ಜೊತೆಯಾಟ ಪ್ರದರ್ಶನ ನೀಡಿದ್ದ ಅಗರ್​ವಾಲ್​ ತಮ್ಮ ಚೊಚ್ಚಲ ಶತಕವನ್ನೇ ದ್ವಿಶತಕವಾಗಿ ಪರಿವರ್ತಿಸಿದ್ದಾರೆ.

ಮಯಾಂಕ್​
author img

By

Published : Oct 3, 2019, 2:22 PM IST

Updated : Oct 3, 2019, 2:29 PM IST

ವಿಶಾಖಪಟ್ಟಣ: ಭಾರತ ತಂಡದ ಪರ ಭಾರತದ ನೆಲದಲ್ಲಿ ಮೊದಲ ಪಂದ್ಯವಾಡುತ್ತಿರುವ ಕರ್ನಾಟಕದ ಮಯಾಂಕ್​ ಅಗರ್​ವಾಲ್​ ವೃತ್ತಿ ಜೀವನದ ಮೊದಲ ಶತಕವನ್ನೇ ದ್ವಿಶತಕವಾಗಿ ಪರಿವರ್ತಿಸಿಕೊಂಡಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧ ವಿಶಾಖಪಟ್ಟಣದ ವೈ ಎಸ್​ ರಾಜಶೇಖರ್​ ರೆಡ್ಡಿ ಕ್ರೀಡಾಂಗಣದಲ್ಲಿ ನಡೆಯುತ್ತಿರವ ಮೊದಲ ಪಂದ್ಯದಲ್ಲಿ ರೋಹಿತ್​ ಜೊತೆಗೂಡಿ ದಾಖಲೆಯ 317 ರನ್​ಗಳ ಜೊತೆಯಾಟ ನೀಡಿದ ಅಗರ್​ವಾಲ್, ​ ಹಿಟ್​ಮ್ಯಾನ್​ ರೋಹಿತ್​ ಔಟಾದ ನಂತರವೂ ತಮ್ಮ ಅಬ್ಬರದ ಬ್ಯಾಟಿಂಗ್​ ಮುಂದುವರಿಸಿ ಚೊಚ್ಚಲ ಟೆಸ್ಟ್​ ಶತಕವನ್ನೇ ದ್ವಿಶತಕವನ್ನಾಗಿ ಪರಿವರ್ತಿಸಿದ್ದಾರೆ.

206 ಎಸೆತಗಳಲ್ಲಿ ಶತಕ ತಲುಪಿದ್ದ ಮಯಾಂಕ್​ 358 ಎಸೆತಗಳಲ್ಲಿ ದ್ವಿಶತಕ ಸಾಧನೆ ಮಾಡಿದರು. ಇವರ ಇನ್ನಿಂಗ್ಸ್​ನಲ್ಲಿ 22 ಬೌಂಡರಿ ಹಾಗೂ 5 ಸಿಕ್ಸರ್​ ಸೇರಿದ್ದವು.

2018 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್​ಗೆ ಪದಾರ್ಪಣೆ ಮಾಡಿದ್ದರು. ಈ ದ್ವಿಶತಕಕ್ಕೂ ಮೊದಲು 3 ಅರ್ಧಶತಕಗಳಿಸಿದ್ದರು ಎನ್ನುವುದು ವಿಶೇಷ.

Intro:Body:Conclusion:
Last Updated : Oct 3, 2019, 2:29 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.