ವೆಲ್ಲಿಂಗ್ಟನ್: ನ್ಯೂಜಿಲ್ಯಾಂಡ್ ವಿರುದ್ಧ ನಾಳೆಯಿಂದ ಆರಂಭಗೊಳ್ಳಲಿರುವ ಮೂರು ಏಕದಿನ ಪಂದ್ಯಗಳ ಸರಣಿ ಹಾಗೂ ಟೆಸ್ಟ್ ಸರಣಿಯಿಂದ ಆರಂಭಿಕ ಆಟಗಾರ ರೋಹಿತ್ ಶರ್ಮಾ ಹೊರಬಿದ್ದಿರುವ ಕಾರಣ ಅವರ ಸ್ಥಾನಕ್ಕೆ ಕನ್ನಡಿಗ ಮಯಾಂಕ್ ಅಗರವಾಲ್ ಆಯ್ಕೆಗೊಂಡಿದ್ದಾರೆ.
-
NEWS : Rohit Sharma has been ruled out of the upcoming ODI and the Test series against New Zealand.
— BCCI (@BCCI) February 4, 2020 " class="align-text-top noRightClick twitterSection" data="
Mayank Agarwal has been named as his replacement in the ODI squad. #NZvIND #TeamIndia pic.twitter.com/AUMeCSNfWQ
">NEWS : Rohit Sharma has been ruled out of the upcoming ODI and the Test series against New Zealand.
— BCCI (@BCCI) February 4, 2020
Mayank Agarwal has been named as his replacement in the ODI squad. #NZvIND #TeamIndia pic.twitter.com/AUMeCSNfWQNEWS : Rohit Sharma has been ruled out of the upcoming ODI and the Test series against New Zealand.
— BCCI (@BCCI) February 4, 2020
Mayank Agarwal has been named as his replacement in the ODI squad. #NZvIND #TeamIndia pic.twitter.com/AUMeCSNfWQ
ಟೆಸ್ಟ್ ಕ್ರಿಕೆಟ್ನಲ್ಲಿ ಈಗಾಗಲೇ ಮಿಂಚು ಹರಿಸಿರುವ ಕನ್ನಡಿಗ ಮಯಾಂಕ್ ಅಗರವಾಲ್ ಇದೀಗ ಏಕದಿನ ಪಂದ್ಯದಲ್ಲೂ ಆರಂಭಿಕರಾಗಿ ಕಣಕ್ಕಿಳಿಯಲಿದ್ದು, ಮಿಂಚು ಹರಿಸುವ ಸಾಧ್ಯತೆ ದಟ್ಟವಾಗಿದೆ. ಟೀಂ ಇಂಡಿಯಾ ಪರ ಆರಂಭಿಕರಾಗಿ ಕಣಕ್ಕಿಳಿಯುತ್ತಿದ್ದ ಶಿಖರ್ ಧವನ್ ಹಾಗೂ ರೋಹಿತ್ ಶರ್ಮಾ ಗಾಯಗೊಂಡು ಹೊರಬಿದ್ದಿರುವ ಕಾರಣ ಆರಂಭಿಕರಾಗಿ ಮಯಾಂಕ್ ಅಗರವಾಲ್ ಕಣಕ್ಕಿಳಿಯಲಿದ್ದು, ಅವರಿಗೆ ಪೃಥ್ವಿ ಶಾ ಸಾಥ್ ನೀಡುವ ಸಾಧ್ಯತೆ ಇದೆ.
-
Kane Williamson ruled out of first two ODIs against India
— ANI Digital (@ani_digital) February 4, 2020 " class="align-text-top noRightClick twitterSection" data="
Read @ANI story | https://t.co/D4u2vhyCzi pic.twitter.com/OPy34FB6zz
">Kane Williamson ruled out of first two ODIs against India
— ANI Digital (@ani_digital) February 4, 2020
Read @ANI story | https://t.co/D4u2vhyCzi pic.twitter.com/OPy34FB6zzKane Williamson ruled out of first two ODIs against India
— ANI Digital (@ani_digital) February 4, 2020
Read @ANI story | https://t.co/D4u2vhyCzi pic.twitter.com/OPy34FB6zz
ಆರಂಭಿಕರಾಗಿ ಮಯಾಂಕ್-ಪೃಥ್ವಿ ಶಾ!?: ಸುದ್ದಿಗೋಷ್ಠಿ ವೇಳೆ ಕೆಎಲ್ ರಾಹುಲ್ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸಲಿದ್ದಾರೆ ಎಂದು ಕ್ಯಾಪ್ಟನ್ ವಿರಾಟ್ ಕೊಹ್ಲಿ ಹೇಳಿದ್ದು, ಆರಂಭಿಕರಾಗಿ ಪೃಥ್ವಿ ಶಾ ಇನ್ನಿಂಗ್ಸ್ ಆರಂಭಿಸಲಿದ್ದಾರೆ ಎಂದು ತಿಳಿಸಿದ್ದಾರೆ. ಹೀಗಾಗಿ ಶಾ ಜತೆ ಮಯಾಂಕ್ ಅಗರವಾಲ್ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಒಂದು ವೇಳೆ, ರಾಹುಲ್ ಆರಂಭಿಕರಾಗಿ ಕಣಕ್ಕಿಳಿದರೆ ಮಯಾಂಕ್ ಹೆಚ್ಚುವರಿ ಓಪನರ್ ಆಗಿ ಉಳಿದುಕೊಳ್ಳಬೇಕಾಗುತ್ತದೆ. ಮಯಾಂಕ್ ಈ ಹಿಂದೆಯೂ ಭಾರತ ತಂಡದಲ್ಲಿ ಕಾಯ್ದಿರಿಸಲ್ಪಟ್ಟ ಆರಂಭಿಕ ಬ್ಯಾಟ್ಸ್‌ಮನ್ ಆಗಿ ಸ್ಥಾನ ಪಡೆದಿದ್ದರು. ವೆಸ್ಟ್ ಇಂಡೀಸ್ ವಿರುದ್ಧದ ಸರಣಿ ವೇಳೆ ಶಿಖರ್ ಧವನ್ ಗಾಯಗೊಂಡಿದ್ದ ಸಂದರ್ಭದಲ್ಲಿ ಮಯಾಂಕ್ ಭಾರತ ಏಕದಿನ ಕ್ರಿಕೆಟ್ ತಂಡಕ್ಕೆ ಮೊದಲ ಬಾರಿ ಬುಲಾವ್ ಪಡೆದಿದ್ದರು.
ಈ ನಡುವೆ ನ್ಯೂಜಿಲ್ಯಾಂಡ್ ತಂಡದ ಕ್ಯಾಪ್ಟನ್ ಕೇನ್ ವಿಲಿಯಮ್ಸನ್ ಮೊದಲೆರಡು ಏಕದಿನ ಪಂದ್ಯಗಳಿಂದ ಹೊರಬಿದ್ದಿರುವ ಕಾರಣ, ಕಿವೀಸ್ ತಂಡವನ್ನ ಟಾಮ್ ಲ್ಯಾಥಮ್ ಮುನ್ನಡೆಸುವ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.
ಟೀಂ ಇಂಡಿಯಾ ಇಂತಿದೆ: ವಿರಾಟ್ ಕೊಹ್ಲಿ-ಕ್ಯಾಪ್ಟನ್, ಮಯಾಂಕ್ ಅಗರವಾಲ್,ಪೃಥ್ವಿ ಶಾ,ಕೆಎಲ್ ರಾಹುಲ್,ಶ್ರೇಯಸ್ ಅಯ್ಯರ್,ಮನೀಷ್ ಪಾಂಡೆ,ರಿಷಭ್ ಪಂತ್(ವಿ.ಕೀ), ಶಿವಂ ದುಬೆ,ಕುಲ್ದೀಪ್ ಯಾದವ್,ಯಜುವೇಂದ್ರ ಚಹಾಲ್,ರವೀಂದ್ರ ಜಡೇಜಾ,ಜಸ್ ಪ್ರೀತ್ ಬುಮ್ರಾ,ಮೊಹಮ್ಮದ್ ಶಮಿ,ನವದೀಪ್ ಸೈನಿ,ಶಾರ್ದೂಲ್ ಠಾಕೂರ್,ಕೇದಾರ್ ಜಾಧವ್