ETV Bharat / sports

ಇಂಗ್ಲೆಂಡ್- ಆಸ್ಟ್ರೇಲಿಯಾ ಮೊದಲ ಏಕದಿನ ಪಂದ್ಯ: ಆಸೀಸ್​ ತಂಡಕ್ಕೆ 19 ರನ್​ಗಳ ಜಯ

author img

By

Published : Sep 12, 2020, 9:42 AM IST

ಇಂಗ್ಲೆಂಡ್- ಆಸೀಸ್ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಗೆಲುವು ದಾಖಲಿಸಿರುವ ಆಸ್ಟ್ರೇಲಿಯಾ ತಂಡ 1-0 ಅಂಕಗಳಿಂದ ಸರಣಿಯಲ್ಲಿ ಮುನ್ನಡೆ ಸಾಧಿಸಿದೆ.

Australia beat England by 19 runs in first ODI
ಆಸೀಸ್​ ತಂಡಕ್ಕೆ 19 ರನ್​ಗಳ ಜಯ

ಮ್ಯಾಂಚೆಸ್ಟರ್: ಇಲ್ಲಿನ ಓಲ್ಡ್ ಟ್ರಾಫರ್ಡ್‌ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ 19 ರನ್‌ಗಳ ರೋಚಕ ಜಯ ದಾಖಲಿಸಿದೆ.

ಆಸೀಸ್​ ನೀಡಿದ್ದ 295 ಸ್ಪರ್ಧಾತ್ಮಕ ಗುರಿ ಬೆನ್ನಟ್ಟಿದ ಆತಿಥೇಯ ತಂಡಕ್ಕೆ ಆರಂಭಿಕ ಆಘಾತ ಎದುರಾಯ್ತು. ಏಳು ರನ್​​ಗಳಿಗೆ ಮೊದಲ ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆಸೀಸ್​ ಬೌಲರ್​ಗಳ ಉತ್ತಮ ಸ್ಪೆಲ್​ನಿಂದಾಗಿ 57 ರನ್​​​ಗಳಿಗೆ ಇಂಗ್ಲೆಂಡ್​ನ ನಾಲ್ವರು ಪ್ರಮುಖ ದಾಂಡಿಗರು ಪೆವಿಲಿಯನ್ ಸೇರಿಕೊಂಡರು.

ಒಂದೆಡೆ ವಿಕೆಟ್​ ಬೀಳುತ್ತಿದ್ದರು ಉತ್ತಮವಾಗಿ ಬ್ಯಾಟ್ ಬೀಸಿದ ಜಾನಿ ಬೈರ್ಸ್ಟೋವ್​ 84 ರನ್​ ಸಿಡಿಸಿ ತಂಡಕ್ಕೆ ಚೇತರಿಕೆ ನೀಡಿದ್ರು. ಬಟ್ಲರ್​ ನಿರ್ಗಮನದ ನಂತರ ಬಂದ ಸ್ಯಾಮ್​ ಬಿಲ್ಲಿಂಗ್ಸ್, ಬೈರ್ಸ್ಟೋವ್ ಜೊತೆಗೂಡಿ ಆಸೀಸ್ ಬೌಲರ್​ಗಳ ಬೆವರಿಳಿಸಿದರು.

🔥 from Archer!#ENGvAUS SCORECARD ▶️ https://t.co/LJBX9MJES3pic.twitter.com/HdOp7qnx4R

— ICC (@ICC) September 11, 2020 ">

ಆಸ್ಟ್ರೇಲಿಯಾ ವೇಗಿಗಳನ್ನು ಸಮರ್ಥವಾಗಿ ಎದುರಿಸಿದ ಸ್ಯಾಮ್ ಬಿಲ್ಲಿಂಗ್ಸ್​ ಏಕದಿನ ಕ್ರಿಕೆಟ್​ನಲ್ಲಿ ಮೊದಲ ಶತಕ ಸಿಡಿಸಿ ಮಿಂಚಿದ್ರು. ತಂಡಕ್ಕೆ ಗೆಲುವಿನ ಸೂಚನೆ ನೀಡಿದ್ದ ಬಿಲ್ಲಿಂಗ್ಸ್​ 118 ರನ್​ ಗಳಿಸಿರುವಾಗ ಮಿಚೆಲ್ ಮಾರ್ಷ್​ಗೆ ವಿಕೆಟ್ ಒಪ್ಪಿಸಿದ್ರು. ನಂತರ ಬಂದ ಯಾವೊಬ್ಬ ಆಟಗಾರರು ಆಂಗ್ಲರಿಗೆ ಗೆಲುವು ತಂದುಕೊಡಲಿಲ್ಲ. ಅಂತಿಮವಾಗಿ ಇಂಗ್ಲೆಂಡ್ ತಂಡ 50 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 275 ರನ್​ ಗಳಿಸಿ 19 ರನ್​​​ಗಳಿಂದ ಸೋಲೊಪ್ಪಿಕೊಂಡಿತು. ಆಸೀಸ್​ ಪರ ಜಂಪಾ 4 ಮತ್ತು ಹೆಜಲ್​ವುಡ್ 3 ವಿಕೆಟ್ ಪಡೆದು ಮಿಂಚಿದ್ರು.

ಇದಕ್ಕೂ ಮೊದಲು ಬ್ಯಾಟಿಂಗ್​ ನಡೆಸಿದ್ದ ಆಸ್ಟ್ರೇಲಿಯಾ ತಂಡ ಮ್ಯಾಕ್ಸ್​ವೆಲ್​ ಅವರ ಸ್ಫೋಟಕ 77 ಮತ್ತು ಮಿಚೆಲ್ ಮಾರ್ಷ್​ ಅವರ 73 ರನ್​ಗಳ ನೆರವಿನಿಂದ 50 ಓವರ್​ಗಳಿಗೆ 9 ವಿಕೆಟ್​ ಕಳೆದುಕೊಂಡು 294 ರನ್​ ಗಳಿಸಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.