ETV Bharat / sports

ಒಂದೇ ಇನ್ನಿಂಗ್ಸ್​​ನಿಂದ ಆತನ ಸಾಮರ್ಥ್ಯ ಅಳೆಯಲಾಗದು: ಗಂಗೂಲಿ ವಿಶ್ಲೇಷಣೆ - india vs south africa

ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್​​ ಪಂದ್ಯದಲ್ಲಿ ಮಯಾಂಕ್​ ಅಗರವಾಲ್​ ಮೊದಲ ಇನ್ನಿಂಗ್ಸ್​​ನಲ್ಲಿ ಅದ್ಭುತ ದ್ವಿಶತಕ ಸಿಡಿಸಿದ್ದು, ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾಜಿ ಕ್ಯಾಪ್ಟನ್​ ಸೌರವ್​ ಗಂಗೂಲಿ ಮಾತನಾಡಿದ್ದಾರೆ.

ಮಯಾಂಕ್​ ಅಗರವಾಲ್​,ರೋಹಿತ್​ ಶರ್ಮಾ
author img

By

Published : Oct 5, 2019, 4:16 PM IST

ವಿಶಾಖಪಟ್ಟಣಂ: ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಮೊದಲ ಟೆಸ್ಟ್​​ ಪಂದ್ಯದಲ್ಲಿ ಬೆಂಗಳೂರಿನ ಹುಡುಗ ಮಯಾಂಕ್​ ಅಗರವಾಲ್ ಬರೋಬ್ಬರಿ 215 ರನ್​​ ಸಿಡಿಸಿದ್ದರು. ಅವರ ಅದ್ಭುತ ಆಟಕ್ಕೆ ಎಲ್ಲೆಡೆಯಿಂದ ಪ್ರಶಂಸೆಗಳ ಸುರಿಮಳೆಗೈಯಲಾಗಿತ್ತು. ಆದರೆ ಎರಡನೇ ಇನ್ನಿಂಗ್ಸ್​​ನಲ್ಲಿ ಕೇವಲ 7ರನ್​ ಗಳಿಸಿದ ವಿಕೆಟ್​ ಒಪ್ಪಿಸಿದ್ದಾರೆ. ಯುವ ಆಟಗಾರನ ಕ್ರಿಕೆಟಿಂಗ್ ಕೌಶಲದ ಬಗ್ಗೆ ಸೌರವ್‌ ಗಂಗೂಲಿ ಪ್ರತಿಕ್ರಿಯಿಸಿದ್ದಾರೆ.

ಮಯಾಂಕ್​ ಅಗರವಾಲ್​ ಆಡಿರುವ ಕೇವಲ ಒಂದೇ ಇನ್ನಿಂಗ್ಸ್​​ನಿಂದ ಅವರ ಸಾಮರ್ಥ್ಯ ಅಳಿಯಲು ಸಾಧ್ಯವಿಲ್ಲ. ಇನ್ನೂ ಕೆಲವು ಇನ್ನಿಂಗ್ಸ್​ನಲ್ಲಿ ಅವರು ಬ್ಯಾಟ್​ ಬೀಸಿದಾಗ ಮಾತ್ರ ನಿಜವಾದ ಸಾಮರ್ಥ್ಯ ಗೊತ್ತಾಗಲಿದೆ ಎಂದಿದ್ದಾರೆ.

Sourav Ganguly
ಸೌರವ್​ ಗಂಗೂಲಿ

ಕೇವಲ ಒಂದೇ ಪಂದ್ಯದಲ್ಲಿ ಶತಕ ಬಾರಿಸುತ್ತಿದ್ದಂತೆ ಆತ ಟೆಸ್ಟ್​ ಕ್ರಿಕೆಟ್​ ಆರಂಭಿಕನಾಗಬಹುದು ಎಂದು ಮಾತನಾಡುವುದು ಸರಿಯಲ್ಲ. ಮುಂದಿನ ಪಂದ್ಯಗಳಲ್ಲಿ ಕಳಪೆ ಬ್ಯಾಟಿಂಗ್​ ಪ್ರದರ್ಶನ ತೋರಿದಾಗ ಟೀಕೆಗಳೂ ಶುರುವಾಗುತ್ತವೆ ಎಂದರು.

Mayank Agarwal
ರೋಹಿತ್, ಮಯಾಂಕ್​

ಯುವ ಕ್ರಿಕೆಟಿಗನ ಅಮೋಘ ಪ್ರದರ್ಶನ ಭಾರತ ತಂಡಕ್ಕೆ ಒಳ್ಳೆಯದೇ. ಆಸ್ಟ್ರೇಲಿಯಾ ನೆಲದಲ್ಲೂ ಮಯಾಂಕ್​ ಉತ್ತಮವಾಗಿ ಬ್ಯಾಟ್​ ಬೀಸಿದ್ದರು. ಆದರೆ ವಿಂಡೀಸ್​ ಟೂರ್ನಿಯಲ್ಲಿ ಸ್ವಲ್ಪ ಸಮಸ್ಯೆ ಅನುಭವಿಸಿದ್ದರು. ಇದೀಗ ದಕ್ಷಿಣ ಆಫ್ರಿಕಾ ವಿರುದ್ಧ ದ್ವಿಶತಕ ಸಿಡಿಸಿದ್ದು, ಮುಂದಿನ ಇನ್ನಿಂಗ್ಸ್​​ನಲ್ಲಿ ಅವರ ಸಾಮರ್ಥ್ಯ ಎಂಬುದು ಗೊತ್ತಾಗುತ್ತದೆ. ಇದು ರೋಹಿತ್​ ಶರ್ಮಾಗೂ ಅನ್ವಯವಾಗುತ್ತದೆ ಎಂದು ಕಿವಿಮಾತು ಹೇಳಿದ್ರು.

Intro:Body:

ಮಯಾಂಕ್​ ಒಂದೇ ಇನ್ನಿಂಗ್ಸ್​​ನಿಂದ ಆತನ ಸಾಮರ್ಥ್ಯ ಅಳಿಯಲು ಸಾಧ್ಯವಿಲ್ಲ: ಗಂಗೂಲಿ

ವಿಶಾಖಪಟ್ಟಣಂ: ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಮೊದಲ ಟೆಸ್ಟ್​​ ಪಂದ್ಯದಲ್ಲಿ ಕನ್ನಡಿಗ ಮಯಾಂಕ್​ ಅಗರವಾಲ್ ಮೊದಲ ಇನ್ನಿಂಗ್ಸ್​​ನಲ್ಲಿ​ ಅದ್ಭತ ಪ್ರದರ್ಶನ ನೀಡಿ, 215ರನ್​​ ಸಿಡಿಸಿ ವಿಕೆಟ್​ ಒಪ್ಪಿಸಿದ್ದರು. ಅವರ ಈ ಒಂದು ಇನ್ನಿಂಗ್ಸ್​​ಗೆ ಎಲ್ಲಡೆಯಿಂದ ಪ್ರಶಂಸೆಗಳ ಸುರಿಮಳೆಗೈಯಲಾಗಿತ್ತು. 

ಇದೀಗ ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್​ ಸೌರವ್​ ಗಂಗೂಲಿ ಸಹ ಇದೇ ವಿಷಯವಾಗಿ ಮಾತನಾಡಿದ್ದಾರೆ. ಮಯಾಂಕ್​ ಅಗರವಾಲ್​ ಆಡಿರುವ ಕೇವಲ ಒಂದೇ ಇನ್ನಿಂಗ್ಸ್​​ನಿಂದ ಅವರ ಸಾಮರ್ಥ್ಯ ಅಳಿಯಲು ಸಾಧ್ಯವಿಲ್ಲ. ಇನ್ನು ಕೇಲವು ಇನ್ನಿಂಗ್ಸ್​​ಗಳಲ್ಲಿ ಅವರು ಬ್ಯಾಟ್​ ಬೀಸಿದಾಗ ಮಾತ್ರ ನಿಜವಾದ ಸಾಮರ್ಥ್ಯದ ಬಗ್ಗೆ ಗೊತ್ತಾಗಲಿದೆ ಎಂದಿದ್ದಾರೆ. 

ಕೇವಲ ಒಂದೇ ಪಂದ್ಯದಲ್ಲಿ ಶತಕ ಸಿಡಿಸುತ್ತಿದ್ದಂತೆ ಆತ ಟೆಸ್ಟ್​ ಕ್ರಿಕೆಟ್​ ಆರಂಭಿಕನಾಗಬಹುದು ಎಂದು ಮಾತನಾಡುವುದು ಸರಿಯಲ್ಲ. ಮುಂದಿನ ಕೆಲವೊಂದು ಪಂದ್ಯಗಳಲ್ಲಿ ಕಳಪೆ ಬ್ಯಾಟಿಂಗ್​ ಪ್ರದರ್ಶನ ತೋರಿದಾಗ ಟೀಕೆಗಳು ಶುರುವಾಗುತ್ತವೆ. 

ಯುವ ಕ್ರಿಕೆಟಿಗ ಅದ್ಭುತವಾದ ಕ್ರಿಕೆಟ್​ ಆಡುತ್ತಿದ್ದಂತೆ ಟೀಂ ಇಂಡಿಯಾಗೆ ಅದು ಒಳ್ಳೆಯದು. ಆಸ್ಟ್ರೇಲಿಯಾ ನೆಲದಲ್ಲೂ ಮಯಾಂಕ್​ ಉತ್ತಮವಾಗಿ ಬ್ಯಾಟ್​ ಬೀಸಿದ್ದರು. ಆದರೆ ವೆಸ್ಟ್​ ಇಂಡೀಸ್​ ಟೂರ್ನಿಯಲ್ಲಿ ಸ್ವಲ್ಪ ಸಮಸ್ಯೆ ಅನುಭವಿಸಿದ್ದರು. ಆದರೆ ಇದೀಗ ದಕ್ಷಿಣ ಆಫ್ರಿಕಾ ವಿರುದ್ಧ ದ್ವಿಶತಕ ಸಿಡಿಸಿದ್ದು, ಮುಂದಿನ ಇನ್ನು ಕೆಲ ಇನ್ನಿಂಗ್ಸ್​​ನಲ್ಲಿ ಅವರು ಆಡುವುದರಿಂದ ಅವರ ಬ್ಯಾಟಿಂಗ್​​ ಸಾಮರ್ಥ್ಯ ಏನು ಎಂಬುದು ಗೊತ್ತಾಗುತ್ತದೆ. ಇದು ರೋಹಿತ್​ ಶರ್ಮಾಗೂ ಅನ್ವಯವಾಗುತ್ತದೆ ಎಂದು ಹೇಳಿದ್ದಾರೆ. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.